ಸರ್ಕಾರಿ ಶಾಲೆ ಮಕ್ಕಳ ಊಟಕ್ಕೆ ಹುಳುಬಿದ್ದ ಅಕ್ಕಿ, ಬೇಳೆ ಬಳಕೆ

By Suvarna News  |  First Published Nov 19, 2022, 6:28 PM IST

ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಅವರು ಉಸ್ತುವಾರಿ ಹೊತ್ತಿರುವ ಕೊಡಗು ಜಿಲ್ಲೆಯ ಅದರಲ್ಲೂ ಸಾರ್ವಜನಿಕ ಶಿಕ್ಷಣದ ಉಪ ನಿರ್ದೇಶಕರ ಕಚೇರಿ (ಡಿಡಿಪಿಐ) ಪಕ್ಕದಲ್ಲೇ ಇರುವ ಶಾಲೆಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಹುಳು ಬಿದ್ದಿರುವ ತೊಗರಿಬೇಳೆ ಮತ್ತು ಹಾಲಿನ ಪುಡಿಯನ್ನು ಬಳಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ.


ಕೊಡಗು (ನ.19) : ರಾಜ್ಯದಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ಕೊಟ್ಟಿದ್ದೇವೆ. ವಾರ್ಷಿಕ ಭಾರಿ ಪ್ರಮಾಣದಲ್ಲಿ ಅನುದಾನ ಮೀಸಲಿಟ್ಟಿ ಖರ್ಚು ಮಾಡುತ್ತಿದ್ದೇವೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಶಿಕ್ಷಣ ಸಚಿವರಾದ ಬಿ. ಸಿ. ನಾಗೇಶ್ ಅವರು ಉಸ್ತುವಾರಿ ಹೊತ್ತಿರುವ ಕೊಡಗು ಜಿಲ್ಲೆಯ ಅದರಲ್ಲೂ ಸಾರ್ವಜನಿಕ ಶಿಕ್ಷಣದ ಉಪ ನಿರ್ದೇಶಕರ ಕಚೇರಿ (ಡಿಡಿಪಿಐ) ಪಕ್ಕದಲ್ಲೇ ಇರುವ ಶಾಲೆಯ ಸ್ಥಿತಿ ನೋಡಿದರೆ ನಿಮಗೆ ಸರ್ಕಾರಿ ಶಾಲೆಗಳು ಅಂದರೆ ಎಷ್ಟು ಅಸಡ್ಡೆ ಎನ್ನುವುದು ಗೊತ್ತಾಗುತ್ತದೆ.

ಸಂಪೂರ್ಣ ಹುಳುಬಿದ್ದು ಹಾಳಾಗಿರುವ ಐದಾರು ಮೂಟೆ ತೊಗರಿ ಬೇಳೆ (Toor dal), ಅವಧಿ ಮುಗಿದಿರುವ ಅಪಾರ ಪ್ರಮಾಣದ ಹಾಲಿನ ಪುಡಿ (Milk powder)ಯನ್ನು ಈ ಶಾಲೆಯಲ್ಲಿ ಸಂಗ್ರಹಣೆ ಮಾಡಲಾಗಿದೆ. ಈ ದೃಶ್ಯಗಳು ಮಡಿಕೇರಿ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಗೋದಾಮಿನಲ್ಲಿ (Primary school Warehouse) ಕಂಡು ಬಂದಿವೆ. 1 ರಿಂದ 8 ತರಗತರೆಗೆ ಇರುವ ಈ ಶಾಲೆಯಲ್ಲಿ 216 ವಿದ್ಯರ್ಥಿಗಳಿದ್ದಾರೆ. ಈ ವಿದ್ಯಾರ್ಥಿಗಳಿಗೆ (Students) ಕೊಡಬೇಕಾಗಿದ್ದ ಬೇಳೆ, ಹಾಲಿನ ಪೌಡರ್ ಸಂಪೂರ್ಣ ಹಾಳಾಗಿ ಹೋಗಿದೆ. ಹೀಗೆ ಏಳೆಂಟು ಚೀಲ ಬೇಳೆ ಹಾಳಾಗಿದ್ದು ಹೇಗೆ ಎಂದು ಕೇಳಿದರೆ ಮುಖ್ಯ ಶಿಕ್ಷಕಿ ಸುಶೀಲ ಅವರು ನನಗೆ ಗೊತ್ತಿಲ್ಲ. ನಾನು ಇತ್ತೀಚೆಗಷ್ಟೇ ಶಾಲೆಗೆ ವರ್ಗಾವಣೆಯಾಗಿ ಬಂದಿದ್ದೇನೆ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ.

Latest Videos

undefined

ಗಾಯಗೊಂಡಿದ್ದ ಬಿಸಿಯೂಟ ತಯಾರಕಿ ಸಾವು, ನಯಾಪೈಸೆ ಪರಿಹಾರವಿಲ್ಲ!

ಈ ಹಿಂದೆ ಇದ್ದವರು ತೊಗರಿ ಬೇಳೆ ಮತ್ತು ಹಾಲಿನ ಪೌಡರ್ ಉಳಿಸಿದ್ದಾರೆ. ನಾನು ಬಂದ ನಂತರ ಅದನ್ನು ಕ್ಲೀನ್ (Clean) ಮಾಡಿ ಬಳಸಬಹುದೇ ಎಂದು ಪ್ರಯತ್ನಿಸಿದೆ. ಆದರೆ ಅದು ಸಾಧ್ಯವಾಗಲಿಲ್ಲ. ಅದನ್ನು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಅವರಿಗೆ ಕೂಡ ಫೋನ್ ಮೂಲಕವೇ ಮಾಹಿತಿ ನೀಡಿದ್ದೇನೆ. ಅದನ್ನು ಮಕ್ಕಳ ಊಟಕ್ಕೆ ಬಳಸುತ್ತಿರಲಿಲ್ಲ. ಬೇರೆ ಬೇಳೆಯನ್ನು ಬಳೆಸುತ್ತಿದ್ದೆವು ಎಂದಿದ್ದಾರೆ. ಆದರೆ ಶಾಲಾ ಅಭಿವೃದ್ಧಿ ಮೇಲುಸ್ತುವಾರಿ ಸಮಿತಿ (SDMC) ಅಧ್ಯಕ್ಷ್ಯ ಶಿವಶಂಕರ್ (Shivashankar) ಅವರು ಹೇಳುವುದೇ ಬೇರೆ. ಶಾಲೆಯಲ್ಲಿ ಯಾವುದೇ ಸ್ವಚ್ಛತೆ ಇಲ್ಲ. ಸರಿಯಾದ ಪಾಠ ಪ್ರವಚನವೂ (Teaching) ನಡೆಯುವುದಿಲ್ಲ. ಶಾಲೆಯಲ್ಲಿನ ಸಮಸ್ಯೆ ಬಗ್ಗೆ ಬಿಇಒಗೆ ಹೇಳಿದರೆ ಲಿಖಿತವಾಗಿ ದೂರು ಕೊಡಿ ಎಂದು ಉಡಾಫೆ ಉತ್ತರ ನೀಡುತ್ತಿದ್ದಾರೆ ಎಂದು ಆರೋಪ (allegation) ಮಾಡುತ್ತಿದ್ದಾರೆ.

ರಾಯಚೂರಿನಲ್ಲಿ ಸಂಬಳದ ಹಣ ಖರ್ಚು ಮಾಡಿ 'ಬಿಸಿಯೂಟ' ನಡೆಸುವ ಶಿಕ್ಷಕರು

ಶಾಲೆಯಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ (Quality Education) ಸಿಗಬಹುದು ಎಂದು ಸೇರಿಸಿದೆವು. ಆದರೆ ಇಲ್ಲಿಗೆ ನಮ್ಮ ಮಕ್ಕಳನ್ನು ಸೇರಿಸಿ ಅವರ ಭವಿಷ್ಯವನ್ನು(Future) ನಾವೇ ಹಾಳು ಮಾಡಿದೆವೇ ಎಂಬ ನೋವು (Guilty) ಕಾಡುತ್ತಿದೆ. ಶಾಲೆ ಆರಂಭವಾಗಿ ಆರು ತಿಂಗಳಾದರೂ ಶಾಲಾ ವಿದ್ಯಾರ್ಥಿಗಳಿಗೆ ಇಂದಿಗೂ ಶೂಗಳನ್ನು ಕೊಟ್ಟಿಲ್ಲ. ಯಾಕೆ ಕೊಟ್ಟಿಲ್ಲ ಅಂತ ಶಿಕ್ಷಕಿಯನ್ನು ಕೇಳಿದರೆ ಅವು ಕ್ವಾಲಿಟಿಯಾಗಿರಲಿಲ್ಲ. ಶೂಗಳ ಬಗ್ಗೆ ಗುಣಮಟ್ಟದ ದೂರು ಬಂದಿದ್ದ ಹಿನ್ನೆಲೆಯಲ್ಲಿ ವಿತರಣೆ (Distribute) ಮಾಡಿಲ್ಲ. ಇನ್ನೆರಡು ದಿನದಲ್ಲಿ ಕೊಡುತ್ತೇವೆ ಎನ್ನುತ್ತಿದ್ದಾರೆ ಎಂದು ಎಸ್‌ಡಿಎಂಸಿ ಅಧ್ಯಕ್ಷ ಶಿವಶಂಕರ್ ಹೇಳುತ್ತಾರೆ.

click me!