ವೈದ್ಯರ ಕೊರತೆ ನಿವಾರಣೆಗೆ ಸೋಮಶೇಖರ್ ಸೂತ್ರ, ಸಿಎಂಗೆ ಪತ್ರ

By Suvarna NewsFirst Published May 23, 2021, 5:19 PM IST
Highlights

* ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ರಿಂದ ಸಿಎಂ ಬಿಎಸ್ ವೈ ಗೆ ಪತ್ರ
* ಸರ್ಕಾರಿ ಕೋಟಾದಲ್ಲಿ ಕಲಿತ ವೈದ್ಯರು ಕನಿಷ್ಠ ನಮ್ಮ ರಾಜ್ಯ ದಲ್ಲಿ 5 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಬೇಕು
* ಇಲ್ಲಿ ಕಲಿತು ವಿದೇಶಕ್ಕೆ ತೆರಳುತ್ತಿದ್ದಾರೆ
* ಕರಾರು ಮಾಡಿಕೊಂಡರೆ ವೈದ್ಯರ ಕೊರತೆ ಉಂಟಾಗುವುದಿಲ್ಲ

ಬೆಂಗಳೂರು(ಮೇ 23) ಸಚಿವ ಎಸ್ ಟಿ ಸೋಮಶೇಖರ್ ಸಿಎಂ ಬಿಎಸ್ ವೈ ಗೆ ಪತ್ರ ಬರೆದಿದ್ದಾರೆ.  ಸರ್ಕಾರಿ ಕೋಟಾದಲ್ಲಿ ಕಲಿತ ವೈದ್ಯರು ಕನಿಷ್ಠ ಪಕ್ಷ ನಮ್ಮ ರಾಜ್ಯ ದಲ್ಲಿ 5 ವರ್ಷಗಳ ಕಾಲ ಸೇವೆ ಸಲ್ಲಿಸಬೇಕು ಎಂಬ ಕಾನೂನು  ತರಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

ರಾಜ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ. ಅಲ್ಲದೆ ಹಳ್ಳಿಗಳ್ಳಲ್ಲಿಯೂ ಕೂಡ ವೈದ್ಯರ ಕೊರತೆ ದೊಡ್ಡ ಸಮಸ್ಯೆಯಾಗಿದೆ. ಕೊರೋನಾ ಸಂಕಷ್ಟ ಕಾಲವಾಗಿರುವುದರಿಂದ ವೈದ್ಯರ ಕೊರತೆ  ಕಾಡುತ್ತಿದ್ದು ಪರಿಹಾರ ಬೇಕಿದೆ ಎಂದಿದ್ದಾರೆ.

ರಾಜ್ಯ ಸರ್ಕಾರ ಓರ್ವ ವೈದ್ಯ ವಿದ್ಯಾರ್ಥಿಗೆ 40 ರಿಂದ ,50 ಲಕ್ಷ ವೆಚ್ಚ ಭರಿಸುತ್ತೆ. ಆದ್ರೆ ವೈದ್ಯರಾದ ಬಳಿಕ ಎಲ್ಲಾ ವಿದೇಶಿಕ್ಕೆ ತೆರಳುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ವೈದ್ಯರ ಕೊರತೆ ಹೆಚ್ಚಾಗಿದೆ. ಹೀಗಾಗಿ ನಮ್ಮ ರಾಜ್ಯದಲ್ಲಿ ಕಟ್ಟುನಿಟ್ಟಿ ಕ್ರಮತಗೆದುಕೊಳ್ಳಬೇಕು. ಸರ್ಕಾರಿ ಕೋಟಾದಲ್ಲಿ ವ್ಯಾಸಂಗ ಮಾಡುವಾಗಲೇ ವಿದ್ಯಾರ್ಥಿಗಳಿಂದ ಕರಾರಿಗೆ ಸಹಿ ಹಾಕಿಸಿಕೊಳ್ಳಿ ರಾಜ್ಯದಲ್ಲಿ ಕನಿಷ್ಠ ಐದು ವರ್ಷಗಳ ಕಾಲ ಸೇವೆ ಸಲ್ಲಿಸುತ್ತೇವೆ ಎಂದು ಕರಾರಿಗೆ ಸಹಿ ಹಾಕಿಸಿಕೊಳ್ಳಿ. ಈ ಕುರಿತು ಸಂಪುಟದಲ್ಲಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳಿ ಎಂದು ಸೋಮಶೇಖರ್ ಮನವಿ ಮಾಡಿಕೊಂಡಿದ್ದಾರೆ.

ಕೊರೋನಾ ಸಂಕಷ್ಟದ ಸಂದರ್ಭ ಎದುರಿಸಲು ರಾಜ್ಯ ಸರ್ಕಾರ ಸಹ ವಿವಿಧ ಯೋಜನೆಗಳನ್ನು ಜಾರಿ ಮಾಡಿದೆ.   ಇದೀಗ ವೈದ್ಯರ ನಡೆ ಹಳ್ಳಿಗಳ ಕಡೆ ಎಂಬ ಯೋಜನೆ ಜಾರಿ ಮಾಡಿದೆ. ವೈದ್ಯರ ಜೊತೆಗೆ ತರಬೇತಿ ಅವಧಿಯಲ್ಲಿರುವ ವೈದ್ಯರು, ವೈದ್ಯಕೀಯ ಸಿಬ್ಬಂದಿ ಬಳಕೆಗೆ ನಿರ್ಧಾರ ಮಾಡಲಾಗಿದೆ. ಮೊಬೈಲ್ ಕ್ಲಿನಿಕ್ ಮೂಲಕ  ವೈದ್ಯರು ಹಳ್ಳಿಗೆ ತೆರಳಲಿದ್ದಾರೆ.

"

click me!