ಗಂಗಾವತಿ: ಸಂಚಾರಿ ಪೊಲೀಸರೊಂದಿಗೆ ವಿದೇಶಿಗರ ಅನುಚಿತ ವರ್ತನೆ

By Web Desk  |  First Published Oct 15, 2019, 8:23 AM IST

ಸಂಚಾರಿ ಪೊಲೀಸ್ ಅಧಿಕಾರಿಯೊಂದಿಗೆ ಇಬ್ಬರು ವಿದೇಶಿ ಪ್ರವಾಸಿಗರ ಅನುಚಿತ ವರ್ತನೆ| ಒಂದೇ ಬೈಕ್‌ನ ಮೇಲೆ ಬರುತ್ತಿದ್ದ ಇಬ್ಬರು ವಿದೇಶಿಯರು ಹಾಗೂ ಸ್ಥಳೀಯ ಸಣ್ಣಾಪುರ ಗ್ರಾಮದ ರಾಮು ಎನ್ನುವ ಮೂವರನ್ನು ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ ತಡೆದು ತಪಾಸಣೆ ಕೈಗೊಂಡಿದ್ದರು|  ಸರಿಯಾದ ಮಾಹಿತಿ ನೀಡದೆ ಅಧಿಕಾರಿ ಮತ್ತು ಠಾಣೆಯ ಪೋಟೊ ತೆಗೆಯಲು ಮುಂದಾಗಿದ್ದಾರೆ| ಈ ಕಾರಣಕ್ಕೆ ಅಧಿಕಾರಿಯು ತರಾಟೆಗೆ ತೆಗೆದುಕೊಂಡಾಗ ಅನುಚಿತವಾಗಿ ವರ್ತಿಸಿದ್ದಾರೆ| 


ಗಂಗಾವತಿ[ಅ.15]: ಇಲ್ಲಿಯ ಸಂಚಾರಿ ಪೊಲೀಸ್ ಅಧಿಕಾರಿಯೊಂದಿಗೆ ಇಬ್ಬರು ವಿದೇಶಿ ಪ್ರವಾಸಿಗರು ಅನುಚಿತವಾಗಿ ವರ್ತಿಸಿದ ಘಟನೆ ಸೋಮವಾರ ನಡೆದಿದೆ.

ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಒಂದೇ ಬೈಕ್‌ನ ಮೇಲೆ ಬರುತ್ತಿದ್ದ ನ್ಯೂಜಲೆಂಡ್‌ನ ಡೇವಿಡ್ ಲಿ, ಈಡನ್ ಮತ್ತು ಸ್ಥಳೀಯ ಸಣ್ಣಾಪುರ ಗ್ರಾಮದ ರಾಮು ಎನ್ನುವ ಮೂವರನ್ನು ಸಂಚಾರಿ ಪೊಲೀಸ್ ಠಾಣೆಯ ಪಿಎಸ್‌ಐ ನಾಗರಾಜ ತಡೆದು ತಪಾಸಣೆ ಕೈಗೊಂಡ ವೇಳೆ ಅವರು ಸರಿಯಾದ ಮಾಹಿತಿ ನೀಡದೆ ಅಧಿಕಾರಿ ಮತ್ತು ಠಾಣೆಯ ಪೋಟೊ ತೆಗೆಯಲು ಮುಂದಾಗಿದ್ದಾರೆ. ಈ ಕಾರಣಕ್ಕೆ ಅಧಿಕಾರಿಯು ತರಾಟೆಗೆ ತೆಗೆದುಕೊಂಡಾಗ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಪಿಎಸ್‌ಐ ನಾಗರಾಜ್ ತಿಳಿಸಿದ್ದಾರೆ.

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಕುರಿತು ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು, ಎರಡು ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯೂಜಲೆಂಡ್‌ನ ಡೇವಿಡ್ ಲಿ, ಈಡನ್, ರಾಮು ಸಣ್ಣಾಪುರ ಮತ್ತು ಮಹ್ಮದ್ ಆನೆಗೊಂದಿ ಅವರ ವಿರುದ್ಧ ದೂರು ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.

ಲೈಸನ್ಸ್ ಇಲ್ಲದ ವಾಹನಗಳು:

ಗಂಗಾವತಿ ತಾಲೂಕಿನ ವಿರೂಪಾಪುರ ಗಡ್ಡೆಯಲ್ಲಿರುವ ರೆಸಾರ್ಟ್‌ಗಳಲ್ಲಿ ವಿದೇಶಿಯರಿಗೆ ನೀಡುವ ಬಹುತೇಕ ವಾಹನಗಳಿಗೆ ಲೈಸನ್ಸ್ ಇಲ್ಲ ಎನ್ನಲಾಗಿದೆ. ಸುಮಾರು 200ಕ್ಕೂ ಹೆಚ್ಚು ರೆಸಾರ್ಟ್‌ಗಳಿದ್ದು, ಬೈಕ್, ಅಟೋ, ಕಾರ್ ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ವಾಹನಗಳಿವೆ. ವಿದೇಶಿ ಪ್ರವಾಸಿಗರು ಐತಿಹಾಸಿಕ ಸ್ಥಳ ಸೇರಿದಂತೆ ನದಿ ತೀರದಲ್ಲಿ ಈಜಾಡುವ ಸ್ಥಳಕ್ಕೆ ಹೋಗಲು ರೆಸಾರ್ಟ್ ಮಾಲೀಕರು ವಿದೇಶಿಯರಿಗೆ ಹೆಚ್ಚು ಬಾಡಿಗೆ ವಸೂಲಿ ಮಾಡಿ ವಾಹನ ನೀಡುತ್ತಿದ್ದಾರೆ.

ವಿದೇಶಿಗರು ಬಳಸುವ ಬೈಕ್‌ಗಳಿಗೆ ಸರಿಯಾದ ರೀತಿಯಲ್ಲಿ ವಿಮೆ, ಡ್ರೈವಿಂಗ್ ಲೈಸೆನ್ಸ್ ಮತ್ತು ಸಂಪೂರ್ಣ ವಿಳಾಸ ಇಲ್ಲ ಎಂಬುದು ಸಂಚಾರಿ ಪೊಲೀಸರ ತಪಾಸಣೆ ವೇಳೆಯಲ್ಲಿ ಬೆಳಕಿಗೆ ಬಂದಿದೆ.

click me!