ದಕ್ಷಿಣ ಕೊಡಗಿನಲ್ಲಿ ನಿಲ್ಲದ ಹುಲಿ ಹಾವಳಿ..!

By Kannadaprabha News  |  First Published Nov 17, 2019, 8:09 AM IST

ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ನಿರಂತರವಾಗಿ ಹುಲಿ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಈ ಭಾಗದ ಜನತೆ ಆತಂಕಗೊಂಡಿದ್ದಾರೆ. ಇತ್ತೀಚೆಗಷ್ಟೇ ಬಿರುನಾಣಿ ಸಮೀಪದ ಪರಕಟಗೇರಿ ಗ್ರಾಮದಲ್ಲಿ ರೈತರೊಬ್ಬರಿಗೆ ಸೇರಿದ ಹಸುವಿನ ಮೇಲೆ ದಾಳಿ ನಡೆಸಿದ ಹುಲಿ ಅದನ್ನು ಕೊಂದು ಹಾಕಿದೆ.


ಮಡಿಕೇರಿ(ನ.17): ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳ ಮೇಲೆ ನಿರಂತರವಾಗಿ ಹುಲಿ ದಾಳಿ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಇದರಿಂದ ಈ ಭಾಗದ ಜನತೆ ಆತಂಕಗೊಂಡಿದ್ದಾರೆ.

ಇತ್ತೀಚೆಗಷ್ಟೇ ಬಿರುನಾಣಿ ಸಮೀಪದ ಪರಕಟಗೇರಿ ಗ್ರಾಮದಲ್ಲಿ ರೈತರೊಬ್ಬರಿಗೆ ಸೇರಿದ ಹಸುವಿನ ಮೇಲೆ ದಾಳಿ ನಡೆಸಿದ ಹುಲಿ ಅದನ್ನು ಕೊಂದು ಹಾಕಿದೆ. ಮನೆಯ ಸಮೀಪದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸು ಹುಲಿ ದಾಳಿಗೆ ಬಲಿಯಾಗಿದ್ದು, ವಿಷಯ ತಿಳಿದ ಗಾಮಸ್ಥರು ಭಯಭೀತರಾಗಿದ್ದಾರೆ.

Latest Videos

undefined

ಉಪಚುನಾವಣೆ ಭರಾಟೆ: ಯಡಿಯೂರಪ್ಪ ಸೇರಿದಂತೆ BJP ನಾಯಕರ ವಿರುದ್ಧ ಫಸ್ಟ್ ಕೇಸ್ ಬುಕ್

ಇದೀಗ ಕಾಫಿ ತೋಟದಲ್ಲಿ ಅರೆಬಿಕಾ ಕಾಫಿ ಕಟಾವು ಸೇರಿದಂತೆ ತೋಟ ಕೆಲಸದ ಸಮಯವಾಗಿದ್ದು, ಹುಲಿ ಕಾಣಿಸಿಕೊಂಡ ಬಳಿಕ ತೋಟಗಳಲ್ಲಿ ಹುಲಿ ಅಡಗಿಕೊಂಡಿರಬಹುದೇನೋ ಎಂಬ ಭಯದಿಂದ ತೋಟಕ್ಕೆ ತೆರಳಲು ಕಾರ್ಮಿಕರು ಭಯಪಡುತ್ತಿದ್ದಾರೆ. ಹುಲಿ ದಾಳಿಗೆ ತುತ್ತಾಗಿ ಬಲಿಯಾಗಿರುವ ಹಸುವಿನ ಮಾಲೀಕರಿಗೆ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ರಸ್ತೆ ಮಧ್ಯದಲ್ಲೇ ಏಕಾ ಏಕಿ ಪ್ರತ್ಯಕ್ಷವಾದ ನಾಗರ ಹುತ್ತ

ಅರಣ್ಯ ಪ್ರದೇಶಗಳು ಕಡಿಮೆಯಾಗುತ್ತಿರುವುದು ಹುಲಿಗಳು ಕಾಡಾಂಚಿನ ಗ್ರಾಮಗಳಿಗೆ ಬರಲು ಕಾರಣವಾಗಿದೆ. ಅರಣ್ಯದಂಚಿನಲ್ಲಿ ದನ, ಕುರಿ, ಮೇಕೆಯನ್ನು ತಿನ್ನುತ್ತದೆ. ಈ ಸಂದರ್ಭ ಕಾಡಂಚಿನ ಗ್ರಾಮಸ್ಥರೊಂದಿಗೆ ಸಂಘರ್ಷವಾಗುತ್ತದೆ. ಜಿಲ್ಲೆಯಲ್ಲಿ ನಾಗರಹೊಳೆ ಹಾಗೂ ಬ್ರಹ್ಮಗಿರಿ ಅರಣ್ಯದಿಂದ ಹುಲಿಗಳು ಬರುತ್ತಿದ್ದು, ದಕ್ಷಿಣ ಕೊಡಗಿನ ಕೊಟ್ಟಗೇರಿ, ಅಬ್ಬೂರು, ಕೋತೂರು, ಕುಟ್ಟ, ಕಾನೂರು, ಕೋಣಗೇರಿ, ಬೆಕ್ಕೆಸೊಡ್ಲೂರು, ಹೈಸೊಡ್ಲೂರು ಮುಂತಾದ ಕಾಡಂಚಿನಲ್ಲಿ ಹುಲಿ ದಾಳಿ ನಡೆಸಿರುವ ಪ್ರಕರಣಗಳು ಹೆಚ್ಚಾಗಿ ನಡೆದಿದೆ.

ಪರಿಹಾರ ಹೆಚ್ಚಳಕ್ಕೆ ಆಗ್ರಹ:

ಹುಲಿ ದಾಳಿಯಿಂದ ಬಲಿಯಾದ ಒಂದು ಜಾನುವಾರಿಗೆ ಅರಣ್ಯ ಇಲಾಖೆಯಿಂದ ಇದೀಗ 10 ಸಾವಿರ ರು. ಪರಿಹಾರವನ್ನು ಸಂಬಂಧಪಟ್ಟವರ ಖಾತೆಗೆ ಹಾಕಲಾಗುತ್ತಿದೆ. ಆದರೆ ಇದು ಕಡಿಮೆ ಪರಿಹಾರವಾಗಿದೆ. ಇದರಿಂದ ಜಾನುವಾರುಗಳ ಮಾಲೀಕರಿಗೆ ನಷ್ಟವಾಗಿದೆ. ಒಂದು ಹಸುವಿನ ಬೆಲೆ 20ರಿಂದ 40 ಸಾವಿರ ರುಪಾಯಿವರೆಗೆ ಇದೆ. ಆದ್ದರಿಂದ ಪರಿಹಾರ ಧನವನ್ನು 10 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಿಸುವಂತೆ ಅರಣ್ಯ ಇಲಾಖಾಧಿ​ಕಾರಿಗಳು ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಆದರೆ ಈ ಬಗ್ಗೆ ಸರ್ಕಾರ ಇನ್ನೂ ನಿರ್ಧಾರ ಕೈಗೊಂಡಿಲ್ಲ.

ಪಕ್ಷೇತರರು ಸ್ಪರ್ಧಿಸಿರುವಲ್ಲಿ ಕಾಂಗ್ರೆಸ್‌ಗೆ ಸೋಲಿನ ಬುತ್ತಿ!

ಕಾನೂನು ಹೋರಾಟ:

ಹುಲಿ ದಾಳಿಯಿಂದ ಬಲಿಯಾದ ಹಸುವನ್ನು ಪಶು ವೈದ್ಯಾಧಿಕಾರಿಗಳು ತಪಾಸಣೆ ನಡೆಸಿ ಅದರ ವರದಿ ನೀಡುತ್ತಾರೆ. ಅವರು ನೀಡಿರುವ ವರದಿಯಂತೆ ಅರಣ್ಯ ಇಲಾಖೆಯವರು ಪರಿಹಾರ ವಿತರಿಸಬೇಕು. ಪರಿಹಾರ ವಿತರಣೆಯಲ್ಲಿ ಲೋಪವಾದರೆ ಈ ದಾಖಲೆಯನ್ನು ಇಟ್ಟುಕೊಂಡು ಕಾನೂನು ಹೋರಾಟ ಮಾಡಲಾಗುವುದು ಎಂದು ಜಿಲ್ಲಾ ರೈತ ಸಂಘ ಎಚ್ಚರಿಕೆ ನೀಡಿದೆ.

ಸಬ್ಸಿಡಿಯಲ್ಲಿ ಕೊಟ್ಟಿಗೆ!

ಜಾನುವಾರುಗಳ ಮೇಲೆ ಹುಲಿ ದಾಳಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕೊಟ್ಟಿಗೆಯನ್ನು ನಿರ್ಮಾಣ ಮಾಡಲು ಜಾನುವಾರುವಿನ ಮಾಲೀಕರಿಗೆ ಅರಣ್ಯ ಇಲಾಖೆಯಿಂದ ಸಬ್ಸಿಡಿ ನೀಡಲಾಗುತ್ತಿದೆ. ಜಾನುವಾರುಗಳನ್ನು ಗದ್ದೆಗಳಲ್ಲಿ ಕಟ್ಟಬಾರದು. ಕೊಟ್ಟಿಗೆಯಲ್ಲಿಯೇ ಕಟ್ಟಬೇಕು. ಇದರಿಂದ ದಾಳಿಯ ಪ್ರಮಾಣವನ್ನು ತಡೆಗಟ್ಟಬಹುದಾಗಿದೆ ಎನ್ನುತ್ತಾರೆ ಅರಣ್ಯಾಧಿ​ಕಾರಿಗಳು.

ಉಡುಪಿ: ಮಹಿಳೆಯರ ದೇಹ ಸ್ಪರ್ಶಿಸಿ ಪರಾರಿಯಾಗ್ತಿದ್ದ ಬೀದಿ ಕಾಮಣ್ಣ ಸೆರೆ

ಹುಲಿ ಹಾಗೂ ಆನೆ ಹಾವಳಿಯನ್ನು ನಿಯಂತ್ರಿಸಲು ಅರಣ್ಯ ಇಲಾಖೆಯವರಿಗೆ ಈವರೆಗೂ ಸಾಧ್ಯವಾಗಿಲ್ಲ. ಹುಲಿ ಕಂಡುಬಂದ ಸಂದರ್ಭ ಅದನ್ನು ಬೋನಿನ ಮೂಲಕ ಸೆರೆ ಹಿಡಿದು ಸ್ಥಳಾಂತರ ಮಾಡಬೇಕು. ಆದರೆ ಇವರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಅದನ್ನು ಓಡಿಸುತ್ತಾರೆ. ಇದರಿಂದ ಹುಲಿ ದಾಳಿ ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿದೆ. ದಾಳಿಯಿಂದ ಬಲಿಯಾದ ಜಾನುವಾರಿನ ಮಾಲೀಕರಿಗೆ ಪರಿಹಾರವನ್ನು ಹೆಚ್ಚು ನೀಡಬೇಕು ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಚಿಮ್ಮಂಗಡ ಗಣೇಶ್‌ ಒತ್ತಾಯಿಸಿದ್ದಾರೆ.

ಪಂಪ್‌ವೆಲ್‌ ಮೇಲ್ಸೇತುವೆ ಕಾಮಗಾರಿ ಪೂರ್ಣಕ್ಕೆ ಮತ್ತೊಂದು ಗಡುವು!

ಬ್ರಹ್ಮಗಿರಿ ಅರಣ್ಯ ವ್ಯಾಪ್ತಿಯಿಂದ ಹುಲಿಗಳು ಬರುತ್ತಿದ್ದು, ಪಗಟಗೇರಿಯಲ್ಲಿ ಜಾನುವಾರುಗಳ ಮೇಲೆ ಹುಲಿ ದಾಳಿ ಮಾಡಿರುವ ಘಟನೆಗಳು ನಡೆದಿದೆ. ಜಾನುವಾರುಗಳನ್ನು ಗದ್ದೆಗಳಲ್ಲಿ ಕಟ್ಟುವುದರಿಂದ ದಾಳಿಯಾಗುತ್ತಿದೆ. ಹೀಗಾಗಿ ಕೊಟ್ಟಿಗೆ ಕಟ್ಟಲು ಜಾನುವಾರುಗಳ ಮಾಲೀಕರಿಗೆ ಅರಣ್ಯ ಇಲಾಖೆಯಿಂದ ಸಬ್ಸಿಡಿ ನೀಡಲಾಗುತ್ತಿದೆ. ಇದಲ್ಲದೆ ಹುಲಿ ಸಂಚಾರ ಮಾಡುವ ಸ್ಥಳಗಳಲ್ಲಿ ಸೋಲಾರ್‌ ದೀಪವನ್ನು ಅಳವಡಿಸಲಾಗುತ್ತಿದೆ ಎಂದು ಶ್ರೀಮಂಗಲದ ಆರ್‌ಎಫ್‌ಒ ವೀರೇಂದ್ರ ಮರಿಬಸಣ್ಣವರ್‌ ಹೇಳಿದ್ದಾರೆ.

- ವಿಘ್ನೇಶ್‌ ಎಂ. ಭೂತನಕಾಡು

click me!