ಅನರ್ಹ ಶಾಸಕರ ಕುರಿತು ಪಕ್ಷದಲ್ಲಿ ಗೊಂದಲ ಇಲ್ಲ|ಉಪ ಚುನಾವಣೆಯಲ್ಲಿ ಗೆಲುವು ನಮ್ಮದೇ| ಬಿಜೆಪಿ ಪಕ್ಷದ ಬಲ 118 ಕ್ಕೆ ಏರಲಿದೆ|ಬಿಜೆಪಿ ಯಾವುದೇ ಭಾವನಾತ್ಮಕ ವಿಷಯಗಳನ್ನು ಜನರ ಮುಂದಿಟ್ಟಿಲ್ಲ|ಕಾಂಗ್ರೆಸ್ ಸುಮ್ಮನೆ ಇದನ್ನು ಪ್ರಚಾರ ಮಾಡುತ್ತಿದೆ|
ಕೊಪ್ಪಳ(ನ.2]: ಉಪ ಚುನಾವಣೆಯಲ್ಲಿ ಅನರ್ಹ ಶಾಸಕರ ಕುರಿತು ಒಂದಿಷ್ಟು ಭಿನ್ನಾಭಿಪ್ರಾಯ ಇದ್ದಿದ್ದನ್ನು ಹೊರತು ಪಡಿಸಿದರೆ ಯಾವುದೇ ಗೊಂದಲಗಳು ಇಲ್ಲ ಎಂದು ಗಣಿಮತ್ತು ಭೂ ವಿಜ್ಞಾನ ಇಲಾಖೆಯ ಸಚಿವ ಸಿ.ಸಿ.ಪಾಟೀಲ ಅವರು ಹೇಳಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ಗೆಲುವು ನಮ್ಮದೇ ಮತ್ತು ಪಕ್ಷದ ಬಲ 118 ಕ್ಕೆ ಏರಲಿದೆ ಎಂದರು. ಅನರ್ಹ ಶಾಸಕರ ಕುರಿತು ವ್ಯತಿರಿಕ್ತ ಹೇಳಿಕೆಯ ಕುರಿತು ಯಡಿಯೂರಪ್ಪ ಅವರು ಬೇಸರ ಮಾಡಿಕೊಂಡಿದ್ದಾರೆ ಎನ್ನುವುದು ಸುಳ್ಳು, ಈ ವಿಷಯದಲ್ಲಿ ಪಕ್ಷದ ಹೈಕಮಾಂಡ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದುವರೆಗಿನ ಪಠ್ಯದಲ್ಲಿ ಟಿಪ್ಪು ಸುಲ್ತಾನನ್ನು ವೈಭವಿಕರಿಸಲಾಗಿದೆಯೇ ಹೊರತು ವಾಸ್ತವ ಅಂಶಗಳನ್ನು ಪಠ್ಯದಲ್ಲಿ ಅಳವಡಿಸಿಲ್ಲ.ಆದರೆ, ಟಿಪ್ಪು ಹಿಂದುಗಳ ಮೇಲೆ ನಡೆಸಿದ ದರ್ಪ, ದೌರ್ಜನ್ಯವನ್ನು ಪರಿಚಯಿಸುವ ಕಾರ್ಯ ಆಗಿಲ್ಲ. ಹೀಗಾಗಿ, ಈ ಕುರಿತು ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಮುಂದಾಗಿದ್ದು, ಇದಕ್ಕೆ ನಮ್ಮ ಸಹಮತ ಇದೆ. ಬಿಜೆಪಿ ಯಾವುದೇ ಭಾವನಾತ್ಮಕ ವಿಷಯಗಳನ್ನು ಜನರ ಮುಂದಿಟ್ಟಿಲ್ಲ. ಕಾಂಗ್ರೆಸ್ ಸುಮ್ಮನೆ ಇದನ್ನು ಪ್ರಚಾರ ಮಾಡುತ್ತಿದೆ. ಇದನ್ನೊಂದು ಬಿಟ್ಟು ಅವರಿಗೆ ಬೇರೆ ಮಾತಿಲ್ಲ. ಅದಕ್ಕಿಂತಲೂ ಕರ್ನಾಟಕದಲ್ಲಿ ಪ್ರವಾಹ ಬಂದಿದೆ. ಜನ ಸಂಕಷ್ಟ ಅನುಭವಿಸಿದ್ದಾರೆ. ಸಿಎಂ ಅವರು ನೆರೆ ಹಾನಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಪರಿಹಾರ ಕಾರ್ಯವೂ ನಡೆದಿದೆ. ನೊಂದವರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ದೇವೇಗೌಡರು ಇನ್ನೆರಡು ತಿಂಗಳಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರುತ್ತೆ ಎನ್ನುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಇನ್ನೂ ಎರಡು ತಿಂಗಳು ಕಾಲಾವಕಾಶವಿದೆಯಲ್ಲ ಕಾದು ನೋಡೋಣ. ಹಿಂದೆ ಕುಮಾರಸ್ವಾಮಿ ಸರ್ಕಾರ ಬೀಳುವಾಗ ಗೌಡರು ಏನು ಹೇಳಿರಲಿಲ್ಲ.ಆದರೂ ಸರ್ಕಾರ ಪತನವಾಯ್ತು. ಗೌಡ್ರ ಬಗ್ಗೆವೈಯಕ್ತಿಕವಾಗಿ ನನಗೆ ಗೌರವವಿದೆ. ಪುತ್ರನ ಸರ್ಕಾರ ಬೀಳುತ್ತೆ ಎನ್ನುವ ಕಲ್ಪನೆ ಅವರಿಗೇಕೆ ಬರಲಿಲ್ಲ ಎಂದರು.
ನೆರೆ ಪರಿಹಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರು ಪರಿಹಾರ ಕೊಟ್ಟಿಲ್ಲಎನ್ನುವುದನ್ನು ತಮ್ಮ ಬದಾಮಿಯಲ್ಲಿಯೇ ತೋರಿಸಿ ಕೊಡಲಿ. ಯಾರಿಗೆ 1 ಲಕ್ಷ ಪರಿಹಾರ ಕೊಟ್ಟಿಲ್ಲ ಎಂದು ಸಾಬೀತು ಪಡಿಸಲಿ. ಪಠ್ಯ ಪುಸ್ತಕ ಕೊಟ್ಟಿಲ್ಲ ಎಂದು ಹೇಳಿದ್ದಾರಲ್ಲ. ಅದನ್ನು ತೋರಿಸಿಕೊಡಲಿ ಎಂದರು.
ಬಿಜೆಪಿ ಹಿಂಬಾಗಿಲಿನ ರಾಜಕಾರಣ ಮಾಡುತ್ತಿದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು ಕಾಂಗ್ರೆಸ್ ಏನು ಮುಂಬಾಗಿಲಿನ ಮೂಲಕ ಅಧಿಕಾರ ಹಿಡಿದಿದೆಯಾ ? ಒಂದು ದಿನವಾದರೂ ಶಾಸಕಾಂಗ ಸಭೆ ನಡೆಸಿ ಮಾತನಾಡಿದ್ದಾರಾ ? 14 ತಿಂಗಳ ಅಧಿಕಾರ ನಡೆಸಿದ್ದಾರಲ್ಲ. ಸರಿಯಾಗಿ ಸಂಸಾರ ನಡೆಸಿದ್ದಾರಾ ? ಎಂದು ಪ್ರಶ್ನೆ ಮಾಡಿದರು. ಮರಳು ನೀತಿಯ ಕುರಿತು ಇನ್ನು ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ. ಗುಜರಾತ ರಾಜ್ಯದಲ್ಲಿ ಮರಳು ತೆಗೆಯುವ ಕುರಿತು ಮಾಹಿತಿ ಪಡೆಯಲಾಗಿದ್ದು, ಚರ್ಚಿಸಿ, ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.