ಕೋಲಾರ: ತಿಂಗಳಲ್ಲಿ 25 ಕ್ಕೂ ಹೆಚ್ಚು ಕಳ್ಳತನ, ಬೆಚ್ಚಿ ಬಿದ್ದ ಜನತೆ

By Web DeskFirst Published Nov 6, 2019, 11:30 AM IST
Highlights

ಕೋಲಾರದಲ್ಲಿ ಸರಣಿ ಕಳ್ಳತನಗಳು ಮುಂದುವರಿದಿದ್ದು, ಕಳೆದೊಂದು ತಿಂಗಳಲ್ಲಿ 25ಕ್ಕೂ ಹೆಚ್ಚು ಕಳ್ಳತನಗಳು ನಡೆದಿವೆ. ಈ ಬೆಳವಣಿಗೆಯಿಂದ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ದೇವಸ್ಥಾನ ಸೇರಿದಂತೆ ಹಲವು ಮನೆಗಳಲ್ಲಿ ಕಳ್ಳರು ಕೈ ಚಳಕ ಮುಂದುವರಿಸಿದ್ದಾರೆ.

ಕೋಲಾರ(ನ.06): ಕೋಲಾರದಲ್ಲಿ ಸರಣಿ ಕಳ್ಳತನಗಳು ಮುಂದುವರಿದಿದ್ದು, ಕಳೆದೊಂದು ತಿಂಗಳಲ್ಲಿ 25ಕ್ಕೂ ಹೆಚ್ಚು ಕಳ್ಳತನಗಳು ನಡೆದಿವೆ. ಈ ಬೆಳವಣಿಗೆಯಿಂದ ಗ್ರಾಮಸ್ಥರು ಭೀತಿಗೊಳಗಾಗಿದ್ದಾರೆ. ದೇವಸ್ಥಾನ ಸೇರಿದಂತೆ ಹಲವು ಮನೆಗಳಲ್ಲಿ ಕಳ್ಳರು ಕೈ ಚಳಕ ಮುಂದುವರಿಸಿದ್ದಾರೆ.

ಕೋಲಾರದ ಮಾಲೂರಿನಲ್ಲಿ ಸರಣಿ ಕಳ್ಳತನ ಮುಂದುವರಿದಿದ್ದು, ಕಳೆದ ಒಂದು ತಿಂಗಳಲ್ಲಿ 25 ಕ್ಕೂ ಹೆಚ್ಚು ಕಡೆಗಳಲ್ಲಿ ಕಳ್ಳತನ ನಡೆದಿದೆ. ದೇವಸ್ಥಾನ,ಅಂಗಡಿ ಹಾಗೂ ಮನೆಗಳನ್ನು ಟಾರ್ಗೆಟ್ ಮಾಡುತ್ತಿರುವ ಚೋರರ ಕೃತ್ಯದಿಂದ ಜನ ಆತಂಕಕ್ಕೊಳಗಾಗಿದ್ದಾರೆ. ಕಳ್ಳತನಕ್ಕೆ ಕಡಿವಾಣ ಹಾಕದ ಬಗ್ಗೆ ಮಾಲೂರು ಪೊಲೀಸರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

4 ವರ್ಷದ ನಂತರ ತುಂಬಿದ ಜಲಾಶಯ, ನೀರಿನಲ್ಲಿ ಈಜಾಡಿದ ಕುಣಿಗಲ್ ಶಾಸಕ..!

ತಡರಾತ್ರಿ ಮಾಲೂರಿನ ವೈಟ್ ಗಾರ್ಡನ್‌ನಲ್ಲಿರುವ ಸಾಯಿ ಬಾಬಾ ಪಾದುಕ, ಹುಂಡಿ ಹಣ ದೋಚಲಾಗಿದೆ. ಒಂದು ಕೀ ಮೀ ದೂರದಲ್ಲಿ ಹುಂಡಿಯನ್ನು ಬಿಸಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ. ಇದುವರೆಗೂ ಒಂದೇ ಒಂದು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಮಾಲೂರು ಪೊಲೀಸರು ವಿಫಲರಾಗಿದ್ದಾರೆ. ಈ ನಿಟ್ಟಿನಲ್ಲಿ ಸಿಬ್ಬಂದಿಗಳನ್ನು ಬೇರೆಡೆ ವರ್ಗಾವಣೆ ಮಾಡುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ.

ಜಾತಿ ಪ್ರಮಾಣಪತ್ರವಿಲ್ಲ, ಶಾಲೆಗೆ ಹೋಗದೆ ಮನೆಯಲ್ಲುಳಿದ ವಿದ್ಯಾರ್ಥಿಗಳು.

click me!