Chikkamagaluru; ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ನಡು ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

By Suvarna News  |  First Published Sep 15, 2022, 7:30 PM IST

ರಸ್ತೆಯಲ್ಲಿನ ಹೊಂಡ ಗುಂಡಿಗೆ ರೋಸಿ ಹೋದ ಗ್ರಾಮಸ್ಥರು. ಗುಂಡಿ ರಸ್ತೆಯಲ್ಲಿ ಸಂಚರಿಸಲಾಗದೆ ಗರ್ಭಿಣಿಯರು, ವಿದ್ಯಾರ್ಥಿಗಳು ಪರದಾಟ. ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ನಡು ರಸ್ತೆಯಲ್ಲಿ ಬಾಳೆ ಗಿಡ ನೆಟ್ಟು ವಿದ್ಯಾರ್ಥಿಗಳು,ಗ್ರಾಮಸ್ಥರು ಪ್ರತಿಭಟನೆ. ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದ ಬಳಿ ಘಟನೆ.


ವರದಿ  : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಸೆ.15): ಸರ್ಕಾರದಿಂದ ಮಲೆನಾಡಿನ ಗ್ರಾಮಗಳ ಅಭಿವೃದ್ದಿಗಾಗಿ ಲಕ್ಷಾಂತರ ರೂಪಾಯಿಗಳು ಅನುದಾನವನ್ನು ಬಿಡುಗಡೆ ಆಗುತ್ತದೆ. ಆದ್ರೆ ಬಿಡುಗೆಡೆಯಾಗುವ ಹಣ ಎಲ್ಲಿಗೆ ಹೋಗಿ  ಸೇರುತ್ತದೆ ಎನ್ನುವುದೇ ಯಕ್ಷ ಪ್ರಶ್ನೆಯಾಗಿದೆ. ಇದಕ್ಕೆ ಸಾಕ್ಷಿ ಎನ್ನುವಂತಿದೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡಿನ ಭಾಗವಾದ ಮೂಡಿಗೆರೆ ತಾಲ್ಲೂಕಿನ ಹೆಗ್ಗರವಳ್ಳಿ ಗ್ರಾಮ. ಸಂಪರ್ಕವಾದಂತಹ ರಸ್ತೆ ಇಲ್ಲದೇ ಪ್ರತಿನಿತ್ಯವೂ ಗ್ರಾಮಸ್ಥರು ನರಕ ಯಾತನೆಯ ಜೀವನವನ್ನು ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೆಗ್ಗರವಳ್ಳಿ ಗ್ರಾಮದ ರಸ್ತೆಯ ಗುಂಡಿಬಿದ್ದು 6 ವರ್ಷಗಳೆ ಕಳೆದಿದೆ. ಗ್ರಾಮದಿಂದ ಪಟ್ಟಣಕ್ಕೆ ಸಂಪರ್ಕ ಮಾಡುವ ರಸ್ತೆ ಕೆಸರಗೆದ್ದೆ ರೂಪದಲ್ಲಿ ಇದ್ದು ಇದರಲ್ಲಿ ತಿರುಗಲು ಜನರು ನಿತ್ಯವೂ ಪರದಾಟ ನಡೆಸುತ್ತಿದ್ದಾರೆ. ಕಳೆದ 6 ವರ್ಷಗಳಿಂದಲೂ ಸಮರ್ಪಕವಾದಂತಹ ರಸ್ತೆಇಲ್ಲದೇ ಜನರು ಸಂಕಷ್ಟವನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರಿಸುಮಾರು 150ಕ್ಕೂ ಹೆಚ್ಚು ಮನೆಗಳು ಇರುವ ಗ್ರಾಮದಲ್ಲಿ ಸಾವಿರಕ್ಕೂ ಹೆಚ್ಚು ಮಂದಿ ವಾಸವಾಗಿದ್ದಾರೆ. ಈ ಗ್ರಾಮದಿಂದ ಪಟ್ಟಣಕ್ಕೆ ಹೋಗಬೇಕಾದ್ರೆ ಇದೇ ರಸ್ತೆಯಲ್ಲೇ ಹೋಗಬೇಕು, ಮಳೆ ಬಂದ್ರೆ ರಸ್ತೆ ಸಂಪೂರ್ಣವಾಗಿ ಕೆಸರು ಮಯವಾಗುತ್ತದೆ. ಕೆಸರುಗದ್ದೆ ರೂಪದಲ್ಲಿ ಇರುವ ರಸ್ತೆಯಲ್ಲೇ ಇಲ್ಲಿನ ಜನರು ಪಟ್ಟಣಕ್ಕೆ , ಶಾಲಾ ಕಾಲೇಜ್ ಗಳಿಗೆ ಹೋಗುವ ಅನಿವಾರ್ಯತೆ ಇದೆ. ಇದರಿಂದ ಆಕ್ರೋಶಗೊಂಡ ಗ್ರಾಮಸ್ಥರು ನಡುರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶವನ್ನು ಹೊರಹಾಕಿದ್ದಾರೆ. 

Tap to resize

Latest Videos

ರಸ್ತೆ ಗುಂಡಿಗೆ ಕಟ್ಟಡ ತ್ಯಾಜ್ಯ ಸುರಿದ ಬಿಬಿಎಂಪಿ, ಬೈಕ್‌ ಸಂಚಾರಕ್ಕೆ ಸವಾಲು!

ಅಧಿಕಾರಿಗಳ ನಿರ್ಲಕ್ಷ ಖಂಡಿಸಿ ವಿದ್ಯಾರ್ಥಿಗಳು, ಗ್ರಾಮಸ್ಥರು ಪ್ರತಿಭಟನೆ
ಇಲ್ಲಿನ ರಸ್ತೆ 6 ವರ್ಷಗಳಿಂದ ಡಾಂಬರೀಕರಣವನ್ನೇ ಕಂಡಿಲ್ಲ. ಜನತೆ ಕಳೆದ ಹಲವಾರು  ವರ್ಷಗಳಿಂದ ತಾವು ಅನುಭವಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವಂತೆ ಗ್ರಾಮ ಪಂಚಾಯಿತಿ,  ಜಿಲ್ಲಾ ಪಂಚಾಯಿಯ ಅಧಿಕಾರಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ನೂರಾರು ಬಾರಿ ಮನವಿ ಸಲ್ಲಿಸಿದ್ದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅಂದಿನಿಂದಲೂ ಮೂಲಸೌಕರ್ಯಗಳನ್ನು ಒದಗಿಸುವ ಭರವಸೆಯನ್ನು ನೀಡುತ್ತಿದ್ದಾರಾದರೂ ಭರವಸೆಯನ್ನು ಈಡೇರಿಸುವ ಕಡೆಗೆ ಗಮನ ಹರಿಸುತ್ತಿಲ್ಲ.

Tumakuru News: ರಾಷ್ಟ್ರೀಯ ಹೆದ್ದಾರಿ ರಸ್ತೆ ಗುಂಡಿ ಕೂಡಲೇ ಮುಚ್ಚಿ

ಪ್ರತಿನಿತ್ಯ ಸುಮಾರು 5.ಕಿಮೀ.ದೂರದ ವರೆಗೆ ರಸ್ತೆಯಲ್ಲಿನ ಹೊಂಡ ಗುಂಡಿಗೆ ಗ್ರಾಮಸ್ಥರು  ರೋಸಿ  ಹೋಗಿದ್ದಾರೆ. ರಸ್ತೆ ಅನುದಾನ ಬಿಡುಗಡೆಯಾಗಿದ್ದು ಶೀಘ್ರವೇ ರಸ್ತೆ ಅಭಿವೃದ್ದಿ ಕಾಮಗಾರಿಯನ್ನು ನಡೆಸಲಾಗುವುದು ಎನ್ನುವ ಭರವಸೆಯನ್ನು ಅಧಿಕಾರಿಗಳು ಕಳೆದ ಮೂರು ನಾಲ್ಕು ವರ್ಷಗಳಿಂದ ನೀಡುತ್ತಲೇ ಬಂದಿದ್ದಾರೆ. ಗೆದ್ದ ನಂತರ ಜನತೆಯನ್ನು ಮರೆತು ಬಿಡುವ  ಜನಪ್ರತಿನಿಧಿಗಳು ಅಧಿಕಾರದಾಹವನ್ನು ಬಿಟ್ಟು ಗ್ರಾಮದ ಸಮಸ್ಯೆಯಗೆ ಪರಿಹಾರ ಒದಗಿಸಬೇಕೆನ್ನುವುದು ಇಲ್ಲಿನ ಸ್ಥಳೀಯರ ಆಗ್ರಹವಾಗಿದೆ.

click me!