
ಬೆಂಗಳೂರು (ಜೂ.19): ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದ ಮಿಥುನ್ ಮೃತದೇಹ ಪತ್ತೆಯಾಗಿದೆ. ಮಿಥುನ್ ಕೆ.ಆರ್.ಪುರಂ ವಲಯದ ಬಿಬಿಎಂಪಿಯಲ್ಲಿ ಸಿವಿಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಗಾಯತ್ರಿ ಬಡಾವಣೆಯಲ್ಲಿ ರಾತ್ರಿ 12 ಗಂಟೆ ಸುಮಾರಿಗೆ ನೀರು ಸಂಪೂರ್ಣವಾಗಿ ಅವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದಿದೆ. ಅಲ್ಲದೆ ಅಲ್ಲಿದ್ದ ಯುವಕನ ಬೈಕ್ ಕೊಚ್ಚಿಕೊಂಡು ಹೋಗಲು ಆರಂಭವಾಗಿದೆ. ಯುವಕ ಬೈಕ್ ರಕ್ಷಣೆ ಮಾಡಿಕೊಳ್ಳಲು ಮುಂದಾಗಿದ್ದರು. ಈ ವೇಳೆ ನೀರಿನ ಜೊತೆ ಕೊಚ್ಚಿಹೋಗಿದ್ದರು. ಶನಿವಾರ ಬೆಳಗ್ಗೆಯಿಂದಲೇ ಅಗ್ನಿಶಾಮಕ ದಳ ಮತ್ತು NDRF ಸಿಬ್ಬಂದಿ ಎರಡು ಪ್ರತ್ಯೇಕ ತಂಡಗಳಾಗಿ ಎರಡು ಕಿಲೋಮೀಟರ್‌ವರೆಗೂ ರಾಜಕಾಲುವೆಯಲ್ಲಿ ಮಿಥುನ್‌ಗಾಗಿ ಹುಡುಕಾಟ ನಡೆಸಿದ್ದರು. ಇಂದು ಬೆಳಗ್ಗೆ ಮತ್ತೆ ಶೋಧ ಕಾರ್ಯ ಆರಂಭಿಸಿದಾಗ ಮಿಥುನ್ ಮೃತದೇಹ ಪತ್ತೆಯಾಗಿದೆ.
ಶೀಟ್ ಮನೆ ಮೇಲೆ ಬಿದ್ದ ತಡೆಗೋಡೆ: ಮಹದೇವಪುರ ವಲಯ ವ್ಯಾಪ್ತಿಯ ಗರುಡಾಚಾರ್ ಪಾಳ್ಯ ವಾರ್ಡ್‌ನ ಕಾವೇರಿ ನಗರದಲ್ಲಿ ಗೋದ್ರೇಜ್ ಕಂಪನಿಯ ಗೋಡೆಯು ಪಕ್ಕದಲ್ಲಿರುವ ಎರಡು ಶೀಟಿನ ಮನೆಯ ಮೇಲೆ ಕುಸಿದು ಬಿದ್ದಿದೆ. ಮನೆಯಲ್ಲಿದ್ದ ಮುನಿಯಮ್ಮ (62) ಅವರಿಗೆ ತೀವ್ರ ಪೆಟ್ಟಾಗಿದ್ದು, ವೈದೇಹಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಜತೆಗೆ ಮನೆಯಲ್ಲಿದ್ದ ಮೂವರಿಗೆ ಸಣ್ಣ-ಪುಟ್ಟಗಾಯಗಳಾಗಿದ್ದು, ಅವರು ಕೂಡಾ ವೈದೇಹಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮಹದೇವಪುರ ವಲಯ ವ್ಯಾಪ್ತಿಯ ವಲಯ ಆಯುಕ್ತರಾದ ಡಾ ತ್ರಿಲೋಕ್‌ಚಂದ್ರ, ವಲಯ ಜಂಟಿ ಆಯುಕ್ತರಾದ ವೆಂಕಟಾಚಲಪತಿ ಹಾಗೂ ಸಂಬಂಧಪಟ್ಟಅಧಿಕಾರಿಗಳು ರಾತ್ರಿಯಿಂದಲೂ ಸ್ಥಳದಲ್ಲಿದ್ದು, ಮೇಲ್ವಿಚಾರಣೆ ಕೈಗೊಂಡಿದ್ದಾರೆ.
ಪಿಯುಸಿ ಪರೀಕ್ಷೆಯಲ್ಲಿ ಫೇಲಾದ 7 ವಿದ್ಯಾರ್ಥಿಗಳ ಆತ್ಮಹತ್ಯೆ
400 ಮನೆಗಳಿಗೆ ನೀರು: ಗರುಡಾಚಾರ್‌ಪಾಳ್ಯ, ಗಾಯಿತ್ರಿ ಲೇಔಟ್, ಸಾಯಿ ಲೇಔಟ್, ಹೊರಮಾವು, ಗುರು ಲೇಔಟ್ ಸೇರಿದಂತೆ ಇನ್ನಿತರೆ ಕಡೆ ಸುಮಾರು 400 ಮನೆಗಳಿಗೆ ನೀರು ನುಗ್ಗಿದೆ. ಪಾಲಿಕೆ ಸಹಾಯಕ ಕಂದಾಯ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ತಂಡಗಳು ಸಮೀಕ್ಷಾ ಕಾರ್ಯ ನಡೆಸುತ್ತಿದ್ದು, ಮಳೆಯಿಂದ ಹಾನಿಗೊಳಗಾದ ಮನೆಗಳ ನಿವಾಸಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಪರಿಹಾರ ಮೊತ್ತವನ್ನು ಪಾವತಿಸಲಾಗುತ್ತದೆ. ಮೃತರ ಕುಟುಂಬಸ್ಥರಿಗೆ ನಿಯಮಾನುಸಾರ ಪರಿಹಾರ ನೀಡಲಾಗುವುದು. ಗಾಯಗೊಂಡವರ ಚಿಕಿತ್ಸೆಯ ವೆಚ್ಚವನ್ನು ಪಾಲಿಕೆಯೇ ಭರಿಸಲಿದೆ ಎಂದು ತಿಳಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೆಳಗಾವಿ: ಅನೈತಿಕ ಸಂಬಂಧಕ್ಕೆ ಅಡ್ಡ ಬಂದ ಗಂಡನನ್ನೇ ಹತ್ಯೆಗೈದ ಪತ್ನಿ, ಪ್ರಿಯಕರ
ಥಿಯೇಟರ್ ಗೋಡೆ ಕುಸಿದು 24 ಬೈಕ್‌ಗಳು ಜಖಂ: ಮಹದೇವಪುರದ ಥಿಯೇಟರ್‌ವೊಂದರ ಗೋಡೆ ಕುಸಿತದಿಂದ ಸುಮಾರು 24 ಬೈಕ್‌ಗಳು ಜಖಂಗೊಂಡಿವೆ. ಪೂರ್ವ ವಲಯದ ಸಂಜಯ ನಗರದ ಅಕೈ ಪಬ್ಲಿಕ್ ಸ್ಕೂಲ್ ಸಮೀಪದ ಕಿರಿದಾದ ರಸ್ತೆಯಲ್ಲಿದ್ದ ಬೃಹತ್ ಮರವೊಂದು ಶುಕ್ರವಾರ ರಾತ್ರಿ 1.30ರ ಸುಮಾರಿಗೆ ಮಳೆ, ಗಾಳಿಯಿಂದಾಗಿ ಉರುಳಿ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ರಸ್ತೆಯ ಬಲಭಾಗದಲ್ಲಿದ್ದ ಮನೆಯ ಮೇಲೆ ಮರ ವಾಲಿದ್ದರೂ ಮನೆ ಗೋಡೆಗಳಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪಾಲಿಕೆ ಪೂರ್ವ ವಲಯದ ಅರಣ್ಯ ವಿಭಾಗದ ಅಧಿಕಾರಿಗಳು ತಿಳಿಸಿದರು.