ರಾಜಕೀಯ ಆಟದಿಂದಾಗಿ ಮಾಲೂರಿನಲ್ಲಿ ದಿನಕ್ಕೊಬ್ಬ ತಹಸೀಲ್ದಾರ್ ನೇಮಕವಾಗುವ ಪರಿಸ್ಥಿತಿ ಉಂಟಾಗಿದೆ. ಇದು ಹಾಲಿ ಶಾಸಕ ನಂಜೇಗೌಡ ಹಾಗೂ ಮಾಜಿ ಶಾಸಕ ಮಂಜುನಾಥ್ ಗೌಡ ಅವರ ಪ್ರತಿಷ್ಠೆಯಾಗಿ ಮಾರ್ಪಟ್ಟಿದ್ದು ಅಧಿಕಾರಿಗಳ ಪಾಲಿಗೆ ಬಿಸಿ ತುಪ್ಪವಾಗಿದೆ.
ಕೋಲಾರ(ಅ.13): ಮಾಲೂರು ತಾಲೂಕಿನ ರಾಜಕೀಯ ಮೇಲಾಟದಲ್ಲಿ ದಿನಕ್ಕೊಬ್ಬರು ತಹಸೀಲ್ದಾರ್ ಅಧಿಕಾರ ಸ್ವೀಕರಿಸುವ ಪರಿಸ್ಥಿತಿ ಉಂಟಾಗಿದೆ.
ಇದು ಹಾಲಿ ಶಾಸಕ ನಂಜೇಗೌಡ ಹಾಗೂ ಮಾಜಿ ಶಾಸಕ ಮಂಜುನಾಥ್ ಗೌಡ ಅವರ ಪ್ರತಿಷ್ಠೆಯಾಗಿ ಮಾರ್ಪಟ್ಟಿದ್ದು ಅಧಿಕಾರಿಗಳ ಪಾಲಿಗೆ ಬಿಸಿ ತುಪ್ಪವಾಗಿದೆ. ಹಿಂದಿನ ಸಮಿಶ್ರ ಸರ್ಕಾರ ಇದ್ದಾಗ ಹಾಲಿ ಶಾಸಕ ನಂಜೇಗೌಡರು ಸೂಚಿಸಿದ್ದ ನಾಗರಾಜ್ ಎಂಬುವರು ತಹಸೀಲ್ದಾರ್ ಆಗಿ ಕಾರ‌್ಯ ನಿರ್ವಹಿಸುತ್ತಿದ್ದರು.
undefined
ತುಮಕೂರು ಮಾತ್ರವಲ್ಲ, ಕೋಲಾರದಲ್ಲಿಯೂ ಜಿ. ಪರಮೇಶ್ವರ್ ಒಡೆತನದ ಸಂಸ್ಥೆ..!
ಆದರೆ ರಾಜ್ಯದಲ್ಲಿ ಸರ್ಕಾರ ಬದಲಾದ ತಕ್ಷಣ ಮಾಜಿ ಶಾಸಕ ಮಂಜುನಾಥ್ ಗೌಡ ಅವರು ಸಂಸದ ಮುನಿಸ್ವಾಮಿ ಮೂಲಕ ಜಲಮಂಡಳಿ ಇಲಾಖೆಯಲ್ಲಿದ್ದ ಕೆ. ಮುನಿರಾಜು ಎಂಬುವರನ್ನು ಇಲ್ಲಿಯ ತಹಸೀಲ್ದಾರ್ ವರ್ಗಾವಣೆ ಮಾಡಿಸಿದ್ದಾರೆ.
ಮುನಿರಾಜು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದರು. ಆದರೆ ಅಧಿಕಾರ ವಹಿಸಿಕೊಟ್ಟಿದ್ದ ತಹಸೀಲ್ದಾರ್ ನಾಗರಾಜ್ ಅವರು ಸಚಿವ ಶ್ರೀ ರಾಮುಲು ಪ್ರಭಾವ ಬಳಸಿ ಮತ್ತೇ ಇಲ್ಲಿಗೆ ವರ್ಗಾವಣೆ ಮಾಡಿಕೊಂಡು ಬಂದು ಶನಿವಾರ ಸಂಜೆ ಅಧಿಕಾರ ವಹಿಸಿಕೊಂಡಿದ್ದಾರೆ.
ಕೋಲಾರ: ಐಟಿ ಅಧಿಕಾರಿಗಳಿಂದ ಕ್ಯಾಷಿಯರ್‌ಗೆ ಕಪಾಳ ಮೋಕ್ಷ..!