ಕೊಪ್ಪಳ: ಸಚಿವ ಸವದಿ ಕಾಲಿಗೆ ಬಿದ್ದು ಕಣ್ಣೀರಿಟ್ಟ ಅನ್ನದಾತ

By Web Desk  |  First Published Nov 2, 2019, 7:32 AM IST

ಬೆಳೆಗೆ ಪರಿಹಾರ ಕೊಡಿಸುವಂತೆ ಡಿಸಿಎಂ ಲಕ್ಷ್ಮಣ ಸವದಿಯ ಕಾಲಿಗೆ ಬಿದ್ದು ಕಣ್ಣೀರಿಟ್ಟ ರೈತ| ಕುಷ್ಟಗಿ ತಾಲೂಕಿನ ಹುಲಿಯಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಕೆರೆಗಾಗಿ ರೈತರ ಭೂಮಿಯನ್ನು 1985ರ ಲ್ಲೇ ಸ್ವಾಧೀನ ಮಾಡಿಕೊಂಡಿದೆ| ಭೂಮಿ ಸ್ವಾಧೀನ ಪರಿಹಾರ ನೀಡಿದೆ| ಆದರೆ ಕೆರೆಯ ನೀರಿನಿಂದ ಬೆಳೆ ನಷ್ಟವಾಗಿದ| 45  ರೈತರ ಬೆಳೆ ನಷ್ಟ ಪರಿಹಾರಕೊಡುತ್ತಿಲ್ಲ| ಧಾರವಾಡ ಹೈಕೋರ್ಟ್ ಸಹಿತ ಬೆಳೆನಷ್ಟ ಪರಿಹಾರ ಕೊಡುವಂತೆ ಆದೇಶ ಮಾಡಿದೆ| ಆದರೆ ಜಿಲ್ಲಾಡಳಿತ ಬೆಳೆ ನಷ್ಟ ಪರಿಹಾರ ಕೊಡುತ್ತಿಲ್ಲ|


ಕೊಪ್ಪಳ[ನ.2]: ಕೆರೆ ನಿರ್ಮಾಣಕ್ಕೆ ಸ್ವಾಧೀನವಾದ ಭೂಮಿಗೆ ಪರಿಹಾರ ನೀಡಿದ್ದರೂ ಮುಳುಗಡೆಯಾದ ಬೆಳೆಗೆ ಪರಿಹಾರ ಕೊಡಿಸುವಂತೆ ಡಿಸಿಎಂ ಲಕ್ಷ್ಮಣ ಸವದಿಯ ಕಾಲಿಗೆ ಬಿದ್ದು ರೈತ ಮಂಜುನಾಥ ಪುರದ ಕಣ್ಣೀರಿಟ್ಟ ಘಟನೆ ಶುಕ್ರವಾರ ಇಲ್ಲಿ ನಡೆದಿದೆ.

ಜಿಲ್ಲಾ ಕ್ರೀಡಾಂಗಣದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದ ಬಳಿಕ ಅಹವಲು ಸ್ವೀಕರಿಸುವ ವೇಳೆ ಈ ಪ್ರಸಂಗ ನಡೆದಿದೆ. ಕುಷ್ಟಗಿ ತಾಲೂಕಿನ ಹುಲಿಯಾಪುರ ಗ್ರಾಮದಲ್ಲಿ ಜಿಲ್ಲಾಡಳಿತ ಕೆರೆಗಾಗಿ ರೈತರ ಭೂಮಿಯನ್ನು 1985ರ ಲ್ಲೇ ಸ್ವಾಧೀನ ಮಾಡಿಕೊಂಡಿದೆ. ಭೂಮಿ ಸ್ವಾಧೀನ ಪರಿಹಾರ ನೀಡಿದೆ. ಆದರೆ ಕೆರೆಯ ನೀರಿನಿಂದ ಬೆಳೆ ನಷ್ಟವಾಗಿದೆ. ಆಗಿನಿಂದಲೂ ನಾವುಕೇ ಳುತ್ತಾ ಬಂದಿದ್ದೇವೆ. 45  ರೈತರ ಬೆಳೆ ನಷ್ಟ ಪರಿಹಾರಕೊಡುತ್ತಿಲ್ಲ. ಧಾರವಾಡ ಹೈಕೋರ್ಟ್ ಸಹಿತ ಬೆಳೆನಷ್ಟ ಪರಿಹಾರ ಕೊಡುವಂತೆ ಆದೇಶ ಮಾಡಿದೆ. ಆದರೆಜಿಲ್ಲಾಡಳಿತ ಬೆಳೆ ನಷ್ಟ ಪರಿಹಾರ ಕೊಡುತ್ತಿಲ್ಲ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಕಳೆದ 35 ವರ್ಷದಿಂದ ಕೋರ್ಟ್‌ನಲ್ಲಿ ಹೋರಾಟ ಮಾಡುತ್ತಲೇ ಬಂದಿದ್ದೇವೆ. ಕೂಡಲೇ ನಮಗೆ ಬೆಳೆನಷ್ಟ ಪರಿಹಾರ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ರೈತ ಮಂಜುನಾಥ ಡಿಸಿಎಂ ಲಕ್ಷ್ಮಣ್ ಸವದಿ ಕಾಲಿಗೆ ಬಿದ್ದು ಕಣ್ಣೀರಿಟ್ಟರು. ಹೀಗೆ ರೈತ ಏಕಾಏಕಿ ಕಾಲಿಗೆ ಬಿದ್ದು ಕಣ್ಣೀರಿಟ್ಟದ್ದರಿಂದ ಡಿಸಿಎಂ ಸವದಿ ಕಕ್ಕಾಬಿಕ್ಕಿಯಾದರು. ಏನಿದು ಎಂದು ಪೊಲೀಸರನ್ನು ಕೆಂಗಣ್ಣಿನಿಂದ ನೋಡುತ್ತಿದ್ದಂತೆ ಪೊಲೀಸರು ರೈತನನ್ನು ಎಳೆದುಕೊಂಡು ಹೋಗುವ ಪ್ರಯತ್ನ ಮಾಡಿದರು. ಕಾಲಿಗೆ ಬಿದ್ದ ರೈತನನ್ನು ಸಮಾಧಾನ ಮಾಡಿದ ಸವದಿ ಅವರು, ಕೂಡಲೇ ಈಕುರಿತು ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳೊಂದಿಗೆ ಚರ್ಚಿಸಿ, ಏನಾಗಿದೆ ಎಂದು ನೋಡಿ, ಪರಿಹಾರ ನೀಡುವ ತೀರ್ಮಾನ ತೆಗೆದುಕೊಳ್ಳುವುದಾಗಿ ಹೇಳಿ, ಕಾರು ಏರಿ ಸಚಿವರು ಹೊರಟು ಹೋದರು.

click me!