ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರದ ವಿರುದ್ಧ ಜಿಲ್ಲಾ ಕಮ್ಯುನಿಸ್ಟ್ ಪಕ್ಷ ಪ್ರತಿಭಟನೆ ನಡೆಸಿತು| ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು| ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗತಿಯಲ್ಲಿ ಹೆಚ್ಚುತ್ತಿದೆ| ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ| ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ| ಜಿಎಸ್‌ಟಿಯಿಂದ ದೇಶದ ವಿವಿಧ ಉದ್ಯಮಗಳು ಮುಚ್ಚುತ್ತಿವೆ| ಕೇಂದ್ರ ಸರ್ಕಾರ ತಪ್ಪು ಧೋರಣೆ ಕೈಬಿಡಬೇಕು|
ಕೊಪ್ಪಳ[ಅ.15]: ನಗರದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮತ್ತು ಜನ ವಿರೋಧಿ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಜಿಲ್ಲಾ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ನಗರದ ಪ್ರಮುಖ ಬೀದಿಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.
ಆ ನಂತರ ಪ್ರತಿಭಟನಕಾರರು ಮಾತನಾಡಿ, ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಜಿಎಸ್‌ಟಿಯಿಂದ ದೇಶದ ವಿವಿಧ ಉದ್ಯಮಗಳು ಮುಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಐದು ಪ್ರಮುಖ ಎಡಪಕ್ಷಗಳು ರಾಷ್ಟ್ರೀಯ ಸಮಾವೇಶವನ್ನು ಸಂಘಟಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರ ತಪ್ಪು ಧೋರಣೆ ಕೈಬಿಡಬೇಕು
ಕೇಂದ್ರ ಸರ್ಕಾರ ಇಂತಹ ತಪ್ಪು ಧೋರಣೆ ಕೈಬಿಟ್ಟು, ಜನೋಪಯೋಗಿ ಕಾರ್ಯ ಮಾಡಬೇಕು. ಜನವಿರೋಧಿ ನೀತಿಗಳನ್ನು ಕೈಬಿಟ್ಟು ಜನಪರ ಯೋಜನೆಗಳನ್ನು ಅನುಷ್ಠಾನ ಮಾಡಬೇಕು. ಕರ್ನಾಟಕದ ಬರ, ಅತಿವೃಷ್ಟಿ ಹಾಗೂ ಪ್ರವಾಹಕ್ಕೆಮ ತಕ್ಷಣ ಪರಿಹಾರವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಬೇಕು. ಉದ್ಯೋಗಗಳನ್ನು ಸೃಷ್ಟಿಸಲು ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸಬೇಕು. ಅಲ್ಲಿಯವರೆಗೆ ಕೇಂದ್ರ ಸರ್ಕಾರ ಯುವಜನರಿಗೆ ನಿರುದ್ಯೋಗ ಭತ್ಯೆ ನೀಡಬೇಕು. ಕನಿಷ್ಠ ವೇತನವನ್ನು 18 ಸಾವಿರಕ್ಕೆ ಹೆಚ್ಚಿಸಬೇಕು. ದೊಡ್ಡ ಪ್ರಮಾಣದಲ್ಲಿ ಉದ್ಯೋಗದಿಂದ ಹೊರ ದೂರಲ್ಪಟ್ಟ ನಿರುದ್ಯೋಗಿ ಕಾರ್ಮಿಕರಿಗೆ ಮಾಸಿಕ ಜೀವನ ವೇತನ ನೀಡಬೇಕು. ಸಾರ್ವಜನಿಕ ವಲಯದ ಖಾಸಗೀಕರಣ ನಿಲ್ಲಿಸಿ, ರಕ್ಷಣಾ ಮತ್ತು ಕಲ್ಲಿದ್ದಲು ವಲಯದಲ್ಲಿ ಶೇ. 100 ರಷ್ಟು ವಿದೇಶಿ ನೇರ ಬಂಡವಾಳವನ್ನು ವಾಪಸ್ ಪಡೆಯಬೇಕು. ಬಿಎಸ್‌ಎನ್‌ಎಲ್ ಮತ್ತು ರೈಲ್ವೆ, ಏರ್ ಇಂಡಿಯಾ, ರಕ್ಷಣಾ ಸಾಮಗ್ರಿ ಉತ್ಪಾದನಾ ಕಂಪನಿಗಳಲ್ಲಿ ಬೃಹತ್ ಪ್ರಮಾಣದ ಖಾಸಗೀಕರಣ ನಿಲ್ಲಿಸಬೇಕು. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಉದ್ಯೋಗವನ್ನು ಕನಿಷ್ಠ ವೇತನದೊಂದಿಗೆ ಕನಿಷ್ಠ 200 ದಿನಗಳಿಗೆ ವಿಸ್ತರಿಸಬೇಕು ಎಂದು ಆಗ್ರಹಿಸಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಹಳೆಯ ಬಾಕಿ ವೇತನವನ್ನು ತಕ್ಷಣವೇ ಸಲ್ಲಿಸಬೇಕು. ರೈತರು ಕೃಷಿ ಬಿಕ್ಕಟ್ಟಿನಿಂದ ಮತ್ತು ಸಾಲಬಾಧಿತ ಆತ್ಮಹತ್ಯೆಗಳಿಂದ ಪಾರಾಗಲು ರಕ್ಷಣೆ ನೀಡಿ ಸಾಲ ಮನ್ನಾ ಮಾಡಬೇಕು. ಮತ್ತು ಕೃಷಿ ಉತ್ಪನ್ನಗಳಿಗೆ ಉತ್ಪಾದನಾ ವೆಚ್ಚದ ಒಂದೂವರೆ ಪಟ್ಟು ಬೆಂಬಲ ಬೆಲೆ ನಿಗದಿಸಿ ಖಾತರಿಯಾಗಿ ದೊರೆಯುವಂತೆ ಕ್ರಮ ವಹಿಸಬೇಕು. ವೃದ್ಧಾಪ್ಯ ಹಾಗೂ ವಿಧವಾ ವೇತನಗಳನ್ನು ಕನಿಷ್ಠ 3 ಸಾವಿರಕ್ಕೆ ಹೆಚ್ಚಿಸಬೇಕು. ಈಗಾಗಲೆ ದೇಶದ ಸಾರ್ವಜನಿಕರು ಕೇಂದ್ರ ಸರ್ಕಾರದ ವಿವಿಧ ನೀತಿಗಳಿಂದ ದುಸ್ಥಿತಿಗೆ ತಲುಪಿದ್ದಾರೆ. ಹೀಗಾಗಿ ಜನವಿರೋಧಿ ಕ್ರಮ ಬಿಟ್ಟು, ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನೂ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿ. ನಾಗರಾಜ, ಖಾಸಿಂಸಾಬ್ ಸರದಾರ, ಸುಂಕಪ್ಪ ಗದಗ, ರಾಮಣ್ಣ ದೊಡ್ಡಮನಿ, ಹುಲಗಪ್ಪ ಗೋಕಾವಿ, ಸುಭಾನ್ ಸೈಯದ್, ಸಂಜಯ್ ದಾಸ್, ಫಕೀರಮ್ಮ ಮಿರಗನತಂಡೆ, ಶೇಖಪ್ಪ ಚೌಡ್ಕಿ, ಅಮರವ್ವ ಗದಗ, ಅಕ್ಬರ್ ಕರಡಿ, ಸೈಯದ್ ಗುಲಾಮ ಹುಸೇನ, ಹಸನಸಾಬ ಮಂಗಳಾಪುರ, ಲಕ್ಷ್ಮೀದೇವಿ ಸೋನಾರೆ, ಗಂಗಮ್ಮ ಎಲಿಗಾರ ಇದ್ದರು.
ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಜನರು ಸಂಕಷ್ಟು ಅನುಭವಿಸುತ್ತಿದ್ದಾರೆ. ಸಮಸ್ಯೆಗಳನ್ನು ಬಗೆಹರಿಸಲು ಕೇಂದ್ರ ಸರ್ಕಾರ ಆಸಕ್ತಿ ತೋರುತ್ತಿಲ್ಲ. ಜಿಎಸ್‌ಟಿಯಿಂದ ದೇಶದ ವಿವಿಧ ಉದ್ಯಮಗಳು ಮುಚ್ಚುತ್ತಿವೆ.ಈ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಐದು ಪ್ರಮುಖ ಎಡಪಕ್ಷಗಳು ರಾಷ್ಟ್ರೀಯ ಸಮಾವೇಶವನ್ನು ಸಂಘಟಿಸಿ ಪ್ರತಿಭಟನೆ ಮಾಡಲಾಗುತ್ತಿದೆ ಎಂದು ಹೇಳಿದರು.