ದಸರಾಗೆ ಪ್ರಧಾನಿ ಬರುವ ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ: ಪ್ರತಾಪ್ ಸಿಂಹ

By Gowthami K  |  First Published Sep 15, 2022, 7:59 PM IST

ಪ್ರಧಾನಿ ನರೇಂದ್ರ ಮೋದಿ ಕೂಡ ದಸರಾ ಜಂಬೂ ಸವಾರಿಗೆ  ಮೈಸೂರಿಗೆ ಆಗಮಿಸುವ ಸುದ್ದಿ ಹಬ್ಬಿತ್ತು. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ ಯೋಗ ದಿನಕ್ಕೆ ಬಂದಾಗಲೇ ಮೋದಿ ಅವರು ದಸರಾ ನೋಡುವ ಇಚ್ಚೆ, ಆಸೆ ವ್ಯಕ್ತಪಡಿಸಿದ್ದರು ಎಂದಿದ್ದಾರೆ.


ಮೈಸೂರು (ಸೆ.13): ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಉದ್ಘಾಟನೆಯನ್ನು ರಾಷ್ಟ್ರಪತಿ  ದ್ರೌಪದಿ ಮುರ್ಮು ಮಾಡುತ್ತಿದ್ದು, ದಸರಾ ಮಹೋತ್ಸವವನ್ನು ರಾಷ್ಟ್ರಪತಿಗಳು ಉದ್ಘಾಟಿಸುತ್ತಿರುವುದು ಇದೇ ಮೊದಲು. ಇದೀಗ ಪ್ರಧಾನಿ ನರೇಂದ್ರ ಮೋದಿ ಕೂಡ ದಸರಾ ಜಂಬೂ ಸವಾರಿಗೆ  ಮೈಸೂರಿಗೆ ಆಗಮಿಸುವ ಸುದ್ದಿ ಹಬ್ಬಿತ್ತು. ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿರುವ ಸಂಸದ ಪ್ರತಾಪ್ ಸಿಂಹ ಯೋಗ ದಿನಕ್ಕೆ ಬಂದಾಗಲೇ ಮೋದಿ ಅವರು ದಸರಾ ನೋಡುವ ಇಚ್ಚೆ, ಆಸೆ ವ್ಯಕ್ತಪಡಿಸಿದ್ದರು. ಈ ಕಾರಣ ದಸರಾ ಕಾರ್ಯಕ್ರಮ ಬಗ್ಗೆ ತಿಳಿಯಲು ಪ್ರಧಾನಿ ಕಾರ್ಯಾಲಯದಿಂದ ಮುಖ್ಯ ಕಾರ್ಯದರ್ಶಿಗೆ ಫೋನ್ ಕರೆ ಬಂದಿತ್ತು. ಪ್ರಧಾನಿಗಳು ಬರ್ತಾ ಇದ್ದಾರೋ ಇಲ್ಲವೋ ಎಂಬುದು ನಿಖರವಾಗಿ ತಿಳಿದಿಲ್ಲ. ಯೋಗ ದಿನಕ್ಕೆ  ಪ್ರಧಾನಿಗಳು ಮೈಸೂರಿಗೆ ಬಂದು ತಾಯಿ ಚಾಮುಂಡಿ ದರ್ಶನ ಮಾಡಿದ್ದರು. ಅಂದು ಮತ್ತೊಮ್ಮೆ ದರ್ಶನಕ್ಕೆ ಬರುವ ಇಚ್ಚೆ ವ್ಯಕ್ತಪಡಿಸಿದ್ದರು. ದಸರಾ ವೇಳೆ ತಾಯಿ ದರ್ಶನ ಇನ್ನೂ ವಿಶೇಷವಾಗಿದೆ. ಹೀಗಾಗಿ ಪ್ರಧಾನಿ ಕಾರ್ಯಾಲಯದಿಂದ ಮಾಹಿತಿ ಪಡೆಯಲಾಗಿದೆ. ದಸರಾ ಸಿದ್ಧತೆ ಹೇಗಿದೆ, ಪ್ರಧಾನಿಗಳು ದಸರಾಗೆ ಬರುವುದಾದರೆ ಯಾವಾಗ ಬಂದರೆ ಉತ್ತಮ ಎಂಬ ಮಾಹಿತಿ ಪಡೆದಿದ್ದಾರೆ. ರಾಷ್ಟ್ರಪತಿ ಬರುತ್ತಿರುವ ಕಾರಣ ಪ್ರಧಾನಿ ಬರುವ  ಬಗ್ಗೆ ನಿಶ್ಚಿತವಾಗಿ ಹೇಳಲು ಸಾಧ್ಯವಿಲ್ಲ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಈ ಸಾರಿ ಮೈಸೂರು ದಸರಾಗೆ ಬರ್ತಾರಾ ಪ್ರಧಾನಿ? ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗುತ್ತಾ ಕರುನಾಡು? 

Latest Videos

undefined

ನಾಳೆಯಿಂದ ದಸರಾ ಯುವ ಸಂಭ್ರಮ, ಡಾಲಿ ಧನಂಜಯ ಭಾಗಿ
ಮೈಸೂರು: ದಸರಾ ಯುವ ಸಂಭ್ರಮ ಸೆ.16 ರಿಂದ 24ರವರೆಗೆ ಒಟ್ಟು 9 ದಿನ ಕಾಲ ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯಲಿದೆ ಎಂದು ಎಸ್ಪಿ ಹಾಗೂ ಯುವ ಸಂಭ್ರಮ ಸಮಿತಿ ಅಧ್ಯಕ್ಷ ಆರ್‌.ಚೇತನ್‌ ತಿಳಿಸಿದರು. ಸೆ.16ರಂದು ಸಂಜೆ 5.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ.ಸೋಮಶೇಖರ್‌ ಯುವ ಸಂಭ್ರಮಕ್ಕೆ ಚಾಲನೆ ನೀಡುವರು. ನಟ ಡಾಲಿ ಧನಂಜಯ ವಿಶೇಷ ಆಹ್ವಾನಿತರಾಗಿ ಪಾಲ್ಗೊಳ್ಳುವರು. ಮೈಸೂರು ವಿವಿ ವ್ಯಾಪ್ತಿ ಮತ್ತು ರಾಜ್ಯದ ಇತರೆಡೆ ಸುಮಾರು 253 ತಂಡಗಳು ಪಾಲ್ಗೊಳ್ಳಲಿದ್ದು, 10,500 ವಿದ್ಯಾರ್ಥಿಗಳು ಭಾಗವಹಿಸುವರು ಎಂದು ಮಾಹಿತಿ ನೀಡಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವ, ಸ್ವಾತಂತ್ರ್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆ, ರಾಷ್ಟ್ರೀಯ ಭಾವೈಕ್ಯ, ಕನ್ನಡ ಸಂಸ್ಕೃತಿ ಮತ್ತು ಜಾನಪದ ಕಲೆ, ಮಹಿಳಾ ಸಬಲೀಕರಣ, ಮಾದರಿ ಮೈಸೂರು ನಿರ್ಮಾಣಕ್ಕೆ ಅರಸರ ಕೊಡುಗೆ ಮತ್ತು ಪರಿಸರ ಸಂರಕ್ಷಣೆ ಸೇರಿ 9 ವಿಷಯ ನೀಡಿದ್ದು, ಈ ವಿಷಯWಳ ಆಶಯದಲ್ಲಿ ವಿದ್ಯಾರ್ಥಿಗಳು ಪ್ರದರ್ಶನ ನೀಡುವುದಾಗಿ ಅವರು ಹೇಳಿದರು.

Mysuru Dasara 2022: ಸೆ.19ರಿಂದ ರಂಗ ಸಂಗೀತ, ದಸರಾ ರಂಗೋತ್ಸವ

ಪ್ರತಿದಿನ 28 ತಂಡಗಳು ಪ್ರದರ್ಶನ ನೀಡಲಿವೆ. ಇಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 18 ತಂಡಗಳನ್ನು ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯಲಿರುವ ಯುವ ದಸರಾಗೆ ಆಯ್ಕೆ ಮಾಡಲಾಗುವುದು. ಕಲಾವಿದರನ್ನು ಗೌರವಿಸುವ ಜತೆಗೆ ಪ್ರಯಾಣ ಭತ್ಯೆ, ವಸ್ತ್ರ ವಿನ್ಯಾಸದ ಖರ್ಚು-ವೆಚ್ಚ ನೀಡಲಾಗುತ್ತದೆ. ಪ್ರತಿದಿನ ಸಂಜೆ 5.30ರಿಂದ ರಾತ್ರಿ 10ರ ತನಕ ಕಾರ್ಯಕ್ರಮ ನಡೆಯಲಿದೆ. ಯಾವುದೇ ಲೋಪವಾಗದಂತೆ ಎಚ್ಚರಿಕೆ ವಹಿಸಿದ್ದೇವೆ ಎಂದರು.

click me!