Kanakagiri Utsava 2022 ಕಣ್ಣಿದ್ದವರು ಕನಕಗಿರಿಯ ವಿಜೃಂಭಣೆಯ ಗರಡೋತ್ಸವ ನೋಡಬೇಕು

By Suvarna News  |  First Published Mar 23, 2022, 2:01 PM IST

ಕೊಪ್ಪಳದ ಕನಕಗಿರಿಯಲ್ಲಿರುವ ಶ್ರೀ ಕನಕಾಚಲ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನದ ಗರುಡೋತ್ಸವವು ಮಾರ್ಚ್ 24 ರವರೆಗೆ ಜರುಗಲಿದ್ದು, 24 ರಂದೇ ಮಹಾರಥೋತ್ಸವ ನಡೆಯಲಿದೆ.


ವರದಿ: ದೊಡ್ಡೇಶ್ ಯಲಿಗಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಪ್ಪಳ (ಮಾ.22): ತಿರುಪತಿಯಲ್ಲಿ (Tirupati) ಗರುಡೋತ್ಸವ ಜರುಗುವುದು ಸಾಮಾನ್ಯ. ಆದರೆ ಕೊಪ್ಪಳದ (Koppala) ಗಂಗಾವತಿ (Gangavathi) ತಾಲೂಕಿನಲ್ಲಿರುವ ಕನಕಗಿರಿಯಲ್ಲಿ  (Kanakagiri) ಗರುಡೋತ್ಸವ ( garudotsava ) ಜರುಗುತ್ತದೆ ಅಂದರೆ ನೀವು ನಂಬ್ತೀರಾ, ಹೌದು ನಂಬಲೆಬೇಕು. ಇಂತಹದ್ದೊಂದು ಅಪರೂಪದ ಗರುಡೋತ್ಸವಕ್ಕೆ ಸಾಕ್ಷಿಯಾಗಿದ್ದು, ಕನಕಗಿರಿಯ ಕನಕಾಚಲಪತಿ ದೇವಸ್ಥಾನ. ಕಣ್ಣಿದ್ದವರು ಕನಕಗಿರಿ ನೋಡಬೇಕು, ಕಾಲಿದ್ದವರು ಹಂಪಿ ನೋಡಬೇಕು ಎನ್ನುವ ಮಾತಿದೆ. ಅಂದರೆ ಕನಕಗಿರಿಯ ಶ್ರೀ ಕನಕಾಚಲ ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ (kanaka chalapathi lakshmi narasimha swamy Temple) ಅಷ್ಟೊಂದು ಸುಂದರವಾದ ದೇವಾಲಯವಾಗಿದೆ.

Latest Videos

undefined

ಈ ದೇವಸ್ಥಾನದ ಜಾತ್ರೆ ಮಾರ್ಚ್ 15 ರಿಂದ ಆರಂಭವಾಗಿ ಮಾರ್ಚ್ 24 ರವರೆಗೆ ಜರುಗಲಿದ್ದು, 24 ರಂದೇ ಮಹಾರಥೋತ್ಸವ ನಡೆಯಲಿದೆ. ಜಾತ್ರೆಯ ಹಿನ್ನೆಲೆಯಲ್ಲಿ ಹನುಮೋತ್ಸವ, ಗರಡೋತ್ಸವ ವೈಭವ ಅದ್ದೂರಿಯಾಗಿ ನಡೆಯುತ್ತದೆ. ಇನ್ನು ಕನಕಗಿರಿಯ ಕನಕಾಚಲಪತಿ ದೇವಸ್ಥಾನ ಎರಡನೇ ತಿರುಪತಿ ಎಂದೇ ಪ್ರಸಿದ್ಧಿ ಪಡೆದಿದೆ. ಹೀಗಾಗಿ ತಿರುಪತಿಗೆ ಹೋಗಲು ಆಗದೇ ಇರುವವರು ಕನಕಗಿರಿಗೆ ಬಂದು ಕನಕಾಚಲಪತಿಯ ದರ್ಶನ ಪಡೆದರೆ ಸಾಕು ತಿರುಪತಿ ತಿಮ್ಮಪ್ಪನ ದರ್ಶನ ಪಡೆದಷ್ಟೇ ಪುಣ್ಯ ಲಭಿಸುತ್ತದೆ ಎನ್ನುವ ಮಾತಿದೆ. 

BANK STRIKE ಬ್ಯಾಂಕ್ ನಲ್ಲಿ ಕೆಲಸ ಕಾರ್ಯಗಳಿದ್ದರೆ ಈ ವಾರದಲ್ಲೇ ಮುಗಿಸಿಕೊಳ್ಳಿ

ಇಂದಿನ ಗರುಡೋತ್ಸವ:
ಇನ್ನು ಕನಕಗಿರಿಯ ಕನಕಾಚಲಪತಿ ದೇವಸ್ಥಾನದ ಜಾತ್ರೆ ಹಿನ್ನಲೆಯಲ್ಲಿ ಇಂದು ಬೆಳಗಿನ ಜಾವ ಗರಡೋತ್ಸವ ಅದ್ಧೂರಿಯಾಗಿ ಜರುಗಿತು. ದೇವಸ್ಥಾನದಲ್ಲಿ ಪೂಜೆಯ ನಂತರ ನಡೆದ ಅದ್ದೂರಿ ಗರಡೋತ್ಸವದಲ್ಲಿ  ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಸಾವಿರಾರು ಭಕ್ತರು ಭಾಗಿಯಾಗಿದ್ದರು. ಕನಕಗಿರಿ ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿದ ಗರಡೋತ್ಸವವನ್ನು ಭಕ್ತರು ಕಣ್ತುಂಬಿಕೊಂಡರು. ಇನ್ನು ಗರಡೋತ್ಸವದಲ್ಲಿ ಹಿನ್ನಲೆಯಲ್ಲಿ  ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿತ್ತು.

ZOMATO INSTANT ಸೇವೆ ಪ್ರಕಟಿಸಿದ ಬೆನ್ನಲ್ಲೇ, ಟೀಕೆಗೊಳಗಾದ ಸಂಸ್ಥಾಪಕ ಗೋಯಲ್ 

click me!