ಭೂಮಿಯ ಒಳಭಾಗದಿಂದ ನದಿಯಲ್ಲಿ ನೀರು ಹರಿಯುತ್ತಿರುವ ಸದ್ದು ಕೇಳಿ ಬರುತ್ತಿದ್ದು, ಜಲಸ್ಫೋಟ ಆಗಬಹುದು ಎಂಬ ಆತಂಕ ಇಲ್ಲಿನ ಜನರಲ್ಲಿ ಮನೆ ಮಾಡಿದೆ. ಎಲ್ಲಿ ಈ ಘಟನೆಯಾಗಿದೆ ಇಲ್ಲಿದೆ ಮಾಹಿತಿ
ನಾಪೋಕ್ಲು [ನ.06]: ಮಡಿಕೇರಿ ತಾಲೂಕಿನ ಪೆರೂರಿನ ಇಗ್ಗುತ್ತಪ್ಪ ಬೆಟ್ಟದಲ್ಲಿ ನಿಗೂಢ ಶಬ್ದ ಕೇಳಿ ಬರುತ್ತಿದ್ದು, ನಾಗರಿಕರು ಆತಂಕಕ್ಕೆ ಒಳಗಾಗಿದ್ದಾರೆ. ಸೋಮವಾರ ರಾತ್ರಿಯಿಂದ ಭೂಮಿಯ ಒಳಭಾಗದಿಂದ ನದಿಯಲ್ಲಿ ನೀರು ಹರಿಯುತ್ತಿರುವ ಸದ್ದು ಕೇಳಿ ಬರುತ್ತಿದ್ದು, ಜಲಸ್ಫೋಟ ಆಗಬಹುದು ಎಂಬ ಆತಂಕ ಇಲ್ಲಿನ ಜನರಲ್ಲಿ ಮನೆ ಮಾಡಿದೆ. ಕಳೆದ ಹಲವು ದಿನಗಳಿಂದಲೂ ಈ ವಿಚಿತ್ರ ಶಬ್ದ ಕೇಳಿ ಬರುತ್ತಿದ್ದು, ಮೂರು ದಿನಗಳಿಂದ ಮತ್ತಷ್ಟುಜೋರಾಗಿದೆ.
ಅಯ್ಯಂಗೇರಿಯಲ್ಲೂ ವಾರದ ಹಿಂದೆಯಷ್ಟೇ ನಿಗೂಢ ಕೇಳಿ ಬಂದಿತ್ತು. ಕಳೆದ ವರ್ಷ ಮಡಿಕೇರಿ ಸುತ್ತಮುತ್ತಲಿನ ವ್ಯಾಪ್ತಿಯಲ್ಲಿ ಭೂಕುಸಿತಕ್ಕೂ ಮೊದಲು ಇದೇ ರೀತಿಯ ಶಬ್ದ ಕೇಳಿ ಬಂದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಈ ಶಬ್ದದ ಕುರಿತು ಭೂ ವಿಜ್ಞಾನಿ ಡಾ.ಲತಾ ಪ್ರತಿಕ್ರಿಯೆ ನೀಡಿದ್ದು, ಭೂಮಿಯೊಳಗೆ ನೀರು ಹರಿಯುವಾಗ (ಅಂತರ್ಜಲ) ಮಣ್ಣನ್ನು ಕೊಚ್ಚಿಕೊಂಡು ಹೋಗುತ್ತದೆ. ಹರಿವಿಗೆ ಅಡ್ಡಿ ಉಂಟಾದಾಗ ಅದು ತನ್ನ ಹರಿವನ್ನು ಬದಲಿಸುತ್ತದೆ. ಆ ಸಂದರ್ಭದಲ್ಲಿ ಉಂಟಾಗುವ ಶಬ್ದವೇ ಜಿಲ್ಲೆಯ ವಿವಿಧೆಡೆ ಕೇಳಿಬರುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಇದನ್ನು ಹೈ ಗ್ರೌಂಡ್ ವಾಟರ್ ಲೆವೆಲ್ ಸಾಯಿಲ್ ಪೈಪಿಂಗ್ ಎನ್ನುತ್ತಾರೆ. ಇದು ಪ್ರಕೃತಿ ಸಹಜ ಪ್ರಕ್ರಿಯೆ. ಕೊಡಗಿನಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆ ಅಂತರ್ಜಲ ಮಟ್ಟಹೆಚ್ಚಾಗಿದೆ. ಹಾಗಾಗಿ ಭೂಮಿ ಪದರದಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ಶಬ್ದ ಬರುತ್ತಿದೆ. ಜನ ಆತಂಕ ಪಡುವ ಅಗತ್ಯವಿಲ್ಲ ಎಂದು ಮಾಹಿತಿ ನೀಡಿದ್ದಾರೆ.