ಕೊಡಗು ಕೊರೋನಾ ವೈರಸ್ ಜೊತೆಗೆ ಇದೀಗ ಮಹಾಮಳೆಗೆ ತತ್ತರಿಸಿದೆ. ಕೊರೋನಾ ವೈರಸ್ ಕಾರಣ ಮಾರ್ಚ್ ತಿಂಗಳಿನಿಂದ ಕೆಲಸವಿಲ್ಲದೆ ಪರದಾಡುತ್ತಿದ್ದ ಜನರು, ಅನ್‌ಲಾಕ್ ಆರಂಭಗೊಳ್ಳುತ್ತಿದ್ದಂತೆ ಕೂಲಿ ಕಾರ್ಮಿಕರು ಮತ್ತಷ್ಟು ಸಂಕಷ್ಟ ಅನುಭವಿಸುವಂತಾಗಿದೆ. ಕಾರ್ಮಿಕರು, ಬಡ ವಿದ್ಯಾರ್ಥಿಗಳು ಸಾರಿಗೆ ವ್ಯವಸ್ಥೆ ಇಲ್ಲದೆ ನಡೆದುಕೊಂಡೇ ಸಾಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಹೀಗಾಗಿ ಇದೀಗ ಅಪ್ಪ-ಮಗ ಬಡವರ ಸಂಕಷ್ಟಕ್ಕೆ ನೆರವಾಗಿದ್ದಾರೆ.
ಮಡಿಕೇರಿ(ಆ.11): ಕೊರೋನಾ ವೈರಸ್ ಹೇರಲಾಗಿದ್ದ ಲಾಡ್‌ಡೌನ್ ಸಡಿಲಿಕೆ ಮಾಡಿದ ಬಳಿಕ ಕೊಡಗಿನ ಹಲವು ಬಡವರು, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು ತೀವ್ರ ಸಂಕಷ್ಟ ಪಡುವಂತಾಗಿದೆ. ಸಾರಿಗೆ ವ್ಯವಸ್ಥೆ ಇಲ್ಲದೆ, ಇರುವ ಜೀಪ್, ಆಟೋ ರಿಕ್ಷಾದಲ್ಲಿ ಪ್ರಯಾಣ ಮಾಡಲು ಸಾಧ್ಯವಾಗದ ಪರಿಸ್ಥಿತಿ ಇದೆ. ಹೀಗಾಗಿ ಹಲವರು 5 ರಿಂದ 10 ಕಿ.ಮೀ ನಡೆದುಕೊಂಡೇ ಹೋಗುತ್ತಿದ್ದಾರೆ. ಈ ಸಮಸ್ಯೆಯನ್ನು ಅರಿತ ಕೂಡಗಿನ ವಿನೋದ್ ಶಿವಪ್ಪ ಹಾಗೂ ಪುತ್ರ ವಿಶಾಲ್ ಶಿವಪ್ಪ ಇದೀಗ ಸಂಕಷ್ಟದಲ್ಲಿದ್ದವರಿಗೆ ಸೈಕಲ್ ವಿತರಿಸಿದ್ದಾರೆ.
ಆಪರೇಶನ್ ಬ್ರಹ್ಮಗಿರಿ: ಅರ್ಚಕರ ಕುಟುಂಬದ ಇನ್ನೊಂದು ಶವ ಪತ್ತೆ
ನನ್ನ ಅಜ್ಜ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಇದನ್ನು ತಂದೆ ಮುಂದುವರಿಸಿದರು. ಇದೀಗ ನಾನು ತಂದೆಯ ಜೊತೆ ಸೇರಿ ಈ ಕಾರ್ಯವನ್ನು ಮುಂದುವರಿಸುತ್ತಿದ್ದೇನೆ. ಎಸ್ಟೇಟ್ ಕೆಲಸಕ್ಕೆ ತೆರಳುವ ಕಾರ್ಮಿಕರು ನಡೆದುಕೊಂಡೇ ಹೋಗುತ್ತಿದ್ದರು. 10 ಕಿಲೋಮೀಟರ್‌ಗೂ ಹೆಚ್ಚು ದೂರವನ್ನು ಕಾಲ್ನಡಿಗೆಯಲ್ಲೇ ಪ್ರಯಾಣ ಮಾಡುತ್ತಿದ್ದರು. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಕಿಲೋಮೀಟರ್ ಗಟ್ಟಲೆ ನಡೆಯುತ್ತಿರುವ ದೃಶ್ಯ ನೋವು ತರಿಸಿತ್ತು. ಹೀಗಾಗಿ ಸೈಕಲ್ ವಿತರಣೆ ಮಾಡಿದ್ದೇವೆ ಎಂದು ವಿಶಾಲ್ ಶಿವಪ್ಪ ಹೇಳಿದ್ದಾರೆ.
ಅರ್ಚಕರ ಆಸ್ತಿ ಲೆಕ್ಕಾಚಾರದ ಬಗ್ಗೆ ಚರ್ಚೆ ಶುರು; ಮನೆಯಲ್ಲಿತ್ತಂತೆ 30 ಲಕ್ಷ ಕ್ಯಾಶ್..!.
ಇದು ನಾವು ಮಾಡುತ್ತಿರುವ ಸಣ್ಣ ಸಹಾಯ. ನಮ್ಮ ಕೈಲಾದ ಸಹಾಯ ಮಾಡುತ್ತೇವೆ. ವಿದ್ಯಾರ್ಥಿಗಳಿಗೆ , ಕೂಲಿ ಕಾರ್ಮಿಕರ ಮುಖದಲ್ಲಿ ಸಂತಸ ನೋಡಿ ನಮ್ಮ ಸಣ್ಣ ಸಹಾಯ ಸಾರ್ಥಕ ಎಂದೆನಿಸಿತು ಎಂದು ವಿಶಾಲ್ ಶಿವಪ್ಪ ಹೇಳಿದ್ದಾರೆ.
ಮಾರ್ಚ್ ತಿಂಗಳಿಂದ ಕೊರೋನಾ ಹೊಡೆತ ಹಾಗೂ ಲಾಕ್‌ಡೌನ್ ಹೊಡೆತಕ್ಕೆ ನಲುಗಿದೆ. ಇದರ ಬೆನ್ನಲ್ಲೇ ಪ್ರವಾಹ, ಭೂಕುಸಿತಕ್ಕೆ ಕೂಡಗಿನ ಜನರ ಬದುಕು ದುಸ್ತರವಾಗಿದೆ. ಹಲವರು ಮನೆ ಮಠ ಕಳೆದುಕೊಂಡಿದ್ದಾರೆ. ಹಲವರು ಭೂ ಸಮಾಧಿಯಾಗಿದ್ದಾರೆ.