ಆಪರೇಷನ್ ಕಮಲದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರ ವಿರುದ್ಧ ಶಾಸಕ ಶ್ರೀನಿವಾಸ್ ಗೌಡ ಗರಂ ಆಗಿದ್ದಾರೆ. ಕೋಲಾರದಲ್ಲಿ ಶಾಸಕರಲ್ಲಿ ಮಾಧ್ಯಮದವರು ಪ್ರಶ್ನೆ ಕೇಳಿದಾಗ ದಾರೀಲಿ ಹೋಗೋರಿಗೆಲ್ಲ ನಾನು ಪ್ರತಿಕ್ರಿಯೆ ಕೊಡ್ಬೇಕಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಕೋಲಾರ(ನ.07): ಆಪರೇಷನ್ ಕಮಲದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರ ವಿರುದ್ಧ ಕೋಲಾರ ಶಾಸಕ ಶ್ರೀನಿವಾಸ್ ಗೌಡ ಗರಂ ಆಗಿದ್ದಾರೆ. ಕೋಲಾರದಲ್ಲಿ ಶಾಸಕರಲ್ಲಿ ಮಾಧ್ಯಮದವರು ಪ್ರಶ್ನೆ ಕೇಳಿದಾಗ ದಾರೀಲಿ ಹೋಗೋರಿಗೆಲ್ಲ ನಾನು ಪ್ರತಿಕ್ರಿಯೆ ಕೊಡ್ಬೇಕಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಆಪರೇಷನ್ ಕಮಲದಲ್ಲಿ ಬಿಜೆಪಿಯವ್ರು ನನಗೆ 5 ಕೋಟಿ ರೂಪಾಯಿ ಹಣ ನೀಡಿದ್ದರು. ನಾನು ಮನೆಯಲ್ಲಿ ಕೆಲಕಾಲ ಹಣ ಇಟ್ಟುಕೊಂಡು ನಂತರ ವಾಪಸ್ಸು ನೀಡಿದ್ದೆ ಎಂದು ಜೆಡಿಎಸ್ ಶಾಸಕ ಶ್ರೀನಿವಾಸ್ ಗೌಡ ಬಹಿರಂಗ ಹೇಳಿಕೆ ನೀಡಿದ್ದರು. ಶಾಸಕರ ವಿರುದ್ಧ ಎಸಿಬಿಯಲ್ಲಿ ಬಿಜೆಪಿ ಪಕ್ಷದಿಂದ ದೂರು ದಾಖಲಾಗಿತ್ತು.
ಹೊಸ ರಾಜಕೀಯ ಬೆಳವಣಿಗೆ ಸುಳಿವು ನೀಡಿದ JDS ಶಾಸಕ
ಎಸಿಬಿ ತನಿಖೆಯ ಸಂದರ್ಭ ರಾಜಕೀಯವಾಗಿ ಈ ಹೇಳಿಕೆ ನೀಡಿದ್ದೇನೆ ಎಂದು ಶಾಸಕ ಶ್ರೀನಿವಾಸ್ ಗೌಡ ಹಿಂಬರಹ ಬರೆದುಕೊಟ್ಟಿದ್ದರು. ಈ ಕುರಿತು ಪ್ರಶ್ನಿಸಿದಕ್ಕೆ ಶಾಸಕ ಶ್ರೀನಿವಾಸ್ ಗೌಡ ಮಾಧ್ಯಮಗಳ ಮೇಲೆ ಕೋಲಾರದಲ್ಲಿ ಗರಂ ಆಗಿದ್ದಾರೆ.
ಮಾಧ್ಯಮಗಳ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಆಗಿ ಹೋಗಿರುವ ವಿಚಾರ ನಾನು ಮತ್ತೆ ಮಾತನಾಡುವುದಿಲ್ಲ. ನಾನು ಈ ಕುರಿತು ವಿಧಾನಸೌಧದಲ್ಲಿ ಮಾತನಾಡಿದ್ದೇನೆ. ವಿಧಾನಸೌಧಕಿಂತ್ತ ಹೆಚ್ಚು ಏನ್ರಿ ನೀವೆಲ್ಲಾ ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ದಾರೀಲಿ ಹೋಗೋರಿಗೆಲ್ಲ ನಾನು ಪ್ರತಿಕ್ರಿಯೆ ಕೊಡಬೇಕಾ ? ಎಂದು ಎಸಿಬಿ ದೂರಿನ ವಿಚಾರ ಕೇಳುತ್ತಿದಂತ್ತೆ ಮಾಧ್ಯಮಗಳ ಮೇಲೆ ಶಾಸಕ ಶ್ರೀನಿವಾಸ್ ಗೌಡ ಸಿಡಿಮಿಡಿಗೊಂಡಿದ್ದಾರೆ.
ಶಾಸಕನಿಂದ 5 ಕೋಟಿ ಆಮಿಷ ಆರೋಪ: ಬಿಜೆಪಿ ಗಪ್‌ಚುಪ್, ಕೃಷ್ಣ ಉಗ್ರವಾತಾರ