ಪಕ್ಷದ ನಿರ್ಲಕ್ಷ್ಯಕ್ಕೆ ಬೇಸತ್ತು ಕಾಂಗ್ರೆಸ್ ಸದಸ್ಯರೊಬ್ಬರು ರಾಜೀನಾಮೆ ನೀಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಗೋಣಿಕೊಪ್ಪ ನಗರ ಕಾಂಗ್ರೆಸ್ ಒಬಿಸಿ ಘಟಕ ಅಧ್ಯಕ್ಷರಾಗಿದ್ದ ನಾರಾಯಣಸ್ವಾಮಿ ನಾಯ್ಡು ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಗೋಣಿಕೊಪ್ಪ(ನ.06): ಕಾಂಗ್ರೆಸ್ ಪಕ್ಷದಲ್ಲಿನ ನಿರ್ಲಕ್ಷ್ಯಕ್ಕೆ ಬೇಸತ್ತು ಕಾಂಗ್ರೆಸ್‌ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ್ದೇನೆ ಎಂದು ಗೋಣಿಕೊಪ್ಪ ನಗರ ಕಾಂಗ್ರೆಸ್ ಒಬಿಸಿ ಘಟಕ ಅಧ್ಯಕ್ಷರಾಗಿದ್ದ ನಾರಾಯಣಸ್ವಾಮಿ ನಾಯ್ಡು ತಿಳಿಸಿದ್ದಾರೆ.
ಕಾಂಗ್ರೆಸ್‌ನಲ್ಲಿ ಉತ್ತಮ ನಾಯಕರಾಗಿದ್ದ ಬಿ.ಟಿ. ಪ್ರದೀಪ್ ನಾಯಕತ್ವವನ್ನು ಮೆಚ್ಚಿ ಪಕ್ಷಕ್ಕೆ ಸೇರಿದ್ದೆ. ಆದರೆ, ಅಲ್ಲಿನ ನಾಯಕತ್ವದ ಕೊರತೆ, ನಿರ್ಲಕ್ಷ್ಯ ಮನೋಭಾವನೆ ಅರಿತು ಪಕ್ಷ ತೊರೆದಿದ್ದು, ಬಿಜೆಪಿ ಪಕ್ಷದ ನಾಯಕರು ಸೂಕ್ತ ಬೆಂಬಲ ನೀಡಿದರೆ, ಗೋಣಿಕೊಪ್ಪ ಭಾಗದ ಸುಮಾರು ನೂರಾರು ನನ್ನ ಬೆಂಬಲಿಗರನ್ನು ಒಂದುಗೂಡಿಸಿ ಬಿಜೆಪಿ ಪಕ್ಷಕ್ಕೆ ಸೇವೆ ನೀಡುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಕೊಡಗಿನ ಭೂಮಿಯೊಳಗೆ ನಿಗೂಢ ಸದ್ದು: ಬೆಚ್ಚಿದ ಜನತೆ
ಈಗಾಗಲೇ ನಗರ ಕಾಂಗ್ರೆಸ್ ಅಧ್ಯಕ್ಷ ಕುಲ್ಲಚಂಡ ಗಣಪತಿ ಅವರಿಗೆ ರಾಜಿನಾಮೆ ಪತ್ರ ನೀಡಿದ್ದು, ಮಾಧ್ಯಮದ ಮೂಲಕ ಜಿಲ್ಲಾಧ್ಯಕ್ಷ ಹಾಗೂ ಒಬಿಸಿ ಅಧ್ಯಕ್ಷರಿಗೆ ತಿಳಿಸುತ್ತಿದ್ದೇನೆ ಎಂದರು. ಗೋಣಿಕೊಪ್ಪ ಗ್ರಾಮ ಪಂಚಾಯಿತಿಯಲ್ಲಿ ಹೆಚ್ಚು ಸದಸ್ಯರನ್ನು ಹೊಂದಿದ್ದರೂ ಕಾಂಗ್ರೆಸ್ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಇದರಿಂದಾಗಿ ಈಗ ನಡೆಯುತ್ತಿರುವ ಸ್ಥಳೀಯ 5ನೇ ವಾರ್ಡ್ ಉಪ ಚುನಾವಣೆಯಲ್ಲಿ ತಸ್ಲೀಮ್ ಎಂಬವರಿಗೆ ಬೆಂಬಲ ನೀಡಿ ಮತಯಾಚನೆಯಲ್ಲಿ ತೊಡಗಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ.
4 ವರ್ಷದ ನಂತರ ತುಂಬಿದ ಜಲಾಶಯ, ನೀರಿನಲ್ಲಿ ಈಜಾಡಿದ ಕುಣಿಗಲ್ ಶಾಸಕ..!