ಒಟ್ಟು 1600 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿರುವ ವೈಟಿಪಿಎಸ್‌ನಲ್ಲಿ ತಲಾ 800 ಮೆಗಾ ವ್ಯಾಟ್ ಸಾಮರ್ಥ್ಯವುಳ್ಳ 1 ಮತ್ತು 2ನೇ ಘಟಕಗಳಿದ್ದು, ಅದರಲ್ಲಿ 1ನೇ ಘಟಕ ಆ.21 ರಿಂದ ನ.29 ವರೆಗೆ ಯಾವುದೇ ರೀತಿ ಅಡತಡೆ, ಲೋಪ-ದೋಷ, ತಾಂತ್ರಿಕ ಸಮಸ್ಯೆಗಳಿಲ್ಲದೆ ನೂರು ದಿನ ನಿರಂತರ ವಿದ್ಯುತ್ ಉತ್ಪಾದಿಸಿ ಸಾಧನೆ ಮಾಡಿದೆ. ಈ ಅವಧಿಯಲ್ಲಿ ಘಟಕವು 1038.5 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿದೆ.
ರಾಯಚೂರು(ನ.30): ಇಲ್ಲಿನ ರಾಯಚೂರು ವಿದ್ಯುತ್ ನಿಗಮ ನಿ.(ಆರ್‌ಪಿಸಿಎಲ್) ಸಂಚಾಲಿತ ಯರಮರಸ್ ಉಷ್ಣ ವಿದ್ಯುತ್ ಸ್ಥಾವರದ (ವೈಟಿಪಿಎಸ್) ಒಂದನೇ ಘಟಕವು ಸತತ 100 ದಿನ ನಿರಂತರವಾಗಿ ವಿದ್ಯುತ್ ಉತ್ಪಾದಿಸಿ ಇತಿಹಾಸ ನಿರ್ಮಿಸಿದೆ. ವೈಟಿಪಿಎಸ್ ಆರಂಭಗೊಂಡಾಗಿನಿಂದಲೂ ಘಟಕ ಇಷ್ಟು ದಿನ ಕರೆಂಟ್ ಉತ್ಪಾದಿಸಿದ್ದಿಲ್ಲ. ಇದೀಗ 800 ಮೆಗಾ ವ್ಯಾಟ್ ಸಾಮರ್ಥ್ಯದ 1ನೇ ಘಟಕ ಸತತ 100 ದಿನ ವಿದ್ಯುತ್ ಉತ್ಪಾದಿಸಿ ಇದೀಗ ಹೊಸ ಮೈಲುಗಲ್ಲು ಸ್ಥಾಪಿಸಿದೆ.
ಒಟ್ಟು 1600 ಮೆಗಾ ವ್ಯಾಟ್ ಸಾಮರ್ಥ್ಯ ಹೊಂದಿರುವ ವೈಟಿಪಿಎಸ್‌ನಲ್ಲಿ ತಲಾ 800 ಮೆಗಾ ವ್ಯಾಟ್ ಸಾಮರ್ಥ್ಯವುಳ್ಳ 1 ಮತ್ತು 2ನೇ ಘಟಕಗಳಿದ್ದು, ಅದರಲ್ಲಿ 1ನೇ ಘಟಕ ಆ.21 ರಿಂದ ನ.29 ವರೆಗೆ ಯಾವುದೇ ರೀತಿ ಅಡತಡೆ, ಲೋಪ-ದೋಷ, ತಾಂತ್ರಿಕ ಸಮಸ್ಯೆಗಳಿಲ್ಲದೆ ನೂರು ದಿನ ನಿರಂತರ ವಿದ್ಯುತ್ ಉತ್ಪಾದಿಸಿ ಸಾಧನೆ ಮಾಡಿದೆ. ಈ ಅವಧಿಯಲ್ಲಿ ಘಟಕವು 1038.5 ದಶಲಕ್ಷ ಯುನಿಟ್ ವಿದ್ಯುತ್ ಉತ್ಪಾದಿಸಿದೆ.
undefined
ರಾಯಚೂರು ಶಾಖೋತ್ಪನ್ನ ಕೇಂದ್ರದ ಕಲ್ಲಿದ್ದಲು ಕಳವು: ಎಫ್‌ಐಆರ್ ದಾಖಲು
ಅದಕ್ಕಾಗಿ ಸುಮಾರು 7,55,686 ಮೆಟ್ರಿಕ್ ಟನ್ ಕಲ್ಲಿದ್ದಲನ್ನು ಬಳಸಿಕೊಂಡಿದೆ. ಘಟಕ ಸುಮಾರು 433 ಮೆಗಾ ವ್ಯಾಟ್ ವಿದ್ಯುತ್ ಪ್ರಸರಣ ಹಾಗೂ ಶೇ.54.08 ಪ್ಲಾಂಟ್ ಲೋಡ್ ಫ್ಯಾಕ್ಟರ್ (ಪಿಎಲ್‌ಎಫ್) ನಡಿ ಕರೆಂಟ್ ಉತ್ಪಾದಿಸಿದೆ.