ಮನೆಯ ಮೇಲ್ಛಾವಣೆ ಕುಸಿದು ಒಂದೇ ಕುಟುಂಬದ ಮೂವರ ಸಾವು| ಇತ್ತೀಚೆಗೆ ಸುರಿದ ಮಳೆಯಿಂದ ಹಳೇ ಮನೆ ಜೋಂಪು ಹಿಡಿದಿತ್ತು| ತಂದೆಯ ಎದುರೆ ಪ್ರಾಣಬಿಟ್ಟ ಮೂರು ಜನ ಮಕ್ಕಳು| ಘಟನೆಯಲ್ಲಿ ಸೋಮಣ್ಣ ಕುದುರಿಮೋತಿ ಸಾವಿನ ದವಡೆಯಿಂದ ಪಾರಾಗಿದ್ದಾರೆ| ಇದ್ದ ಮೂರು ಜನ ಮಕ್ಕಳನ್ನು ಕಳೆದುಕೊಂಡ ತಂದೆ ಒಂಟಿಯಾಗಿದ್ದಾರೆ|
ಕೊಪ್ಪಳ(ಅ.15): ಮನೆಯ ಚಾವಣಿ ಕುಸಿದು ಒಂದೇ ಕುಟುಂಬದ ಮೂವರು ಸಾವನ್ನಪ್ಪಿದ ಘಟನೆ ತಾಲೂಕಿನ ಯಲಮಗೇರಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಸುಜಾತ (22), ಅಮರೇಶ (18), ಗವಿಸಿದ್ದಪ್ಪ(15) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಸುರಿದ ಮಳೆಯಿಂದ ಹಳೇ ಮನೆ ಜೋಂಪು ಹಿಡಿದಿತ್ತು. ಇಂದು ಮನೆ ಕುಸಿದ ಪರಿಣಾಮ ತಂದೆಯ ಎದುರೆ ಮೂರು ಜನ ಮಕ್ಕಳು ಪ್ರಾಣಬಿಟ್ಟಿದ್ದಾರೆ. ಘಟನೆಯಲ್ಲಿ ಸೋಮಣ್ಣ ಕುದುರಿಮೋತಿ ಸಾವಿನ ದವಡೆಯಿಂದ ಪಾರಾಗಿದ್ದಾರೆ. ಇದ್ದ ಮೂರು ಜನ ಮಕ್ಕಳನ್ನು ಕಳೆದುಕೊಂಡ ತಂದೆ ಒಂಟಿಯಾಗಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಮನೆ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದರಿಂದ ಗ್ರಾಮದಲ್ಲಿ ನೀರವಮೌನ ಆವರಿಸಿದೆ, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಕೊಪ್ಪಳ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.