ಪುರುಷರಿಗೆ ಹಾಲುಣಿಸಿದ್ರೆ ಸ್ತನ ಕ್ಯಾನ್ಸರ್ ಸಂಭವ ಕಡಿಮೆ ಆಗುತ್ತಾ? ಮೆಡಿಕಲ್ ರಿಪೋರ್ಟ್

By Web DeskFirst Published Oct 31, 2018, 9:16 PM IST
Highlights

ಹೆಣ್ಣು ಕುಲವನ್ನೇ ಕಾಡುವ ಸ್ತನ ಕ್ಯಾನ್ಸರ್ ಬಗ್ಗೆ ಅನೇಕ ಜಾಗೃತಿ ಕಾರ್ಯಕ್ರಮಗಳು ಇಡೀ ಪ್ರಪಂಚದಾದ್ಯಂತ ಜಾರಿಯಲ್ಲಿವೆ. ವಿಶ್ವಸಂಸ್ಥೆ ಸೇರಿ ವಿವಿಧ ಎನ್ ಜಿಒ ಗಳು ಪರಿಹಾರ ಸೂತ್ರಗಳನ್ನು ಜನರಿಗೆ ತಿಳಿಸಿಕೊಡುತ್ತಲೆ ಇವೆ. ಆದರೆ ತಜ್ಞ ವೈದ್ಯರು ಹೇಳಿರುವ ಮಾತನ್ನು ಮಹಿಳೆಯರು ಕೇಳಿಸಿಕೊಳ್ಳಲೇಬೇಕಿದೆ!

ಘಾನಾದ ಕೋರ್ಲೆ ಬು ಆಸ್ಪತ್ರೆಯ ರೇಡಿಯೋಥೆರಫಿ ವೈದ್ಯರು ಕೆಲ ಸ್ತನ ಕ್ಯಾನ್ಸರ್ ಬಗೆಗಿನ ಕೆಲ ಮಿಥ್ಯಗಳನ್ನು ದೂರ ಮಾಡುವ ಮಾತನ್ನಾಡಿದ್ದಾರೆ. ಡಾ. ನಾ ಅಡೋರ್ಕ್ ಕರ್ ಆರ್ಯೆಸ್ಟಿ ಪುರುಷರು ಮತ್ತು ಮಹಿಳೆಯರ ಸ್ತನದ ವಿಚಾರ ಮಾತನ್ನಾಡಿದ್ದಾಡಿದ್ದಾರೆ.

ಪುರುಷರು ಮಹಿಳೆಯರ ಸ್ತನ ನೆಕ್ಕುವುದರಿಂದ ಅಥವಾ ಮಹಿಳೆಯರು ಪುರುಷರಿಗೆ ಹಾಲುಣಿಸುವುದರಿಂದ ಕ್ಯಾನ್ಸರ್ ಬರುವ ಸಂಭವ ಕಡಿಮೆಯಾಗುತ್ತದೆ ಎಂಬ ಮಿಥ್ಯವೊಂದು ಜಾರಿಯಲ್ಲಿದೆ. ಆದರೆ ಇದರಲ್ಲಿ ಯಾವುದೇ ಅರ್ಥ ಇಲ್ಲ. ಈ ತೆರನಾದ ಪ್ರಕ್ರಿಯೆ ಕ್ಯಾನ್ಸರ್ ಸಂಭವ  ಹೆಚ್ಚೂ ಮಾಡಲ್ಲ ಅಥವಾ ಕಡಿಮೆನೂ ಮಾಡಲ್ಲ ಆದರೆ ಮಕ್ಕಳಿಗೆ ಹಾಲುಣಿಸುವುದರಿಂದ ಕ್ಯಾನ್ಸರ್ ಅಪಾಯ ಕೊಂಚ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

ಪುರುಷರು ಮಹಿಳೆಯರ ‘ಆ’ ಜಾಗವನ್ನೇ ದಿಟ್ಟಿಸಲು 3 ಕಾರಣ

ಸ್ತನ ಕ್ಯಾನ್ಸರ್ ಗೆ ಸಂಬಂಧಿಸಿದ ಸೆಮಿನಾರ್ ನಲ್ಲಿ ಮಾತನಾಡಿದ ವೈದ್ಯೆ, ಮಗುವಿಗೆ ಹಾಲುಣಿಸಿದರೆ ಮಹಿಳೆಯರ ದೇಹದಲ್ಲಿ ಕೆಲ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈಸ್ಟ್ರೋಜನ್ ಪ್ರಮಾಣವನ್ನು ಇದು ಕಡಿಮೆ ಮಾಡುತ್ತದೆ. ಇದೇ ಕೆಲಸವನ್ನು ಪುರುಷರೊಂದಿಗೆ ಮಾಡಿದರೆ  ದೇಹದಲ್ಲಿ ಯಾವ ಬದಲಾವಣೆಯೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

click me!