ಬಿಎಸ್‌ವೈಗೆ ತಾಕತ್ತಿದ್ದರೆ ಸರ್ಕಾರ ವಿಸರ್ಜಿಸಲಿ| ಉತ್ತರ ಕರ್ನಾಟಕದ ನೆರೆಗೆ ಕೇಂದ್ರ, ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ| ಬಿಎಸ್‌ವೈಅಡ್ಡ ಹಾದಿ ಹಿಡಿದು ಅಧಿಕಾರಕ್ಕೆ| ಬಹುಮತ ಇಲ್ಲದಿದ್ದರೂ ಬೇರೆ ದಾರಿ ಕಂಡುಕೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ| ತಮಗೆ ನಿಜವಾಗಿಯೂ ತಾಕತ್ತು ಇದ್ದರೆ ಸರ್ಕಾರವನ್ನು ವಿಸರ್ಜನೆ ಮಾಡಿ, ಜನರ ಮುಂದೆ ಹೋಗಿ ಅಧಿಕಾರಕ್ಕೆ ಬರಲಿ|
ಕೊಪ್ಪಳ/ಕುಷ್ಟಗಿ[ಅ.30]: ಕಾಂಗ್ರೆಸ್ ಕಾಯಂ ವಿರೋಧ ಪಕ್ಷ ಸ್ಥಾನದಲ್ಲಿಯೇ ಇರುತ್ತದೆ ಎಂದು ಹೇಳುವ ಯಡಿಯೂರಪ್ಪ ಅವರು ತಾಕತ್ತು ಇದ್ದರೆ ಸರ್ಕಾರ ವಿಸರ್ಜನೆ ಮಾಡಲಿ ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಸವಾಲು ಹಾಕಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಡ್ಡ ಹಾದಿ ಹಿಡಿದು ಅಧಿಕಾರಕ್ಕೆ ಬಂದಿದ್ದಾರೆ. ಬಹುಮತ ಇಲ್ಲದಿದ್ದರೂ ಬೇರೆ ದಾರಿ ಕಂಡುಕೊಂಡು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾರೆ. ತಮಗೆ ನಿಜವಾಗಿಯೂ ತಾಕತ್ತು ಇದ್ದರೆ ಸರ್ಕಾರವನ್ನು ವಿಸರ್ಜನೆ ಮಾಡಿ, ಜನರ ಮುಂದೆ ಹೋಗಿ ಅಧಿಕಾರಕ್ಕೆ ಬರಲಿ ಎಂದು ಸವಾಲು ಹಾಕಿದರು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ರಾಜ್ಯ ಕಂಡ ಉತ್ತಮ ರಾಜಕಾರಣಿಗಳಲ್ಲಿ ಸಿದ್ದರಾಮಯ್ಯ ಒಬ್ಬರು. ಆದರೆ ಅವರ ಬಗ್ಗೆ ಯಡಿಯೂರಪ್ಪ ಹಗುರವಾಗಿ ಮಾತನಾಡಿದ್ದು, ವಿಪಕ್ಷ ನಾಯಕ ಸ್ಥಾನ ಕಾಯಂ ಎಂದು ಜರೆದಿದ್ದಾರೆ.
ಯಡಿಯೂರಪ್ಪ ಅವರಿಗೆ ಅಷ್ಟೊಂದು ಖಾತ್ರಿಯಿದ್ದರೆ ಚುನಾವಣೆಗೆ ಬರಲಿ ಎಂದರು. ಉತ್ತರ ಕರ್ನಾಟಕದಲ್ಲಿ ನೆರೆ ಬಂದಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸ್ಪಂದಿಸುತ್ತಿಲ್ಲ. ಇದರಿಂದ ಸಂತ್ರಸ್ತರ ಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ನಾವು ಅಧ್ಯಯನದ ವರದಿ ನೀಡಿ, ಕೇಂದ್ರಕ್ಕೂ ಒತ್ತಾಯಿಸಿದ್ದೇವೆ. ಸಾಲ ಮನ್ನಾ ಮಾಡಿ, ಮನೆ ಕಟ್ಟಿ ಕೊಡಿ ಎಂದಿದ್ದೇವೆ. ಸಂತ್ರಸ್ತರಿಗೆ 10, 25 ಸಾವಿರ ಕೊಟ್ಟಿದ್ದು ಬಿಟ್ಟರೆ ಮತ್ತೇನೂ ಮಾಡಿಲ್ಲಎಂದರು.
ಟಿಪ್ಪು ವಿಷಯ ಪಠ್ಯದಿಂದ ತೆಗೆಯುವ ಕುರಿತುಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಕೆಜೆಪಿಕಟ್ಟಿದಾಗ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ.ಜಗದೀಶ ಶೆಟ್ಟರ್ ಸಿಎಂ ಆಗಿದ್ದಾಗ ಜಯಂತಿಯಲ್ಲಿ ಪಾಲ್ಗೊಂಡಿದ್ದಾರೆ. ಈಗ ಅವರೇ ಜಯಂತಿ ಆಚರಣೆ ಕೈಬಿಟ್ಟಿದ್ದಾರೆ. ಆಗೊಂದು ಮಾತು, ಈಗೊಂದು ಮಾತು ಎಂದು ಕಿಡಿಕಾರಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕಾಂಗ್ರೆಸ್ ನಾಯಕರ ಮನೆ ಮೇಲೆ ಮಾತ್ರ ಐಟಿ ದಾಳಿಯಾಗುತ್ತಿದೆ. ಹಾಗಾದರೆ ಬಿಜೆಪಿಯವರು ಸತ್ಯ ಹರಿಶ್ಚಂದ್ರರಾ? ಐಟಿ ಅಧಿಕಾರಿಗಳ ಕಣ್ಣಿಗೆ ಇದು ಕಾಣುತ್ತಿಲ್ಲವಾ? ಮಹಾರಾಷ್ಟ್ರ ಚುನಾವಣೆ ಸಂಬಂಧ ಸಾವರ್ಕರ್ ವಿಷಯ ಚರ್ಚೆಗೆ ತಂದರು. ಚುನಾವಣೆ ಬಂದಾಗಷ್ಟೇ ರಾಮ ಮಂದಿರ ವಿಷಯ ಚರ್ಚೆಗೆ ಬರುತ್ತವೆ. ದೇಶದ ಆರ್ಥಿಕ ಸ್ಥಿತಿ ಅಧೋಗತಿಗೆ ಬಂದಿದೆ. ಜನರಿಗೆ ಭಾವನಾತ್ಮಕ ವಿಷಯ ಮುಂದಿಟ್ಟು ಸತ್ಯವನ್ನು ಮರೆ ಮಾಚುತ್ತಿದ್ದಾರೆ ಎಂದರು.
ಜನರು ಕೇಂದ್ರ ಮತ್ತು ರಾಜ್ಯದಲ್ಲಿ 50 ವರ್ಷಕ್ಕೂ ಹೆಚ್ಚು ಕಾಲ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟಿದ್ದಾರೆ. ಏನೋ ಒಂದು ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟು ನೋಡೋಣ ಎಂದು ಈ ಬಾರಿ ಬಿಜೆಪಿಗೆ ಅಧಿಕಾರ ಕೊಟ್ಟಿದ್ದಾರೆ. ಇದನ್ನೇ ಬಿಜೆಪಿಯವರು ಸರಿಯಾಗಿನಿ ಭಾಯಿಸುತ್ತಿಲ್ಲ ಎಂದು ಆಪಾದಿಸಿದರು.
ಬಿಜೆಪಿಯಲ್ಲಿ ಸಾಮರಸ್ಯ ಇಲ್ಲ:
ಸದ್ಯ ಅಧಿಕಾರದಲ್ಲಿರುವ ಬಿಜೆಪಿಯಲ್ಲಿ ಸಾಮರಸ್ಯದ ಕೊರತೆ ಇರುವುದರಿಂದ ಅಧಿಕಾರಕ್ಕಾಗಿ ಕಚ್ಚಾಡುತ್ತಿದ್ದಾರೆ. ಅಧಿಕಾರ ನಡೆಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ ಎನ್ನುವುದರಲ್ಲಿಎರಡು ಮಾತಿಲ್ಲ ಎಂದರು.
ಹೇಳಿಕೆಗೆ ತಿರುಗೇಟು:
ಮಾಜಿ ಸ್ಪೀಕರ್ ಅವರು ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರ ಒತ್ತಡದ ಮೇರೆಗೆ 17 ಜನರನ್ನು ಅನರ್ಹಗೊಳಿಸಿದ್ದಾರೆ ಎನ್ನುವ ಮುಖ್ಯಮಂತ್ರಿಗಳ ಕಾರ್ಯದರ್ಶಿ, ಶಾಸಕ ರೇಣುಕಾಚಾರ್ಯ ಹೇಳಿಕೆಗೆ ವಿ.ಎಸ್. ಉಗ್ರಪ್ಪ ಪ್ರತಿಕ್ರಿಯಿಸಿ, ಸಂವಿಧಾನದ ಅರಿವು ಇಲ್ಲದವರ ಹೇಳಿಕೆಗೆ ಪ್ರತಿಕ್ರಿಯಿಸುವುದು ಸರಿಯಲ್ಲ ಮತ್ತುಅವರು ಈ ರಾಜ್ಯದಲ್ಲಿ ಅಧಿಕಾರದಲ್ಲಿ ಇದ್ದಾಗ ಏನು ಮಾಡಿದ್ದಾರೆ ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ. ಅವರ ಹೆಸರು ಹೇಳಿ ನಾನು ನನ್ನ ಬಾಯಿ ಹೊಲಸು ಮಾಡಿಕೊಳ್ಳುವುದಿಲ್ಲಪ್ಪ ಎಂದರು.