ಒಂದೂವರೆ ವರ್ಷದ ಕಂದಮ್ಮನಿಗೂ ತಟ್ಟಿದ ಲಾಕ್‌ಡೌನ್ ಬಿಸಿ: ಔಷಧಿ ಸಿಗದೆ ಕಂಗಾಲಾದ ಕುಟುಂಬಸ್ಥರು| ಬಾಗಲಕೋಟೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ನಡೆದ ಘಟನೆ| ಮಾತ್ರೆ ಸಿಗದೆ ಮಗು ವಿಚಿತ್ರವಾಗಿ ಆಡುತ್ತಿರುವ ಮಗು|
ಬಾಗಲಕೋಟೆ(ಮೇ.03): ದೇಶಾದ್ಯಂತ ಏಕಾಏಕಿ ಲಾಕ್‌ಡೌನ್ ಆದ ಹಿನ್ನೆಲೆಯಲ್ಲಿ ಮಗುವಿನ ಮೆಡಿಸಿಗ್‌ಗಾಗಿ ಕುಟುಂಬವೊಂದು ಪರದಾಡುತ್ತಿರುವ ಘಟನೆ ಜಿಲ್ಲೆಯ ಬನಹಟ್ಟಿ ನಗರದಲ್ಲಿ ನಡೆದಿದೆ. ಮಾತ್ರೆ ಸಿಗದಿದ್ದರಿಂದ ಮಗುವಿನ ಕುಟುಂಬ ಕಣ್ಣೀರಿಡುತ್ತಿದೆ.
ಶಂಬುಲಿಂಗ ಜುಂಜಪ್ಪನವರ ಎಂಬುವರ ಒಂದೂವರೆ ವರ್ಷದ ಮಗು ಚೇತನ್ ಕೈ-ಕಾಲು ಸಂಬಂಧಿ (ಸ್ವಾಧೀನ)ವಿಚಿತ್ರ ಕಾಯಿಲೆಯಿಂದ ಬಳಲುತ್ತಿದೆ. ಮಗುವಿಗೆ ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಔಷಧಿಗಳು ಖಾಲಿಯಾಗಿ ಒಂದು ವಾರವೇ ಆಗಿದೆ. ಸಕಾಲಕ್ಕೆ ಮಾತ್ರ ಸಿಗದಿದ್ದರಿಂದ ಮಗು ವಿಚಿತ್ರವಾಗಿ ಆಡುತ್ತಿದೆ. ಇದರಿಂದ ಮಗುವಿನ ತಾಯಿ ರೋಧನೆ ಹೇಳತೀರದಂತಾಗಿದೆ.
ಜೀವದ ಹಂಗು ತೊರೆದು ಕೊರೋನಾ ವಿರುದ್ಧ ಹೋರಾಟ: ಆಶಾ ಕಾರ್ಯಕರ್ತೆಯರ ಪಾದಪೂಜೆ ಮಾಡಿ ಗೌರವ ಸಲ್ಲಿಕೆ
ಈ ಬಡ ಕುಟುಂಭ ನೇಕಾರಿಕೆ-ಕೂಲಿ ಮಾಡಿ ಬದುಕು ಸಾಗಿಸುತ್ತಿತ್ತು. ಆದರೆ, ಲಾಕ್‌ಡೌನ್ ಆದ ಹಿನ್ನೆಲೆ ಕುಟುಂಬಕ್ಕೆ ದುಡಿಮೆಯಿಲ್ಲ, ಔಷಧಿ ಕೊಂಡುಕೊಳ್ಳಲು ಹಣವೂ ಕೂಡ ಇಲ್ಲ. ಹೀಗಾಗಿ ಮಗುವಿನ ಕುಟುಂಬಸ್ಥರು ಅಕ್ಷರಶಃ ಅತಂತ್ರ ಪರಿಸ್ಥಿತಿಯಲ್ಲಿದ್ದಾರೆ. ಮಗುವಿನ ನರಳಾಟ ಕಂಡು ಕುಟುಂಬಸ್ಥರು ಕಣ್ಣಿರಲ್ಲಿ ಕೈ ತೊಳೆಯುವಂತ ಪರಿಸ್ಥಿತಿ ನಿರ್ಮಾಣವಾಗಿದೆ.