ಡಿಕೆಶಿ ಜೆಡಿಎಸ್ ಪಕ್ಷದ ಧ್ವಜ ಹಿಡಿದಿದ್ರಲ್ಲಿ ತಪ್ಪೇನಿದೆ ಎಂದ ಕಾಂಗ್ರೆಸ್ ಶಾಸಕ!

By Web Desk  |  First Published Oct 31, 2019, 12:08 PM IST

ಡಿ.ಕೆ. ಶಿವಕುಮಾರ್ ಜೆಡಿಎಸ್ ಪಕ್ಷದ ಧ್ವಜ ಹಿಡಿದಿದ್ದು ನನಗ ತಪ್ಪು ಅನಿಸುತ್ತಿಲ್ಲ ಎಂದ ಅಮರೇಗೌಡ ಬಯ್ಯಾಪುರ| ನಮಗೆ ಬೇರೆ ಬೇರೆ ಪಕ್ಷದಲ್ಲಿ ಅಭಿಮಾನಿಗಳು ಇರುತ್ತಾರೆ| ಡಿಕೆಶಿ ಅವರಿಗೆ ಜೆಡಿಎಸ್, ಬಿಜೆಪಿಯಲ್ಲಿಯೂ ಅಭಿಮಾನಿಗಳು ಇರುತ್ತಾರೆ| ಜಾತಿಗೆ ಸಪೋರ್ಟ್ ಮಾಡಿ ಆ ರೀತಿ ಮಾಡಿರಬಹುದು ಎನ್ನುವುದು ನನ್ನ ಅನಿಸಿಕೆ| 


ಕೊಪ್ಪಳ[ಅ. 30]: ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರು ಜೆಡಿಎಸ್ ಪಕ್ಷದ ಧ್ವಜವನ್ನು ಹಿಡಿದಿದ್ದು ನನಗ ತಪ್ಪು ಅನಿಸುತ್ತಿಲ್ಲ ಎಂದು ಜಿಲ್ಲೆಯ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಹೇಳಿದ್ದಾರೆ.

ಗುರುವಾರ ನಗರದಲ್ಲಿ ಮಾತನಾಡಿದ ಅವರು, ನಮಗೆ ಬೇರೆ ಬೇರೆ ಪಕ್ಷದಲ್ಲಿ ಅಭಿಮಾನಿಗಳು ಇರುತ್ತಾರೆ. ಡಿಕೆಶಿ ಅವರಿಗೆ ಜೆಡಿಎಸ್, ಬಿಜೆಪಿಯಲ್ಲಿಯೂ ಅಭಿಮಾನಿಗಳು ಇರುತ್ತಾರೆ. ಜಾತಿಗೆ ಸಪೋರ್ಟ್ ಮಾಡಿ ಆ ರೀತಿ ಮಾಡಿರಬಹುದು ಎನ್ನುವುದು ನನ್ನ ಅನಿಸಿಕೆ. ನಮ್ಮ ಸಮಾಜದ ಒಬ್ಬ ಮುಖಂಡ ಸಂಕಷ್ಟದಿಂದ ಹೊರಬಂದಿದ್ದಕ್ಕೆ ಶಕ್ತಿ ತುಂಬಲು ಜನರು ಹುಚ್ಚೆದ್ದು ಸೇರಿದ್ದಾರೆ. ಸ್ವತಃ ಕುಮಾರಸ್ವಾಮಿ ಜೈಲು ಹಾಗೂ  ಏರ್ಪೋರ್ಟ್ ಗೆ ಹೋಗಿದ್ದಾರೆ. ಇದು ಅವರ ಅನ್ಯೋನ್ಯತೆಯನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ. 

Tap to resize

Latest Videos

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಡಿಕೆಶಿ  ಜೆಡಿಎಸ್ ಪಕ್ಷದ ಧ್ವಜವನ್ನು ಹಿಡಿದಿದ್ದನ್ನು ಮಾಜಿ ಸಿಎಂ ಸಿದ್ದರಾಮಯ್ಯನವರು ಯಾವ ಅರ್ಥದಲ್ಲಿ ಹೇಳಿದ್ದಾರೆ ಗೊತ್ತಿಲ್ಲ.ಕುಮಾರಸ್ವಾಮಿ ಅಸ್ತಿತ್ವವನ್ನು ಉಳಿಸಿಕೊಳ್ಳಲು ಯಾರ ಜೊತೆ ಯಾದ್ರೂ ಕೈ ಜೋಡಿಸ್ತಾರೆ. ಕುಮಾರಸ್ವಾಮಿ ಯಾವಾಗ ಹೆಂಗೆ ಇರ್ತಾರೆ ಅನ್ನೊದು ನಾವು ನೋಡಿದ್ದಿವಿ. ನಮ್ಮ ಜೊತೆನೂ ಸರ್ಕಾರ ಮಾಡಿದ್ದಾರೆ. ಬಿಜೆಪಿ ಜೊತೆಗೂ ಸರ್ಕಾರ ಮಾಡಿದ್ದಾರೆ. ಅವರದು ಸ್ವಂತ ಪಕ್ಷ ಇದೆ. ಕಮಾರಸ್ವಾಮಿ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಏನಾದ್ರೂ ಮಾಡಬಹುದು ಎಂದ ಅಮರೇಗೌಡ ಬಯ್ಯಾಪುರ ಅವರು ಹೇಳಿದ್ದಾರೆ. 

click me!