ಆನ್‌ಲೈನ್‌ ಚಿನ್ನ ಖರೀದಿಸೋ ಮುನ್ನವಿರಲಿ ಎಚ್ಚರ..

By Web DeskFirst Published Oct 19, 2018, 4:24 PM IST
Highlights

ಏನೇ ಬೇಕೆಂದರೂ ಕೈ ಬೆರಳ ತುದಿಯಲ್ಲಿ ಆನ್‌ಲೈನ್ ಪ್ರಪಂಚವಿದೆ.  ಇಲ್ಲಿ ಏನು ಬೇಕಾದರೂ ಕೊಳ್ಳಬಹುದು. ತರಕಾರಿ, ಬಟ್ಟೆ, ಮನೆ ಸಾಮಾನು... ಅಷ್ಟೇ ಏಕೆ ಇಲ್ಲಿ ಚಿನ್ನ-ಬೆಳ್ಳೀನೂ ಸಿಗುತ್ತೆ. ಆದರೆ, ಹುಷಾರಾಗಿರುವುದು ಹೇಗೆ?

ಚಿನ್ನ ಕೊಳ್ಳಲು ಅಕ್ಷಯ ತೃತೀಯದವರೆಗೂ ಕಾಯಬೇಕಿಲ್ಲ... ಇಷ್ಟವಾಗಿದ್ದನ್ನು ತಕ್ಷಣವೇ ಕೊಳ್ಳಬಹುದು. ಅಷ್ಟು ಆಫರ್ ಮತ್ತು ಡಿಸೈನ್ ಲಭ್ಯ. ಆನ್‌ಲೈನ್‌ನಲ್ಲಿಯೂ ಚಿನ್ನ ಕೊಳ್ಳೋ ಅವಕಾಶವಿದೆ. ಆದರೆ, ಹಿಂದು ಮುಂದೆ ಮುಟ್ಟಿ ನೋಡಿ, ಚೆಕ್ ಮಾಡಿ ಕೊಳ್ಳುವುದು ಅಸಾಧ್ಯ. ಆದ್ದರಿಂದ ಆನ್‌ಲೈನ್‌ನಲ್ಲಿ ಚಿನ್ನ ಕೊಳ್ಳುವಾಗ ಜಾಗರೂಕರಾಗಿರಬೇಕು.  ಯಾವುದರೆಡೆಗೆ ಹೆಚ್ಚು ಗಮನಿಸಬೇಕು?

  • ಖರೀದಿಸುವಾಗ ವೇರಿಫೈಡ್ ಇ-ವಾಣಿಜ್ಯ ಸೈಟ್‌ಗಳಲ್ಲೇ ಬಂಗಾರ ಕೊಳ್ಳಬೇಕು. ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಮಾರುವ ಸೈಟ್‌ಗಳಿಂದ ದೂರವಿರಿ. 
  • ಚಿನ್ನ ಹಲವಾರು ಕ್ಯಾರೆಟ್ ಗಳಲ್ಲಿ ಲಭ್ಯವಿದೆ..... 24, 22, 18 ಹಾಗೂ 14 ಇದ್ದು.  24 ಕ್ಯಾರೆಟ್ ಒಳ್ಳೆ ಚಿನ್ನವೆಂಬುವುದು ನೆನಪಿರಲಿ. 
  • ಶುದ್ಧ ಚಿನ್ನಕ್ಕೆ ಹಾಲ್‌ಮಾರ್ಕ್ ಇರುತ್ತದೆ. ಕೊಂಡ ಆಭರಣದಲ್ಲಿ BSI ಚಿಹ್ನೆಯನ್ನು ಚೆಕ್ ಮಾಡಿಕೊಳ್ಳಿ. 
  • ಮೇಕಿಂಗ್ ಚಾರ್ಜ್ ಒಬ್ಬರಿಂದ ಮತ್ತೊಬ್ಬರಿಗೆ ಬದಲಾಗುತ್ತದೆ. ಆದುದರಿಂದ ಕೊಳ್ಳುವ ಮುನ್ನ ಎಷ್ಟು ಚಾರ್ಜ್ ಎಂಬುದನ್ನು ಚೆಕ್ ಮಾಡಿಕೊಳ್ಳಿ. 
  • ಕೊಂಡ ಆಭರಣ ಕಟ್ ಆಗಿದ್ದರೆ ತಕ್ಷಣವೇ ಹಿಂದಿರುಗಿಸಿ. 
  • ಪ್ಯಾಕಿಂಗ್ ಬಗ್ಗೆ ಜಾಗ್ರತೆ ಇರಲಿ. ಕೆಲವೊಮ್ಮ ನೋಡಿದ ತಕ್ಷಣ ತಿಳಿಯುತ್ತದೆ ಅದು ನಿಜವಾಗಿಯೂ ನೀವೇ ಆಯ್ಕೆ ಮಾಡಿಕೊಂಡ ಆಭರಣ ಹೌದೋ, ಅಲ್ಲವೋ ಎಂದು. ಈ ಬಗ್ಗೆ ಜಾಗರೂಕರಾಗಿರಿ.
  • ಸುಖಾ ಸುಮ್ಮನೆ ಯಾವುದಾವುದೋ ಆಮೀಷಕ್ಕೆ ಒಳಗಾಗಬೇಡಿ.
click me!