ತಡ ರಾತ್ರಿ ಕಾಡಿನೊಳಕ್ಕೆ ಪ್ರವೇಶಿಸಿ ಹಂದಿಗೆ ಇಟ್ಟ ಗುರಿ ತಪ್ಪಿದೆ. ಪರಿಣಾಮ ರಣಬೇಟೆಗಾರ ಆಸ್ಪತ್ರೆ ಸೇರಿದ್ದಾನೆ. ಈ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಮಡಿಕೇರಿ(ನ.07): ಬೇಟೆಗೆ ತೆರಳಿದ್ದ ವೇಳೆ ವ್ಯಕ್ತಿಗೆ ಗುಂಡೇಟು ತಗುಲಿ ಗಂಭೀರವಾಗಿ ಗಾಯಗೊಂಡ ಘಟನೆ ಕೊಡಗು ಜಿಲ್ಲೆಯ ಅಯ್ಯಂಗೇರಿ ಗ್ರಾಮದಲ್ಲಿ ನಡೆದಿದೆ. ಸ್ನೇಹಿತರಾದ ಸಂತೋಷ್, ಲೋಕೇಶ್, ಚಂದ್ರಶೇಖರ್ ಜೊತೆ ಸೇರಿ ಸುರೇಶ್ ಶಿಖಾರಿಗೆ ತೆರಳಿದ್ದ ವೇಳೆ ಘಟನೆ ನಡೆದಿದೆ.
ಇದನ್ನೂ ಓದಿ: ಕೊಡಗು: ಚಲಿಸುತ್ತಿದ್ದ ವ್ಯಾನ್‌ಗೆ ತಡರಾತ್ರಿ ಅಚಾನಕ್ ಬೆಂಕಿ
ಅಯ್ಯಂಗೇರಿ ಕಾಡಿಗೆ ಬೇಟೆಗೆ ತೆರಳಿದ್ದ ಸುರೇಶ್ ನೇತೃತ್ವದ ತಂಡ ಹಂದಿಗೆ ಗುಂಡು ಹಾರಿಸಿದ್ದಾರೆ. ಆದರೆ ಬೇಟೆ ಗುರಿ ತಪ್ಪಿದ ಕಾರಣ ಗುಂಡು ನೇರವಾಗಿ ಸುರೇಶ್ ಹೊಟ್ಟೆ ಹಾಗೂ ಕಾಲಿಗೆ ತಗುಲಿದೆ. ಗಾಯಗೊಂಡ ಸುರೇಶ್ ವಿರಾಜಪೇಟೆ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕೊಡಗಿನ ಭೂಮಿಯೊಳಗೆ ನಿಗೂಢ ಸದ್ದು: ಬೆಚ್ಚಿದ ಜನತೆ
ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಬೇಟೆಗೆ ತೆರಳಿದ್ದ ಮೂವರನ್ನು ಬಂಧಿಸಿದ್ದಾರೆ. ಕಳೆದ ರಾತ್ರಿ ಘಟನೆ ನಡೆದಿದ್ದರೂ ತಡವಾಗಿ ಬೆಳಕಿಗೆ ಬಂದಿದೆ. ಅಯ್ಯಂಗೇರಿ ಗ್ರಾಮದಲ್ಲಿ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಬೇಟೆಗೆ ತೆರಳುವವರ ವಿರುದ್ದ ಕಾರ್ಯಚರಣೆ ನಡೆಸಲು ಮುಂದಾಗಿದ್ದಾರೆ.