ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಬಾಂಗ್ಲಾ ಅಕ್ರಮ ವಲಸಿಗ ಮಹಿಳೆ ಅರೆಸ್ಟ್

By Kannadaprabha News  |  First Published Nov 7, 2019, 9:09 AM IST

ಅಕ್ರಮವಾಗಿ ನೆಲೆಸಿದ್ದು, ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಬಾಂಗ್ಲಾ ಅಕ್ರಮ ವಲಸಿಗ ಮಹಿಳೆಯನ್ನು ಬಂಧಿಸಲಾಗಿದೆ. 


ಕೋಲಾರ [ನ.07]: ರಾಜ್ಯದಲ್ಲಿ ಎನ್‌ಆರ್‌ಸಿ ಜಾರಿಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿರುವ ಸಂದರ್ಭದಲ್ಲೇ ಅಕ್ರಮ ಬಾಂಗ್ಲಾ ವಲಸಿಗ ಮಹಿಳೆಯೊಬ್ಬರ ಬಂಧನವಾಗಿರುವ ಬಗ್ಗೆ ಜಿಲ್ಲೆಯ ಬಂಗಾರಪೇಟೆಯಿಂದ ವರದಿಯಾಗಿದೆ. 

ಮನೆಯೊಂದರಲ್ಲಿ ನೆಲೆಸಿದ್ದ ಶಿಲ್ಪಿ ಅಕ್ತಾರ್ ಪಾರಿಯಾ ರುಬೀಯಾ ಬಂಧಿತ ಮಹಿಳೆ. ಈಕೆ ಪಟ್ಟಣದ ದೇಶಿಹಳ್ಳಿ ಬಡಾವಣೆಯಲ್ಲಿ ವಾಸವಾಗಿದ್ದಳು. ವೇಶ್ಯಾವಾಟಿಕೆಯಲ್ಲಿ ತೊಡಗಿದ್ದಳು. ಪೊಲೀಸರಿಗೆ ಬಂದ ಮಾಹಿತಿ ಮೇರೆಗೆ ದಾಳಿ ಮಾಡಿದಾಗ ಅಸ್ಸಾಂ ಮಹಿಳೆ ಜತೆ ಸಿಕ್ಕಿಬಿದ್ದಿದ್ದಾಳೆ. 

Tap to resize

Latest Videos

undefined

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈಕೆ ಬಳಿ ಪಾಸ್‌ಪೋರ್ಟ್ ಅಥವಾ ಬೇರಾವುದೇ ದಾಖಲೆ ಸಹ ಇಲ್ಲದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಹ ಅಕ್ರಮ ವಲಸಿಗರ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ವಲಸಿಗರ ಪತ್ತೆಗೆ ಇಳಿಯಲಾಗಿದೆ. ಇದೇ ವೇಳೆ ಕೋಲಾರದಲ್ಲಿ ಅಕ್ರಮ ವಲಸಿಗ ಮಹಿಳೆಯ ಬಂಧನವಾಗಿದೆ.

ನವೆಂಬರ್ 7ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!