ಕೋಟಿಲಿಂಗೇಶ್ವರದಲ್ಲಿ ಪ್ರಸಾದ ವಿನಿಯೋಗ ರದ್ದು

By Kannadaprabha NewsFirst Published Oct 15, 2019, 12:59 PM IST
Highlights

ಕೋಲಾರದ ಪ್ರಸಿದ್ಧ ಕೋಟಿ ಲಿಂಗೇಶ್ವರ ದೇವಾಲಯವನ್ನು ಜಿಲ್ಲಾಡಳಿತ ಸುಪರ್ದಿಗೆ ತೆಗೆದುಕೊಂಡಿರುವ ಬೆನ್ನಲ್ಲೇ ಇದೀಗ ಪ್ರಸಾದ ವಿನಿಯೋಗವನ್ನು ರದ್ದುಗೊಳಿಸಲಾಗಿದೆ. ದೇಗುಲದ ಅಧಿಪತ್ಯಕ್ಕಾಗಿ ಕೋರ್ಟ್‌ನಲ್ಲಿ ಎರಡು ಬಣಗಳ ನಡುವೆ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಕೋಲಾರ(ಅ.15): ಕೋಲಾರ ಜಿಲ್ಲೆಯ ಶ್ರೀ ಕೋಟಿಲಿಂಗೇಶ್ವರಸ್ವಾಮಿ ದೇಗುಲದಲ್ಲಿ ಅಲ್ಲಿಗೆ ಬರುವ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡುವುದನ್ನು ಸೋಮವಾರದಿಂದ ದಿಢೀರ್‌ ಸ್ಥಗಿತಗೊಳಿಸಲಾಗಿದೆ. ದೇಗುಲದ ಅಧಿಪತ್ಯಕ್ಕಾಗಿ ಕೋರ್ಟ್‌ನಲ್ಲಿ ಎರಡು ಬಣಗಳ ನಡುವೆ ವಿವಾದ ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಪ್ರಸಾದದಲ್ಲಿ ವಿಷ ಬೆರೆಸುವ ಭೀತಿ

ಕೋಲಾರದ ಜಿಲ್ಲಾಧಿಕಾರಿ ಅವರು ಕೋರ್ಟ್‌ನ ಸೂಚನೆಯಂತೆ ದೇವಾಲಯದ ಆಡಳಿತ ಅಧಿಕಾರ ವಹಿಸಿಕೊಂಡು ಎರಡು ವಾರವಷ್ಟೆಆಗಿದೆ. ರಾಜ್ಯದ ಕೆಲವು ಭಾಗಗಳಲ್ಲಿನ ಹೆಸರಾಂತ ದೇಗುಲಗಳಲ್ಲಿ ಈಗಾಗಲೇ ಪ್ರಸಾದಕ್ಕೆ ವಿಷ ಬೆರೆಸಿ ಭಕ್ತಾಧಿಗಳು ಮೃತಪಟ್ಟ ಘಟನೆಗಳ ಹಿನ್ನೆಲೆಯಲ್ಲಿ ಆಡಳಿತ ಈ ಕ್ರಮ ಕೈಗೊಂಡಿದೆ. ಕೋಟಿಲಿಂಗೇಶ್ವರ ದೇವಾಲಯದ ಮೇಲಿನ ಹಕ್ಕಿಗಾಗಿ ಒರಡು ಗುಂಪುಗಳ ಮಧ್ಯೆ ಕಲಹಗಳು ನಡೆಯುತ್ತಿವೆ. ಇಂತಹ ಕಲಹಗಳಿಗೆ ಭಕ್ತರು ಬಲಿಯಾಗುವಂತಾಗಬಾರದು ಎಂಬ ಉದ್ದೇಶದಿಂದ ಪ್ರಸಾದ ವಿನಿಯೋಗ ಸ್ಥಗಿತಗೊಳಿಸಲಾಗಿದೆ ಎನ್ನಲಾಗಿದೆ.

ಎರಡು ಬಣಗಳ ಮಧ್ಯೆ ವ್ಯಾಜ್ಯ

ದಕ್ಷಿಣ ಭಾರತದಲ್ಲಿಯೇ ಹೆಸರಾಗಿರುವ ಕೋಲಾರ ಜಿಲ್ಲೆಯಲ್ಲಿನ ಯಾತ್ರಾಸ್ಥಳ ಕೋಟಿಲಿಂಗೇಶ್ವರ ದೇವಸ್ಥಾನ. ಕೆಜಿಎಫ್‌ ತಾಲೂಕಿನ ಕಮ್ಮಸಂದ್ರದಲ್ಲಿದ್ದು ಇತ್ತೀಚೆಗೆ ದೇವಾಲಯದ ಸ್ವಾಮಿಗಳು ಮೃತ ಪಟ್ಟಹಿನ್ನೆಲೆಯಲ್ಲಿ ಈ ದೇವಾಲಯದ ಮೇಲೆ ಅಧಿಪತ್ಯ ಸ್ಥಾಪಿಸಲು ಎರಡು ಬಣಗಳ ಮಧ್ಯೆ ಕಳೆದ ವರ್ಷದಿಂದ ಕೋರ್ಟ್‌ನಲ್ಲಿ ವ್ಯಾಜ್ಯವು ನಡೆಯುತ್ತಿದೆ.

ಮುನ್ನೆಚ್ಚರಿಕೆಯಾಗಿ ಕ್ರಮ :

ರಾಜ್ಯದ ವಿವಿಧ ದೇವಾಲಯಗಳಲ್ಲಿ ಇಂತಹ ಎರಡು ಗುಂಪುಗಳಾಗಿ ಕೆಲವು ದುರ್ಘಟನೆಗಳಾಗಿರುವುದನ್ನು ಕಂಡಿದ್ದೇವೆ ಇದರಿಂದಾಗಿ ದೇವಾಲಯಕ್ಕೆ ಬರುವ ಭಕ್ತರಿಗೆ ಯಾವುದೇ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ತಮ್ಮನ್ನು ಸಂಪರ್ಕಿಸಿದ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

ಕೋಲಾರ: ಕೋಟಿ ಲಿಂಗ ಜಿಲ್ಲಾಡಳಿತದ ತೆಕ್ಕೆಗೆ

ಕೋಟಿಲಿಂಗೇಶ್ವರ ದೇವಾಲಯವು ಖಾಸಗಿ ಒಡೆತನದಲ್ಲಿದೆ ಅಲ್ಲಿನ ದೇವಾಲಯದ ಒಡೆತನಕ್ಕಾಗಿ ಎರಡು ಗುಂಪುಗಳು ಕಿತ್ತಾಡಿ ಕೊಂಡು ಕೋರ್ಟ್‌ ಮೆಟ್ಟಿಲೇರಿವೆ, ಆದರೆ ಕೋರ್ಟು ಅಲ್ಲಿನ ಉಸ್ತುವಾರಿಯ ನೋಡಿಕೊಳ್ಳುವ ಜವಾಬ್ದಾರಿಯನ್ನು ಜಿಲ್ಲಾಡಳಿತಕ್ಕೆ ವಹಿಸಿದೆ. ಈ ಹಿನ್ನೆಲೆಯಲ್ಲಿ ಅಲ್ಲಿಗೆ ಬರುವ ಭಕ್ತರ ಸಾಧಕ ಬಾಧಕಗಳನ್ನು ಪರಿಶೀಲನೆ ನಡೆಸಿ ಭಕ್ತರ ರಕ್ಷಣೆಯ ದೃಷ್ಟಿಯಿಂದ ದೇವಸ್ತಾನದಲ್ಲಿ ಪ್ರಸಾದ ವಿನಿಯೋಗ ಮತ್ತು ಅನ್ನದಾಸೋಹ ಮಾಡುವ ಕಾರ್ಯಕ್ರಮಗಳನ್ನು ರದ್ಧು ಪಡಿಸಿಲಾಗಿದೆ. ಭಕ್ತಾಧಿಗಳಿಗೆ ಸಮಸ್ಯೆಯಾಗಬಾರದೆಂದು ಪೂಜೆ ವ್ಯವಸ್ಥೆ ಮಾಡಿದ್ಧೇವೆ ಎಂದಿದ್ದಾರೆ.

ದೇವಾಲಯದ ವ್ಯವಹಾರದಲ್ಲಿ ಗೊಂದಲ

ಈ ದೇವಾಲಯಲ್ಲಿನ ವಾತಾವರಣ ಪರಿಶೀಲಿಸಿದಾಗ ಸಾಕಷ್ಟುಗೊಂದಲಗಳಿವೆ. ಅಲ್ಲಿ 52 ಅಂಗಡಿಗಳಿವೆ. ಅಲ್ಲಿನ ಕೆಲವರು ಪ್ರತಿದಿನಾ, ವಾರಕ್ಕೆ, ತಿಂಗಳಿಗೊಮ್ಮೆ ಬಾಡಿಗೆ ಕಟ್ಟುತ್ತಿದ್ಧೇವೆ ಅಂತಾರೆ. ಇದೀಗ ಯಾರು ಬಾಡಿಗೆ ಕೊಡುತ್ತಿಲ್ಲ. ಮೊದಲು ಈ ಬಗ್ಗೆ ಗಮನಹರಿಬೇಕಾಗಿದೆ ಎಂದು ಹೇಳಿದ್ದಾರೆ.

ದೇವಾಲಯಕ್ಕೆ ಸಂಬಂಧಿಸಿದಂತೆ 34 ಆಸ್ತಿಗಳಿಗೆ ಇವೆ. ಅವುಗಳನ್ನು ಜಿಲ್ಲಾಡಳಿತಕ್ಕೆ ಇನ್ನೂ ಒಪ್ಪಿಸಿಲ್ಲ. ಇತ್ತೀಚೆಗೆ ಈ ಆಸ್ತಿಗಳ ಪಟ್ಟಿಜಿಲ್ಲಾಡಳಿತಕ್ಕೆ ದೊರೆತಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಪ್ರಸಾದ ವ್ಯವಸ್ಥೆ ನಿಲ್ಲಿಸಿದ್ದೇವೆ ಎಂದು ಹೇಳಿದ್ದಾರೆ.

ಕೋಟಿಲಿಂಗೇಶ್ವರದಲ್ಲಿ ಪೂಜೆ ಸ್ಥಗಿತ.

click me!