ಬಳ್ಳಾರಿಯ ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಅವರೇ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ ನಿಡ್ತಿದ್ದಾರೆಂದು ಆರೋಪಿಸಿ ಎಫ್‌ಐಆರ್ ದಾಖಲಿಸಲಾಗಿದೆ.
ಬಳ್ಳಾರಿ (ನ.30): ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ಸಂಶೋಧನೆ ಹಾಗೂ ಕಾಲೇಜುಗಳಲ್ಲಿ ಒಂದಾಗಿರುವ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (Vijayanagar Institute of Medical Sciences-VIMS) ಮಹಿಳಾ ಸಿಬ್ಬಂದಿಯ ಮೇಲೆ ಸಂಸ್ಥೆಯ ನಿರ್ದೇಶಕ ಗಂಗಾಧರ ಗೌಡ ಅವರೇ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆಂಬ ಆರೋಪದ ಮೇಲೆ ಎಫ್ಐಆರ್ ದಾಖಲು ಮಾಡಲಾಗಿದೆ.
ವಿಮ್ಸ್ ನಿರ್ದೇಶಕ ಗಂಗಾಧರ ಗೌಡ ಅವರು ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕಳ ಮಾಡಿದ್ದಾರೆಂದು ದೂರು ನೀಡಲಾಗಿದೆ. ವಿಮ್ಸ್ ನ ಟ್ರಾಮಾ ಕೇರ್ ಸೆಂಟರ್‌ನಲ್ಲಿ ಸಿಸ್ಟಂ ಇಂಜಿನಿಯರ್ ಆಗಿದ್ದ ನೇತ್ರಾವತಿ ಅವರು ಸಂಸ್ತೆಯ ನಿರ್ದೇಶಕರ ಮೇಲೆ ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಿಸ್ಟಂ ಇಂಜಿನಿಯರ್ ಆಗಿ ನೇಮಕವಾಗಿದ್ದ, ನೇಮಕಾತಿ ಆದೇಶ ಪ್ರತಿ ಪಡೆಯಲು ಹೋದಾಗಲೂ ತಮ್ಮನ್ನು ಅಪ್ಪಿಕೊಳ್ಳಲು ಬಂದಿದ್ದರೆಂದು ಆರೋಪ ಮಾಡಲಾಗಿದೆ.
undefined
ಬೆಂಗಳೂರು, ಮಂಡ್ಯ, ಮೈಸೂರಿನ 900 ಭ್ರೂಣ ಹತ್ಯೆ ಕೇಸನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ!
ವಿಮ್ಸ್ ನಿರ್ದೇಶಕ ಗಂಗಾಧರಗೌಡ ಅವರಿಗೆ ಸಹಕಾರ ಮಾಡದಿದ್ದಕ್ಕೆ ಕೆಲಸದಿಂದ ತೆಗೆಯಲಾಗಿದೆ ಎಂದು ನೆತ್ರಾವತಿ ಆರೋಪ ಮಾಡಿದ್ದಾರೆ. ಪಾರ್ವತಿ ಹಾಗೂ ಶಿವು ನಾಯ್ಕ ಎನ್ನುವರಿಂದ ಗಂಗಾಧರ್ ಗೌಡ ಅವರ ಬಳಿ ಹೋಗುವಂತೆ ಕಿರುಕುಳ ನೀಡಲಾಗುತ್ತಿತ್ತು. ಪಾರ್ವತಿ ಹಾಗೂ ಶಿವು ನಾಯ್ಕ ವಿಮ್ಸ್ ಸಿಬ್ಬಂದಿಯಾಗಿದ್ದಾರೆ. ನೇತ್ರಾವತಿ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಳ್ಳಾರಿ ಮಹಿಳಾ ಠಾಣೆ ಪೊಲೀಸರಿಂದ ಎಫ್ಐಆರ್ ದಾಖಲು ಮಾಡಲಾಗಿದ್ದು, ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೊಟಿಸ್ ನೀಡಲಿದ್ದಾರೆ.
ಪ್ರೀತಿಸಿ ಮದುವೆಯಾದ ಹೆಂಡ್ತಿಯನ್ನೇ ಕೊಲೆಗೈದ ಪಾಪಿ ಗಂಡ: ಕೊಡಗು (ನ.30): ಕಳೆದ ಎರಡು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದ ಗಂಡನೇ ತನ್ನ ಹೆಂಡತಿಯ ಶೀಲದ ಮೇಲೆ ಅನುಮಾನ ವ್ಯಕ್ತಪಡಿಸಿ ಚಾಕು ಚುಚ್ಚಿ ಕೊಲೆ ಮಾಡಿದ ದುರ್ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ. ಕೊನೆಗೆ ತಾನೂ ಸಾವಿಗೆ ಶರಣಾಗಿಬಿಟ್ಟಿದ್ದಾನೆ. ಬಡತನದಲ್ಲಿ ಹುಟ್ಟಿ ಬೆಳೆದ ಈಕೆ ಶ್ವೇತ ಅಂತ. ಒಂದಿಷ್ಟು ಓದಿಕೊಂಡಿದ್ದ ಶ್ವೇತ ಕೊಡಗಿನ ಕುಶಾಲನಗರದಲ್ಲಿರುವ ಖಾಸಗಿ ಬೃಹತ್ ಬಟ್ಟೆ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದವರು. ದೂರದ ಸಂಬಂಧಿಯೂ ಆದ ಪ್ರಸನ್ನ ಎಂಬಾತ ಆಕೆಯ ಹಿಂದೆ ಬಿದ್ದು, ಶ್ವೇತ ಅವರ ಮನೆಗೆ ಹೋಗಿ ಅವರ ತಾಯಿ ಭಾಗ್ಯ ಅವರನ್ನು ಒಪ್ಪಿಸಿ ಒಂದುವರೆ ವರ್ಷದ ಹಿಂದೆ ಮದುವೆಯೂ ಆಗಿದ್ದನು. ಕೆಲವು ದಿನಗಳ ಕಾಲ ಸಂತೋಷದಿಂದಲೇ ಜೀವನ ನಡೆಯುತ್ತಿತ್ತು. ಅದಾದ ಕೆಲವೇ ತಿಂಗಳಲ್ಲಿ ಪಾಪಿ ಪತಿ ಪ್ರಸನ್ನನ ತಲೆಗೆ ಪತ್ನಿಯ ಮೇಲೆ ಅನುಮಾನದ ಭೂತ ಹೊಕ್ಕಿತ್ತು. ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದವನು. ಆ ಕೆಲಸವನ್ನು ಬಿಟ್ಟು ಮನೆಯಲ್ಲೇ ತಿಂದುಂಡು ತಿರುಗಿಕೊಂಡಿರಲು ಶುರುಮಾಡಿದ್ದನು.
ಬೆಂಗಳೂರು, ಮಂಡ್ಯ, ಮೈಸೂರಿನ 900 ಭ್ರೂಣ ಹತ್ಯೆ ಕೇಸನ್ನು ಸಿಐಡಿ ತನಿಖೆಗೆ ವಹಿಸಿದ ಸರ್ಕಾರ!
ಚಾಕು ಚುಚ್ಚಿ ತಾನೂ ಸಾವಿಗೆ ಶರಣು: ಅಷ್ಟಕ್ಕೆ ಸುಮ್ಮನಾಗದ ಪಾಪಿ ಹೆಂಡತಿ ದುಡಿದ ದುಡ್ಡನ್ನೆಲ್ಲಾ ತಾನೆ ಕಿತ್ತುಕೊಳ್ಳುತ್ತಿದ್ದನಂತೆ ವರದಕ್ಷಿಣೆಯಾಗಿ ಸಾಕಷ್ಟು ಹಣ ಕೊಡುವಂತೆ ಪೀಡಿಸುತ್ತಿದ್ದನು. ಈ ಕಿರುಕುಳ ತಡೆಯಲಾರದೆ ಶ್ವೇತ ಮೈಸೂರು ಪೊಲೀಸ್ ಠಾಣೆಗೆ ದೂರು ನೀಡಿ ಒಂದು ತಿಂಗಳ ಹಿಂದೆ ತಾಯಿ ಮನೆಗೆ ಸೇರಿದ್ದಳು. ತನ್ನ ತಾಯಿ ಮನೆಯಲ್ಲಿ ಇದ್ದುಕೊಂಡೇ ಶ್ವೇತ ಬಟ್ಟೆಯಂಗಡಿಯಲ್ಲಿ ಕೆಲಸ ಮಾಡುತ್ತಾ ಜೀವನ ನಡೆಸುತ್ತಿದ್ದರು. ಗುರುವಾರವೂ ಕೆಲಸಕ್ಕೆ ಹೋಗಬೇಕಾಗಿತ್ತು. ಶ್ವೇತನ ತಾಯಿ ಭಾಗ್ಯ ಹಾಗೂ ತಂಗಿ ಅಷ್ಟರಲ್ಲಿ ಕೆಲಸಕ್ಕೆ ಹೋಗಿದ್ದರು. ಇದನ್ನೇ ನೋಡಿಕೊಂಡು ಮನೆಗೆ ನುಗ್ಗಿದ್ದ ಪಾಪಿ ಪತಿ ಪ್ರಸನ್ನ ಶ್ವೇತಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ನಂತರ ತಾನೂ ಹೋಗಿ ನೇಣು ಬಿಗಿದುಕೊಂಡು ಸಾವಿಗಿಡಾಗಿದ್ದಾನೆ.