ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಕ್ಕೆ ತೆರಳಿ ಚಂದನ್ ಶೆಟ್ಟಿಅಂಜನೇಯ ಸ್ವಾಮಿ ದರ್ಶನ ಪಡೆದರು | ಮಂಗನನ್ನು ಮೇಲೆ ಕೂರಿಸಿಕೊಂಡು ಸೆಲ್ಫಿಯನ್ನು ತೆಗೆದುಕೊಂಡಿದ್ದಾರೆ
ಗಂಗಾವತಿ (ಅ. 25): ಬಿಗ್ ಬಾಸ್ ವಿಜೇತ ಹಾಗೂ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿಗುರುವಾರ ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಅಂಜನಾದ್ರಿ ಪರ್ವತಾರೋಹಣ ಮಾಡಿ ಆಂಜನೇಯನ ದರ್ಶನ ಮಾಡಿದರು.
ಚಂದನ್ ಶೆಟ್ಟಿ- ನಿವೇದಿತಾ ಗೌಡ ನಿಶ್ಚಿತಾರ್ಥ ಫೋಟೋಗಳಿವು!
ಬೆಂಗಳೂರಿನಿಂದ ಹೊಸಪೇಟೆಗೆ ಸಿನಿಮಾ ಪ್ರೊಡಕ್ಷನ್ ಹೌಸ್ ಪ್ರಾರಂಭೋತ್ಸವಕ್ಕೆ ಬಂದಿದ್ದ ಅವರು ಐತಿಹಾಸಿಕ ಅಂಜನಾದ್ರಿ ಪರ್ವತ ಏರಿ ಅಂಜನೇಯ ಸ್ವಾಮಿ ದರ್ಶನ ಪಡೆದರು. ಈ ವೇಳೆ ಚಂದನ್ ಶೆಟ್ಟಿ ಅಂಜನಾದ್ರಿ ಪರ್ವತದ ಮೇಲೆ ನಿಂತು ವಿವಿಧ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು.
ದಸರಾ ವೇದಿಕೆಯಲ್ಲಿ ಚಂದನ್ ಪ್ರಪೋಸ್; ಟೀಕಿಸಿದವರಿಗೆ ಉತ್ತರ ಕೊಟ್ಟ ನಿವೇದಿತಾ ಗೌಡ!
ತುಂಗಭದ್ರಾ ನದಿಗೆ ಅಧಿಕ ನೀರು ಬಂದು ರಮಣೀಯ ಸ್ಥಳವಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಬೆಟ್ಟದ ಸುತ್ತಲು ಹಚ್ಚ ಹಸಿರು ಪ್ರದೇಶ ಕಂಡು ಸಿನಿಮಾ ಹಾಗೂ ಧಾರವಾಹಿ ಚಿತ್ರೀಕರಣಕ್ಕೆ ಸೂಕ್ತ ಸ್ಥಳ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.