827 ಪೋರ್ನ್ ಸೈಟ್‌ಗೆ ಮುಕ್ತಿ ಕಾಣಿಸಿದ ಕೇಂದ್ರ ಸರಕಾರ, ಕಾರಣ?

By Web Desk  |  First Published Oct 26, 2018, 2:53 PM IST

ಕೆಲ ಅಶ್ಲೀಲ ವೆಬ್ ಸೈಟ್ ಗಳು ಎರಡು ದಿನದಿಂದ ಬಂದ್ ಆಗಿವೆ. ಮೊದಲು ರಿಲಯನ್ಸ್ ಜೀಯೊ ಸೇರಿದಂತೆ ಇತರ ಟೆಲಿಕಾಂ ಸೇವಾ ಕಂಪನಿಗಳು ಬಂದ್ ಮಾಡಿವೆ ಎಂದು ಹೇಳಲಾಗಿತ್ತು. ಆದರೆ ಈಗ ಅಸಲಿ ಕಾರಣ ಗೊತ್ತಾಗಿದೆ.


ನವದೆಹಲಿ(ಅ.26)   827 ಪೋರ್ನ್​ ವೆಬ್​ಸೈಟ್​ಗಳಿಗೆ ಬ್ಯಾನ್ ಪಟ್ಟಿ ನೀಡಲಾಗಿದೆ. ಉತ್ತರಾಖಂಡ್ ಹೈಕೋರ್ಟ್ ಆದೇಶದ ಮೇರೆಗೆ ಅಶ್ಲೀಲತೆ ಹೊಂದಿರುವ 827 ಪೋರ್ನ್​ ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡುವಂತೆ ಇಂಟರ್​ನೆಟ್​ ಸೇವೆ ಒದಗಿಸುವ ಕಂಪನಿಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ.

857 ಪೋರ್ನ್​ ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡುವಂತೆ ಉತ್ತರಾಖಂಡ್ ಹೈಕೋರ್ಟ್ ಕೇಳಿತ್ತು. ಆದರೆ, ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ 827 ವೆಬ್​ಸೈಟ್​ಗಳನ್ನು ಬ್ಲಾಕ್​ ಮಾಡಿದ್ದು, ಉಳಿದ 30 ವೆಬ್​ಸೈಟ್​ಗಳಲ್ಲಿ ಯಾವುದೇ ಅಶ್ಲೀಲತೆ ಕಂಡುಬಂದಿಲ್ಲ ಎಂಬ ವಿವರಣೆ ನೀಡಲಾಗಿದೆ.

Latest Videos

undefined

ಜಿಯೋ ಸಿಮ್'ನಲ್ಲಿ ಎಲ್ಲಾ ಪೋರ್ನ್ ಸೈಟ್ ಬ್ಯಾನ್ !

ಎಲ್ಲಾ ಇಂಟರ್​ನೆಟ್​ ಸೇವಾ ಪರವಾನಗಿ ಹೊಂದಿರುವವರು ತಕ್ಷಣವೇ 827 ಪೋರ್ನ್​ ವೆಬ್​ಸೈಟ್​ಗಳನ್ನು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವಾಲಯ ನಿರ್ದೇಶನದಂತೆ ಹಾಗೂ ಹೈಕೋರ್ಟ್​ ಆದೇಶದಂತೆ ಬ್ಲಾಕ್​ ಮಾಡಬೇಕೆಂದು ಟೆಲಿಕಾಮ್​ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಇಂಟರ್​ನೆಟ್​ ಸೇವೆ ಒದಗಿಸುವ ಕಂಪನಿಗಳಿಗೆ ಕಳುಹಿಸಲಾಗಿದೆ.

ಗಂಡನಿಗೆ ಸೆಕ್ಸ್ ವಿಡಿಯೋ ನೋಡುವ ಚಟ: ಇದಕ್ಕೆ ಮಹಿಳೆ ಏನು ಮಾಡಿದಳು ಗೊತ್ತೆ ?

ಈ ಹಿಂದೆ ಕೂಡ ಕೂಗು ಎದ್ದಿತ್ತು: ಮಕ್ಕಳನ್ನು ಫೋರ್ನೋಗ್ರಫಿಗೆ ಬಳಸಿಕೊಳ್ಳಲಾಗುತ್ತಿದೆ, ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ಚಿತ್ರ ಮಾರಾಟ ಜಾಲವೇ ದೇಶದಲ್ಲಿ ಹುಟ್ಟಿಕೊಂಡಿದೆ ಎಂಬ ಆರೋಪಗಳು ಕೇಳಿ ಬಂದ ನಂತರ ಕೇಂದ್ರ ಸರಕಾರ ಎಲ್ಲ ಸೈಟ್ ಗಳ ನಿಷೇಧಕ್ಕೆ ಮುಂದಾಗಿತ್ತು. ಆದರೆ ಪರ-ವಿರೋಧದ ಅಭಿಪ್ರಾಯದ ನಂತರ ಕೆಲವು ಸೈಟ್ ಗಳ ನಿಷೇಧ ಮಾಡಲಾಗಿತ್ತು. ಇದು ಈಗ ಎರಡನೇ ಹಂತ ಎಂದು ಭಾವಿಸಲಾಗಿದೆ.

click me!