ರಾಜ್ಯದಲ್ಲಿ ಮೂರು ಸಾವಿರಕ್ಕೂ ಅಧಿಕ ಸ್ವಾಮೀಜಿಗಳಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ನಾಡು-ನುಡಿಗೆ ಧಕ್ಕೆ ಆಗುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಮೈಗೆ ಎಣ್ಣೆ ಹಚ್ಚಿಕೊಂಡು ಕುಳಿತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು (ಜೂ.19): ರಾಜ್ಯದಲ್ಲಿ ಮೂರು ಸಾವಿರಕ್ಕೂ ಅಧಿಕ ಸ್ವಾಮೀಜಿಗಳಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ನೆಪದಲ್ಲಿ ನಾಡು-ನುಡಿಗೆ ಧಕ್ಕೆ ಆಗುತ್ತಿದ್ದರೂ ಯಾರೂ ಮಾತನಾಡುತ್ತಿಲ್ಲ. ಮೈಗೆ ಎಣ್ಣೆ ಹಚ್ಚಿಕೊಂಡು ಕುಳಿತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಏರ್ಪಡಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವಿವಿಧ ಸಮುದಾಯಗಳ 3 ಸಾವಿರಕ್ಕೂ ಅಧಿಕ ಸ್ವಾಮೀಜಿಗಳಿದ್ದಾರೆ. ಎಲ್ಲ ಧರ್ಮ ಪೀಠಗಳಿಗೂ ಅಪಮಾನವಾಗಿದ್ದು, ಅವರಾರಯರೂ ಸುಮ್ಮನೆ ಕೂರಬಾರದು. ರಾಜಕಾರಣಕ್ಕೆ ಬೆಂಬಲ ನೀಡದಿದ್ದರೂ ಈ ದೇಶದ ಸಮಗ್ರತೆ, ಐಕ್ಯತೆ, ಧರ್ಮ ಹಾಗೂ ಸಂಸ್ಕೃತಿ ಉಳಿಸಲು ಧ್ವನಿ ಎತ್ತಬೇಕು ಎಂದು ಮನವಿ ಮಾಡಿದರು.
ರಾಜಭವನ ಚಲೋ: ರಸ್ತೆಯಲ್ಲೇ ಧರಣಿ ಕುಳಿತಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಡಿಕೆಶಿ ಪೊಲೀಸ್ ವಶಕ್ಕೆ!
ನಮ್ಮ ಪಾಲಿಗೆ ಸಂವಿಧಾನವೇ ಭಗವದ್ಗೀತೆ, ರಾಮಾಯಣ, ಬೈಬಲ್, ಕುರಾನ್ ಆಗಿದೆ. ನಮ್ಮ ಸಂಸ್ಕೃತಿ ಉಳಿಸಿಕೊಳ್ಳಲು ಹೋರಾಟ ಮಾಡುವ ಕಾಲ ಬಂದಿದೆ. ಎಲ್ಲರೂ ಎದ್ದೇಳಿ, ಹಳ್ಳಿ ಹಳ್ಳಿಗಳ ಕಡೆ ಹೆಜ್ಜೆ ಹಾಕಿ ಹೋರಾಟ ನಡೆಸಿ. ಇಂತಹ ಕೆಟ್ಟಸಂಪ್ರದಾಯವನ್ನು ಕಿತ್ತೊಗೆಯೋಣ. ನಾನು ಸದಾ ನಿಮ್ಮ ಜತೆ ಇರುತ್ತೇನೆ. ಶುಭ ಘಳಿಗೆಯಲ್ಲಿ ಹೋರಾಟ ಪ್ರಾರಂಭಿಸಿದ್ದು ಒಳ್ಳೆಯದಾಗಲಿದೆ. ಮುಂದಿನ 12 ತಿಂಗಳಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬಂದು ಈ ಪಠ್ಯ ರದ್ದಾಗುತ್ತವೆ ಎಂದು ಭರವಸೆ ನೀಡಿದರು.
ಪೊಲೀಸರು ಹೈರಾಣ: ಪಠ್ಯ ಪುಸ್ತಕ ಪರಿಷ್ಕರಣೆ ವಿರೋಧಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಾತ್ರ ಪ್ರತಿಭಟನಾ ರ್ಯಾಲಿ ನಡೆಸಲು ಮಾತ್ರ ಪೊಲೀಸರು ಅನುಮತಿ ನೀಡಿದ್ದರು. ಆದರೆ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ಜಮಾವಣೆಗೊಂಡ ನೂರಾರು ಕಾರ್ಯಕರ್ತರು, ಅಲ್ಲಿಂದ ಸ್ವಾತಂತ್ರ್ಯ ಉದ್ಯಾನವನಕ್ಕೆ ಜಾಥಾ ಮೂಲಕ ಆಗಮಿಸಿದ್ದರಿಂದ ಸುತ್ತಮುತ್ತಲ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿತ್ತು.
ಅನುಮತಿ ಪಡೆಯದೇ ಪ್ರತಿಭಟನಾ ರ್ಯಾಲಿ ಆರಂಭಿಸಲು ಕಾರ್ಯಕರ್ತರು ಸಜ್ಜಾಗಿದ್ದರಿಂದ ಸಿಟ್ಟಿಗೆದ್ದ ಚಿಕ್ಕಪೇಟೆ ಎಸಿಪಿ ಗಿರಿ ಅವರು, ಪ್ರತಿಭಟನಾಕಾರರನ್ನು ತರಾಟೆಗೆ ತೆಗೆದುಕೊಂಡ ಘಟನೆ ನಡೆಯಿತು. ವಾಹನ ಸವಾರರು ವಾಹನ ದಟ್ಟಣೆಯಿಂದ ಗಂಟೆಗಟ್ಟಲೇ ಸಂಕಷ್ಟಅನುಭವಿಸಬೇಕಾಯಿತು. ಕೊನೆಗೆ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್ನತ್ತ ಹೊರಟ ಕಾರ್ಯಕರ್ತರು, ವಿದ್ಯಾರ್ಥಿಗಳನ್ನು ಸಂಭಾಳಿಸುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿತು.
ಕಾಂಗ್ರೆಸ್ಸಿಗರ ಬಂಧನ ತುರ್ತುಸ್ಥಿತಿಗಿಂತ ಹೀನಾಯ: ಡಿಕೆಶಿ
ವರದಿಗಾರನಿಗೆ ಅಟ್ಟಾಡಿಸಿ ಹೊಡೆದ ರಣಧೀರ ಪಡೆ: ಸಭೆಯ ವರದಿಗೆ ಆಗಮಿಸಿದ್ದ ವಾಹಿನಿಯೊಂದರ ಪ್ರತಿನಿಧಿಯೊಬ್ಬರ ಮೇಲೆ ಗುಂಪೊಂದು ಹಲ್ಲೆ ನಡೆಸಿ, ಬಟ್ಟೆಹರಿದು ಹಾಕಿದ ಘಟನೆ ನಡೆದಿದೆ. ರಣಧೀರ ಪಡೆಗೆ ಸೇರಿದ ಕಾರ್ಯಕರ್ತರು, ಪ್ರತಿನಿಧಿಯನ್ನು ನೋಡಿದಾಕ್ಷಣ, ‘ನೀವು ಆರ್‌ಎಸ್‌ಎಸ್ ಚಾನೆಲ್‌ನವರು, ನೀನ್ಯಾಕೆ ಇಲ್ಲಿ ಬಂದಿದ್ದೀರಾ’ ಎಂದು ಆಕ್ರೋಶ ವ್ಯಕ್ತಪಡಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತೇಜ ತಿಮ್ಮಪ್ಪ ತಪ್ಪಿಸಿಕೊಳ್ಳಲು ಯತ್ನಿಸಿದಾಗ, ಫ್ರೀಡಂ ಪಾರ್ಕ್ ತುಂಬೆಲ್ಲಾ ಓಡಾಡಿಸಿಕೊಂಡು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.