ನಡತೆ ಪ್ರಶ್ನಿಸಿ ಪತ್ನಿಗೆ 30ಕ್ಕೂ ಹೆಚ್ಚು ಬಾರಿ ಇರಿದು ಕೊಲೆ| ಮಡಿಕೇರಿ ಜನರನ್ನು ಬೆಚ್ಚಿಬೀಳಿಸಿದ ಘಟನೆ|ಪತ್ನಿಯ ನಡತೆ ಸರಿಯಲ್ಲ ಎಂದು ಪತಿ ಶರೀಫ್ ಆಗಾಗ ಜಗಳ ತೆಗೆಯುತ್ತಿದ್ದ| ಸಿಟ್ಟಿನ ಬರದಲ್ಲಿ ಪತ್ನಿಗೆ ಮನಬಂದಂತೆ ಚಾಕುವಿನಿಂದ ಇರಿದ ಶರೀಫ್|
ಮಡಿಕೇರಿ[ನ.4]: ವ್ಯಕ್ತಿಯೊಬ್ಬ ತನ್ನ ಪತ್ನಿಯ ನಡತೆ ಪ್ರಶ್ನಿಸಿ ಆಕೆಗೆ ಮೂವತ್ತಕ್ಕೂ ಹೆಚ್ಚು ಬಾರಿ ಇರಿದು ಬರ್ಬರವಾಗಿ ಕೊಂದ ಘಟನೆ ನಗರದ ಹೊಸ ಬಡಾವಣೆಯಲ್ಲಿ ನಡೆದಿದೆ. ಕೊಲೆಯಾದ ಮಹಿಲೆಯನ್ನು ಜುಬೈದಾ (25) ಎಂದು ಗುರುತಿಸಲಾಗಿದೆ. ಈ ಸಂಬಂಧ ಆರೋಪಿ ಪತಿ ಶರೀಫ್ (27)ನನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನಗರದ ಹೊಸ ಬಡಾವಣೆಯಲ್ಲಿ ಶರೀಫ್ ದಂಪತಿ ನೆಲೆಸಿದ್ದು, ಇವರಿಗೆ ಇಬ್ಬರು ಮಕ್ಕಳೂ ಇದ್ದಾರೆ. ಪತ್ನಿಯ ನಡತೆ ಸರಿಯಲ್ಲ ಎಂದು ಪತಿ ಶರೀಫ್ ಆಗಾಗ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಶನಿವಾರ ರಾತ್ರಿಯೂ ಪತಿ-ಪತ್ನಿ ನಡುವೆ ಇದೇ ವಿಚಾರವಾಗಿ ಗಲಾಟೆ ನಡೆದಿದೆ. ನಂತರ ಅದು ತಾರಕಕ್ಕೇರಿದಾಗ ಸಿಟ್ಟಿನ ಬರದಲ್ಲಿ ಶರೀಫ್ ತನ್ನ ಪತ್ನಿಗೆ ಮನಬಂದಂತೆ ಚಾಕುವಿನಿಂದ ಇರಿದ್ದಾನೆ. ಜುಬೈದಾ ದೇಹದ ಮೇಲೆ 30ಕ್ಕೂ ಹೆಚ್ಚು ಗಾಯದ ಗುರುತುಗಳಿದ್ದು, ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಾಳೆ.
ಈ ಸಂಬಂಧ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.