Kolara; ಅಂತರಗಂಗೆ ಪವಿತ್ರತೆಯನ್ನು ಹಾಳು ಮಾಡ್ತಿರುವ ಯುವಕ ಯುವತಿಯರು

By Suvarna News  |  First Published Sep 15, 2022, 9:39 PM IST

ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದ ಪರಿಣಾಮ ಕಲ್ಲು ಬಂಡೆಗಳ ಮಧ್ಯೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಪುಟ್ಟ ಪುಟ್ಟ ಜಲಪಾತಗಳು ಸೃಷ್ಟಿಯಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.


ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಸೆ.15): ಅದು ದಕ್ಷಿಣ ಕಾಶಿ ಎಂದೆ ಪ್ರಸಿದ್ದಿ ಪಡೆದಿರುವ ಕ್ಷೇತ್ರ. ಹಸಿರು ಖಾನನದ ಮಧ್ಯೆ ನೆಲಸಿರುವ ಕಾಶಿ ವಿಶ್ವೇಶ್ವರಯ್ಯ ಸ್ವಾಮಿಯ ದೇವಾಲಯ ಸಹ ಇದೆ. ಇತ್ತೀಚೆಗೆ ಸುರಿದ ಮಳೆಗೆ ಬಂಡೆಗಳ ಮಧ್ಯೆ ಜುಳು ಜುಳು ಚಿಮ್ಮುವ ಜರಿಗಳು, ಧುಮ್ಮಿಕ್ಕಿ ಹರಿಯುವ ಸಣ್ಣ ಜಲಪಾಲಗಳು ಸೃಷ್ಟಿಯಾಗಿವೆ. ಎಂತಹದ್ದೇ ಬರಗಾಲ ಬಂದ್ರೂ ಸಹ ಇಲ್ಲಿನ ನಂದಿ ಬಾಯಿಯಲ್ಲಿ ನೀರು ಬರೋದು ಇನ್ನು ನಿಂತಿಲ್ಲ. ಇಂತಹ ಪವಿತ್ರ ಹಾಗೂ ಪುರಾತನ ಸ್ಥಳ ಯುವಕ ಯುವತಿಯರಿಂದ ಹಾಳಾಗುತ್ತಿದೆ. ನಾನಾ ಕಡೆಗಳಿಂದ ಆಗಮಿಸಿರುವ ಪ್ರವಾಸಿಗರು ಒಂದೆಡೆಯಾದ್ರೆ ಅಲ್ಲೆ ಗಿಡಮರ, ಪೊದೆಗಳಲ್ಲಿ ಮೈ ಮರೆತಿರುವ ಪ್ರೇಮಿಗಳು. ಮತ್ತೊಂದೆಡೆ ಸಣ್ಣ ಜಲಪಾತದಂತೆ ಹರಿಯುತ್ತಿರುವ ನೀರು ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಕೋಲಾರ ನಗರಕ್ಕೆ ಹೊಂದಿಕೊಂಡಿರುವ ಅಂತರಗಂಗೆ ಕ್ಷೇತ್ರದಲ್ಲಿ. ಕಳೆದ ಒಂದುವರೆ ತಿಂಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಕೋಲಾರದಲ್ಲಿ ಇದ್ದಕ್ಕಿದಂತೆ ಮಲೆನಾಡಿನ ಅನುಭವ ಸಿಕ್ಕಂತ್ತಾಗಿದೆ. ಕಳೆದ ಕೆಲ ದಿನಗಳಿಂದ ಕೋಲಾರ ಜಿಲ್ಲೆಯಾದ್ಯಂತ ಉತ್ತಮ ಮಳೆಯಾದ ಪರಿಣಾಮ ಕಲ್ಲು ಬಂಡೆಗಳ ಮಧ್ಯೆ ನೀರು ಧುಮ್ಮಿಕ್ಕಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಕೋಲಾರದ ಅಂತರಗಂಗೆ ಬೆಟ್ಟದಲ್ಲಿ ಪುಟ್ಟ ಪುಟ್ಟ ಜಲಪಾತಗಳು ಸೃಷ್ಟಿಯಾಗಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಬರದನಾಡಿನ ಜನಕ್ಕೆ ನಿಜಕ್ಕೂ ಇದೇ ಜಲಪಾತದ ಅನುಭವ ಸಂತೋಷ ನೀಡುತ್ತಿದ್ದು ನೀರಿನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೋಲಾರ ಸೇರಿದಂತೆ ಅಕ್ಕ ಪಕ್ಕದೂರಿನ ಜನರು ಅಂತರಗಂಗೆ ಬೆಟ್ಟಕ್ಕೆ ಬಂದು ಬೆಟ್ಟ ಗುಡ್ಡಗಳ ನಡುವೆ, ಮುಗಿಲೆತ್ತರಕ್ಕೆ ನಿಂತಿರುವ ಮರಗಳ ನಡುವೆ ಹರಿಯುತ್ತಿರುವ ಸೊಬಗನ್ನು ಸವಿಯುತ್ತಿದ್ದಾರೆ.

Latest Videos

undefined

ಇನ್ನು ಬೆಂಗಳೂರು ನಗರಕ್ಕೆ ಕೇವಲ ಕೂಗಳತೆ ದೂರದಲ್ಲಿರುವ ಅಂತರಗಂಗೆಯಲ್ಲಿ ಪುಟ್ಟ ಪುಟ್ಟ ಜಲರಾಶಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.ಆದ್ರೆ ನೂರಾರು ಸಂಖ್ಯೆಯಲ್ಲಿ ಜನರು ತಮ್ಮ ಕುಟುಂಬ ಸಮೇತರಾಗಿ, ಸ್ನೇಹಿತರೊಟ್ಟಿಗೆ ಅಂತರಗಂಗೆ ಬೆಟ್ಟಕ್ಕೆ ಬಂದು ಪ್ರಕೃತಿ ಸೊಬಗಿನ ನಡುವೆ, ಬೆಟ್ಟ ಗುಡ್ಡಗಳ ನಡುವೆ ಹರಿಯುತ್ತಿರುವ ಪುಟ್ಟ ಪುಟ್ಟ ಝರಿಗಳಲ್ಲಿ ಕುಣಿಯುತ್ತಾ, ಸೆಲ್ಪಿ ತೆಗೆದುಕೊಂಡು ಸಂತೋಷ ಪಡುತ್ತಿದ್ದಾರೆ.

Kolar: ಶತಶೃಂಗ ಪರ್ವತ ಅಂತರಗಂಗೆ ಬೆಟ್ಟದಲ್ಲಿ ಕಾಳ್ಗಿಚ್ಚು: ಸುಟ್ಟು ಭಸ್ಮವಾದ ಜೀವ ಸಂಕುಲ

ಅಪರೂಪದ ತಮ್ಮೂರಿನ ಪ್ರಕೃತಿ ಸೊಬಗನ್ನು ಖುಷಿ ಖುಷಿಯಾಗಿ ಎಂಜಾಯ್ ಮಾಡುತ್ತಿದ್ದಾರೆ. ಆದ್ರೆ ಕೆಲ ಪ್ರೇಮಿಗಳು, ಕಾಲೇಜು ವಿದ್ಯಾರ್ಥಿಗಳು ಇದನ್ನೆ ಬಂಡವಾಳ ಮಾಡಿಕೊಂಡಿದ್ದಾರೆ. ಕೆಲವರು ನೀರಲ್ಲಿ ಕುಣಿದು ಎಂಜಾಯ್ ಮಾಡಿದ್ರೆ ಮತ್ತೆ ಕೆಲವರು ನಿರ್ಜನ ಪ್ರದೇಶದಲ್ಲಿ ಒಂಟಿಯಾಗಿ ಕಾಲ ಕಳೆಯುವ ಮೂಲಕ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕಲ್ಲು ಬಂಡೆಗಳು, ಪೊದೆಗಳ ಮಧ್ಯೆ ಹೆಣ್ಣು ಮಕ್ಕಳಿರುವುದು ಸುರಕ್ಷಿತವಲ್ಲ ಪರಿಣಾಮ ಪೊಲೀಸ್ ಇಲಾಖೆ ಸಂಬಂದಪಟ್ಟವರು ಎಚ್ಚೆತ್ತುಕೊಂಡು ಇಲ್ಲಿ ಮುಂದಾಗುವ ಅನಾಹುತಗಳಿಗೆ ಬ್ರೇಕ್ ಹಾಕಬೇಕಿದೆ ಅನ್ನೋದು ಪ್ರವಾಸಿಗರ ಮಾತು. 

Chamarajanagar: ಅಂತರಗಂಗೆಯಲ್ಲಿ ಕಲ್ಯಾಣಿ ನಿರ್ಮಿಸಿರುವುದೇ ಪಾಪದ ಕೆಲಸ: ಸಚಿವ ಸೋಮಣ್ಣ

ಒಟ್ನಲ್ಲಿ ನೀರು ನೋಡಿ, ನೀರಲ್ಲಿ ಸಾಕಷ್ಟು ಎಂಜಾಯ್ ಮಾಡಿ ವಾಪಸ್ ಆಗಬೇಕಾದ ಕಾಲೇಜು ವಿದ್ಯಾರ್ಥಿಗಳು ಮತ್ತು ಯುವಕ ಯುವತಿಯರು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಯುವ ಪ್ರೇಮಿಗಳು,ಕಾಲೇಜು ವಿದ್ಯಾರ್ಥಿಗಳು ಅಂತರಗಂಗೆಯಲ್ಲಿ ಮಾಡಬಾರದನ್ನ ಮಾಡಿ ಅಂತರಗಂಗೆ ಕಾಶಿ ವಿಶ್ವೇಶ್ವರನ ಸನ್ನಿಧಿಯನ್ನ ಕಲುಷಿತ ಮಾಡುತ್ತಿರುವುದಂತೂ ಸುಳ್ಳಲ್ಲ.

click me!