ತಾಯಿಯ ಮೊಬೈಲ್‌ ಕೇಳಿದ ಬಾಲಕಿಗೆ ಹೊಸದು ಕೊಡಿಸಿದ ಕೈ ನಾಯಕರು!

By Suvarna NewsFirst Published May 23, 2021, 8:56 PM IST
Highlights

* ಅಮ್ಮನ ಮೊಬೈಲ್‌ಗಾಗಿ ಮಗಳ ಮನವಿ ವಿಚಾರ
* ಬಾಲಕಿಗೆ ಹೊಸ ಮೊಬೈಲ್ ಕೊಡಿಸಿದ ಯುವ ಕಾಂಗ್ರೆಸ್
* ನಲಪಾಡ್ ಹ್ಯಾರಿಸ್ ಸೂಚನೆ ಮೇರೆಗೆ ಮೊಬೈಲ್‌ ಕೊಡಿಸಿದ ಕಾಂಗ್ರೆಸ್ ಮುಖಂಡರು
* ಸೋಶಿಯಲ್ ಮೀಡಿಯಾದಲ್ಲಿ ವಿಚಾರ ವ್ಯಾಪಕ ಟೀಕೆ 

ಕೊಡಗು (ಮೇ. 23): ಕೊರೋನಾದಿಂದ  ತಾಯಿ ಕಳೆದುಕೊಂಡ ಮಗಳು ಭಾವನಾತ್ಮಕ ಪತ್ರ ಬರೆದಿದ್ದಳು. . ಮೇ 16 ರಂದು ಕೋವಿಡ್‌ನಿಂದ ತಾಯಿ ಮೃತಪಟ್ಟಿದ್ದರು. ಆ ವೇಳೆ ತಾಯಿಯ ಬಳಿಯಿದ್ದ ಮೊಬೈಲ್ ಸಿಕ್ಕಿರಲಿಲ್ಲ. 'ನಾನು ತಾಯಿಯನ್ನು ಕಳೆದುಕೊಂಡು ತಬ್ಬಲಿಯಾಗಿದ್ದೇನೆ. ನನ್ನ ತಾಯಿಯ ಬಳಿ ಇರುವ ಮೊಬೈಲ್‌ವೊಂದೇ ನನಗೆ ನೆನಪು. ಆ ಮೊಬೈಲನ್ನು ಹುಡುಕಿಕೊಡಿ ಎಂದು ಡಿಸಿ, ಶಾಸಕರಿಗೆ ಮಗಳು ಬಹಿರಂಗ ಪತ್ರ ಬರೆದಿದ್ದಳು. ಸೋಶಿಯಲ್ ಮೀಡಿಯಾದಲ್ಲಿ ಈ ವಿಚಾರ ವೈರಲ್ ಆಗಿತ್ತು.

ಯುವ ಕಾಂಗ್ರೆಸ್ ಅಧ್ಯಕ್ಷ, ಕನ್ನಡಿಗ ಶ್ರೀನಿವಾಸ್ ಬಿವಿ ಸಹ ಬಾಲಕಿಯ ನೆರವಿಗೆ ಧಾವಿಸಲು ಮನವಿ ಮಾಡಿಕೊಂಡಿದ್ದರು.  ಯೂತ್ ಕಾಂಗ್ರೆಸ್ ಬಾಲಕಿಗೆ ಹೊಸ ಮೊಬೈಲ್ ಕೊಡಿಸಿದೆ. ನಲಪಾಡ್ ಹ್ಯಾರಿಸ್ ಸೂಚನೆ ಮೇರೆಗೆ ಮೊಬೈಲ್‌ ಕೊಡಿಸಲಾಗಿದೆ.

ಅಮ್ಮನ ನೆನಪುಗಳಿರುವ ಮೊಬೈಲ್ ಕೊಡಿಸಿ

ಆದರೆ ಕಾಂಗ್ರೆಸ್ ಈ ಕ್ರಮ ತೀವ್ರ ಟೀಕೆಗೆ ಗುರಿಯಾಗಿದೆ. ಬಾಲಕಿ ಕೇಳಿದ್ದು ಅಮ್ಮನ ಫೋಟೋ, ವೀಡಿಯೋ ದಾಖಲೆ ಇರುವ ಮೊಬೈಲ್, ಕಾಂಗ್ರೆಸ್‌ನವರು ಮೊಬೈಲ್‌ ಕೊಡಿಸಿದ್ದು ಹೊಸ ಮೊಬೈಲ್ ಎಂದು  ಅಸಮಾಧಾನ ಹೊರಹಾಕಿದ್ದಾರೆ.

ಭಾವನಾತ್ಮಕ ವಿಚಾರದಲ್ಲಿ ರಾಜಕೀಯ ಮಾಡುತ್ತಿದ್ದಾರೆ ಹೊಸ ಮೊಬೈಲ್‌ನಿಂದ ಅಮ್ಮನ ಭಾವನೆಗಳನ್ನು ತಂದು ಕೊಡಲು ಸಾಧ್ಯವಾ? ಅವಕಾಶ ಬಳಸಿಕೊಂಡು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ ಎಂಬ ಟೀಕೆ ವ್ಯಕ್ತವಾಗಿದೆ.

ಮಾಸ್ಕ್ ಧರಿಸದೆ, ಕೋವಿಡ್ ನಿಯಮ ಉಲ್ಲಂಘನೆಯನ್ನು ಕಾಂಗ್ರೆಸ್ ನಾಯಕರು ಮಾಡಿದ್ದಾರೆ. ಕೊಡಗು ಯುವ ಕಾಂಗ್ರೆಸ್ ಮುಖಂಡರಿಂದ ನಿಯಮ ಉಲ್ಲಂಘನೆಯಾಗಿದೆ. 6 ಮಂದಿ ಒಟ್ಟಿಗೆ ನಿಂತು ಫೋಟೋಗೆ ಫೋಸ್ ಕೊಟ್ಟಿದ್ದಾರೆ. ಲಾಕ್‌ಡೌನ್ ಇರುವಾಗ ಮೊಬೈಲ್ ಶಾಪ್ ಓಪನ್ ಮಾಡಿದ್ದು ಯಾರು? ಎಂದು  ಸಾಮಾಜಿಕ‌ ಜಾಲತಾಣದಲ್ಲಿ‌‌ ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ. 

:- Our Kodagu team reached out to Hrithiksha & gifted her a new Mobile phone.

Since FIR is also registered in this case, we've also requested police authorities to catch the thieves asap.

Thank you https://t.co/zkZ0luOJyh pic.twitter.com/EzKBdO2cjF

— Srinivas B V (@srinivasiyc)

"

click me!