ಚಲಿಸುತ್ತಿದ್ದ ವ್ಯಾನ್ ಅಚಾನಕ್ ಆಗಿ ಬೆಂಕಿಗಾಹುತಿಯಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ಚಲಿಸುತ್ತಿದ್ದ ವ್ಯಾನ್‌ಗೆ ತಡರಾತ್ರಿ ಬೆಂಕಿ ಹತ್ತಿಕೊಂಡಿದೆ.
ಕೊಡಗು(ನ.07): ಚಲಿಸುತ್ತಿದ್ದ ವ್ಯಾನ್ ಅಚಾನಕ್ ಆಗಿ ಬೆಂಕಿಗಾಹುತಿಯಾಗಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ಚಲಿಸುತ್ತಿದ್ದ ವ್ಯಾನ್‌ಗೆ ತಡರಾತ್ರಿ ಬೆಂಕಿ ಹತ್ತಿಕೊಂಡಿದೆ.
ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲದಲ್ಲಿ ತಡರಾತ್ರಿ ಘಟನೆ ನಡೆದಿದ್ದು ಚಲಿಸುತ್ತಿದ್ದ ವ್ಯಾನ್ ಬೆಂಕಿಗಾಹುತಿಯಾಗಿದೆ. ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಾಹನ ಚಾಲನೆ ಮಾಡುತ್ತಿದ್ದ ಮನು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಡಗಿನಲ್ಲಿ ಬಣ್ಣ ಬಣ್ಣದ ಚಿಟ್ಟೆಗಳ ಚಿತ್ತಾರ..!
ತಡರಾತ್ರಿ ವ್ಯಾನ್‌ನಲ್ಲಿ ಹೋಗುತ್ತಿದ್ದ ವೇಳೆ ರಸ್ತೆ ಬದಿಗೆ ವ್ಯಾನ್ ನಿಲ್ಲಿಸಿ ಕೆಳಗಿಳಿದಿದ್ದರು. ಈ ಸಂದರ್ಭ ಬೆಂಕಿ ಕಾಣಿಸಿಕೊಂಡು ವ್ಯಾನ್ ಹೊತ್ತಿ ಉರಿದಿದೆ. ನೋಡ ನೋಡುತ್ತಿದ್ದಂತೆ ಸಂಪೂರ್ಣ ವ್ಯಾಪಿಸಿದ ಬೆಂಕಿಯಿಂದ ಮಾರುತಿ ಓಮ್ನಿ ವ್ಯಾನ್ ಸುಟ್ಟು ಕರುಕಲಾಗಿದೆ.
ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿರೋ ಶಂಕೆ ವ್ಯಕ್ತವಾಗಿದ್ದು ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.