ಹಾರ್ಮೋನ್‌ ಬ್ಯಾಲೆನ್ಸ್‌ಗಿವು ಬೆಸ್ಟ್ ಫುಡ್

By Web Desk  |  First Published Aug 7, 2018, 1:54 PM IST

ದೇಹದ ಯಾವುದೋ ಭಾಗಕ್ಕೆ ಒತ್ತಡ ಹೆಚ್ಚಾದರೆ ಅಥವಾ ಮನಸ್ಸಿಗೆ ಕಿರಿಕಿರಿ ಎನಿಸಿದರೆ ಹಾರ್ಮೋನ್ ಇಂಬ್ಯಾಲೆನ್ಸ್ ಆಗಿದೆ ಎಂದರ್ಥ. ಸುಖಾ ಸುಮ್ಮನೆ ಕಾಡೋ ತಲೆ ನೋವು, ಬೇಡ ಬೇಡವೆಂದರೂ ಇಣಕುವ ಮೊಡವೆ, ಕೂದಲುದರುವುದು, ತೂಕ ಹೆಚ್ಚೋದು ಅಥವಾ ಇಳಿಯೋದು... ಎಲ್ಲವಕ್ಕೂ ಹಾರ್ಮೋನ್ ಅಸಮತೋಲನವೇ ಮುಖ್ಯ ಕಾರಣ.


ಬ್ಲಡ್, ಯೂರಿನ್ ಟೆಸ್ಟ್ ಮಾಡಿಸಿದರೆ ವೈದ್ಯರು ಆ ಮಾತ್ರೆ, ಈ ಮಾತ್ರೆ ಎಂದು ನೂರಾರು ಔಷಧಗಳನ್ನು ಸಜೆಸ್ಟ್ ಮಾಡುತ್ತಾರೆ. ಸುಖಾ ಸುಮ್ಮನೆ ಹಣವೂ ವೇಸ್ಟ್, ಟೈಮೂ ವೇಸ್ಟ್. ಅದಕ್ಕೆ ಕೆಲವು ಮನೆ ಮದ್ದುಗಳಿವೆ. ಅವುಗಳನ್ನು ಸೇವಿಸಿದರೆ, ಹಾರ್ಮೋನ್ ತಾನಾಗಿಯೇ ಬ್ಯಾಲೆನ್ಸ್ ಆಗುತ್ತೆ, ಟ್ರೈ ಮಾಡಿ.

ವಿಟಮಿನ್ 'ಡಿ'

Tap to resize

Latest Videos

ಮೊಟ್ಟೆ , ಮೀನು , ಅಣಬೆ ಮತ್ತ ಇನ್ನಿತರ ಆಹಾರದಲ್ಲಿ ವಿಟಮಿನ್ 'ಡಿ' ಹೆಚ್ಚಿದ್ದು, ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. 

ಮಾಕಾ ರೂಟ್

ಬಹುತೇಕ ಮೂಲಂಗಿಯಂತಿರುವ ಈ ತರಕಾರಿ ಮಹಿಳೆಯರ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಹಾಗೂ ಹಾರ್ಮೋನ್‌ಗಳನ್ನು ಉತ್ಪಾದಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ವಿಧವಿಧವಾಗಿ ಬಳಸಬಹುದಾದ ಈ ತರಕಾರಿ ಅಗತ್ಯ ಹಾರ್ಮೋನ್ ಉತ್ಪಾದಿಸಲು ಸಹಕರಿಸುತ್ತದೆ. ಕಾಲು ಚಮಚ ಮಾಕಾ ಪುಡಿಯನ್ನು ಬೆಚ್ಚಗಿನ ನೀರಿನೊಂದಿಗೆ ಸೇರಿಸಿ, ಕೆಲವು ವಾರ ಸೇವಿಸಿದರೆ ಮೂಡ್ ಬದಲಾವಣೆ ಮತ್ತು ಫಲವತ್ತತೆಯನ್ನು ಕಾಪಾಡುವಂತೆ ಮಾಡುತ್ತದೆ.

ಒಮೆಗಾ- 3 ಫ್ಯಾಟ್ 

ಹಾರ್ಮೋನ್ ನಿಯಂತ್ರಣದಲ್ಲಿಡುತ್ತದೆ ಮತ್ತು ದೇಹದ ತೂಕ ಬದಲಾವಣೆಯಾಗದಂತೆ ತಡೆಯುತ್ತದೆ. ಮೀನಿನಂಥ ಸಮುದ್ರ ಆಹಾರದಲ್ಲಿ ಇದು ಹೆಚ್ಚಾಗಿರುತ್ತದೆ.

ಮೆಂತೆ

ಒಂದು ಚಮಚ ಮೆಂತೆಯನ್ನು ಬಿಸಿ ನೀರಿನಲ್ಲಿ 15 ನಿಮಿಷ ನೆನಸಿಟ್ಟು, ದಿನಕ್ಕೆ 2-3 ಬಾರಿ ಕುಡಿಯಬೇಕು. ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಟ್ಟು, ಅಗತ್ಯ ಹಾರ್ಮೋನ್ ಉತ್ಪಾದಿಸುತ್ತದೆ.

ಕೊಬ್ಬರಿ ಎಣ್ಣೆ

ಕೆಲವು ತಿಂಗಳ ಕಾಲ ಶುದ್ಧ ಕೊಬ್ಬರಿ ಎಣ್ಣೆಯನ್ನು ಸೇವಿಸಬೇಕು. ಅಡುಗೆಗೆ ಸಾಕಷ್ಟು ಕೊಬ್ಬರಿ ಎಣ್ಣೆ ಬಳಸಿದರೆ, ದೇಹಕ್ಕೆ ಅಗತ್ಯ ತೈಲಾಂಶ ದೊರೆತು, ಹಾರ್ಮೋನ್ ಸಮತೋಲನ ಕಾಪಾಡಲು ಸಹಕರಿಸುತ್ತದೆ.

ಕರಿ ಲಕ್ಕಿ / ಲಕ್ಕಿ ಗಿಡ

ಇದನ್ನು ಬಳಸಿದರೆ ಮುಟ್ಟಾಗೋ ಕೆಲವು ದಿನಗಳ ಮುನ್ನ ಕಾಣಿಸಿಕೊಳ್ಳುವ ನೋವು ಕಡಿಮೆಯಾಗುತ್ತದೆ. ಆರೋಗ್ಯಯುತ ಅಂಡಾಣು ಉತ್ಪಾದನೆಗೆ ಹಾಗೂ ಫಲವತ್ತತೆಯನ್ನು ಹೆಚ್ಚಿಸಲು ಇದು ಸಹಕರಿಸುತ್ತದೆ.

ತುಳಸಿ ಎಲೆ

ಬಹುಪಯೋಗಿ ತುಳಸಿ ಬಳಸಿದರೆ, ದೇಹಕ್ಕೆ ಹಲವು ರೀತಿಯಲ್ಲಿ ಸಹಕಾರಿ. ಗರ್ಭಕೋಶದ ಆರೋಗ್ಯ ಸುಧಾರಿಸಿ, ಋತುಸ್ರಾವ ಹಾಗೂ ಗರ್ಭ ಕಟ್ಟಲು ತುಳಸಿ ನೆರವು ನೀಡುತ್ತದೆ. ಸಾಧ್ಯವಾದಷ್ಟು ತುಳಿಸಿ ಸಂಬಂಧಿ ಔಷಧಿಗಳನ್ನು ಸೇವಿಸುವುದು ಒಳಿತು.

ಬೆಣ್ಣೆ ಹಣ್ಣು

ಮುಟ್ಟಿನ ಸಮಯದಲ್ಲಿ ದೇಹಕ್ಕೆ ಶಕ್ತಿ ನೀಡುತ್ತದೆ. ಋತುಸ್ರಾವದ ವೇಳೆ ಕಾಡೋ ಹಾರ್ಮೋನ್ ಸಂಬಂಧಿ ಸಮಸ್ಯೆಗಳನ್ನು ನಿವಾರಿಸುತ್ತದೆ. 

ಅಶ್ವಗಂಧ

ಆಯುರ್ವೆದ ಮೂಲಕೆಯಾದ ಅಶ್ವಗಂಧ ಒತ್ತಡ , ಆಯಾಸ ಮತ್ತು ಆತಂಕವನ್ನು ನಿವಾರಿಸುತ್ತದೆ. ಥೈರಾಯ್ಡ್  ಗ್ರಂಥಿ ಸರಿಯಾಗಿ ಕೆಲಸ ಮಾಡುವಂತೆ ಮಾಡಿ, ಅಗತ್ಯ ಹಾರ್ಮೋನ್‌ಗಳ ಉತ್ಪಾದಿಸುತ್ತದೆ.

click me!