ಶಿವಮೊಗ್ಗ: ತನ್ನ ಹುಟ್ಟುಹಬ್ಬದಂದು ಕಿಚ್ಚ ಸುದೀಪ್, ತಂದೆ-ತಾಯಿಗೆ ವಿಶಿಷ್ಟ ಉಡುಗೊರೆ ನೀಡಿದ ಯುವಕ..!

By Girish Goudar  |  First Published Aug 16, 2023, 11:30 PM IST

ಶಿವಮೊಗ್ಗ ತಾಲೂಕಿನ ಕುಸುಗೂರು ಗ್ರಾಮದ ಸಾಮಾನ್ಯ ರೈತ ಕುಟುಂಬದ ಯುವಕ ಸಮರ್ಥ್ ಗೌಡ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೌದು ನೀವು ಕನ ವಿಭಿನ್ನವಾದ ವಿಶಿಷ್ಟವಾದ ನಿರ್ಮಲ ಪ್ರೀತಿ ಅಭಿಮಾನವನ್ನು ಕಂಡು ಯಾರಾದರೂ ಜೈ ಎನ್ನದೇ ಇರಲಾರರು. ತನ್ನ ಹೃದಯದಲ್ಲಿ ಕಿಚ್ಚ ಸುದೀಪ್ ಹಾಗೂ ಹೆತ್ತವರು ಯಾವಾಗಲೂ ಚಿರಸ್ಥಾಯಿ ಆಗಿರುವಂತೆ ಮಾಡಿದ್ದಾರೆ. 


ಶಿವಮೊಗ್ಗ(ಆ.16):  ನಟ ಕಿಚ್ಚ ಸುದೀಪ್ ಅವರು ಅಭಿಮಾನಿಯೊಬ್ಬ ತನ್ನ ಹುಟ್ಟುಹಬ್ಬ ವಿಭಿನ್ನ ರೀತಿಯಲ್ಲಿ ಆಚರಿಸಿಕೊಂಡಿದ್ದಾನೆ. ತನ್ನ ಹುಟ್ಟುಹಬ್ಬದಂದು ನೆಚ್ಚಿನ ನಟ ಹಾಗೂ ಹೆತ್ತ ತಂದೆ ತಾಯಿಗೆ ವಿಶಿಷ್ಟ ಉಡುಗೊರೆ ನೀಡಿದ್ದಾನೆ. ಶಿವಮೊಗ್ಗದ ಈ ಯುವಕನ ಪ್ರೀತಿ ಅಭಿಮಾನ ನೋಡಿದವರು ಫುಲ್.. ಫಿದಾ...!!? ಇನ್ನೂ ಮಗನ ಪ್ರೀತಿ ಕಂಡು ಹೆತ್ತವರು ಕೂಡ ಮೂಕ ವಿಸ್ಮಿತರಾಗಿದ್ದಾರೆ. 

ಇಷ್ಟಕ್ಕೂ ಯುವಕ ನೀಡಿದ ವಿಶಿಷ್ಟ ಉಡುಗೊರೆಯಾದರೂ ಏನು ಗೊತ್ತಾ?! ತನ್ನ ಹುಟ್ಟು ಹಬ್ಬದಂತೆ ಪ್ರೀತಿ ಪಾತ್ರರಿಗೆ ತಾನೇ ಹುಡುಗರೆ ನೀಡಿದ ಯುವಕನಾದರೂ ಯಾರು...?!ಆತನ ಪ್ರೀತಿಯ ಹುಡುಗರೇ ನೋಡಿದವರು ಭಲೆ...!  ಭೇಷ್....!  ಎನ್ನುತ್ತಿರುವುದಾದರೂ ಏಕೆ..?! ಎಂಬ ಹತ್ತು ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ. 

Tap to resize

Latest Videos

ಯತ್ನಾಳ್‌ ಬಸ್‌ಸ್ಟ್ಯಾಂಡ್‌ನಲ್ಲಿ ಗಿಣಿಶಾಸ್ತ್ರ ಹೇಳಲಿ: ಸಚಿವ ಮಧು ತಿರುಗೇಟು

ಶಿವಮೊಗ್ಗ ತಾಲೂಕಿನ ಕುಸುಗೂರು ಗ್ರಾಮದ ಸಾಮಾನ್ಯ ರೈತ ಕುಟುಂಬದ ಯುವಕ ಸಮರ್ಥ್ ಗೌಡ ವಿಶಿಷ್ಟ ರೀತಿಯಲ್ಲಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಹೌದು ನೀವು ಕನ ವಿಭಿನ್ನವಾದ ವಿಶಿಷ್ಟವಾದ ನಿರ್ಮಲ ಪ್ರೀತಿ ಅಭಿಮಾನವನ್ನು ಕಂಡು ಯಾರಾದರೂ ಜೈ ಎನ್ನದೇ ಇರಲಾರರು. ತನ್ನ ಹೃದಯದಲ್ಲಿ ಕಿಚ್ಚ ಸುದೀಪ್ ಹಾಗೂ ಹೆತ್ತವರು ಯಾವಾಗಲೂ ಚಿರಸ್ಥಾಯಿ ಆಗಿರುವಂತೆ ಮಾಡಿದ್ದಾರೆ.

ಐತಿಹಾಸಿಕ ಪ್ರಸಿದ್ಧ ಚಂದ್ರಗುತ್ತಿ ಶ್ರೀ ರೇಣುಕಾಂಬಾ ದೇವಸ್ಥಾನ ಕಳ್ಳತನ ಯತ್ನ ನಡೆಸಿದ್ದ ಆರೋಪಿಗಳ ಸೆರೆ 

ತನ್ನ ಎದೆಯ ಎಡ ಭಾಗದಲ್ಲಿ ನಟ ಕಿಚ್ಚ ಸುದೀಪ್ ಭಾವಚಿತ್ರ ಹಾಗೂ ಬಲ ಭಾಗದಲ್ಲಿ ತಂದೆ  ಕುಮಾರ್  ತಾಯಿ  ಮಂಗಳಮ್ಮ, ತಂಗಿ ಮಗು ಗ್ರಿತಿಕ್ ಭಾವಚಿತ್ರಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ನಟ ಕಿಚ್ಚ ಸುದೀಪ್ ಹಾಗೂ ಹೆತ್ತವರ ಮೇಲಿನ ತನ್ನ ಪ್ರೀತಿ ಶಾಶ್ವತವಾಗಿರುವಂತೆ ಎದೆಯ ಮೇಲೆ ಹಚ್ಚೆ ಹಾಕಿಸಿಕೊಳ್ಳುವ ಮೂಲಕ ಆಗಸ್ಟ್ 16ರ ಇಂದು ಸಮರ್ಥ್ ಗೌಡ  ತಮ್ಮ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿಕೊಂಡಿದ್ದಾರೆ. 

ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗ ಮಾಡುತ್ತಿರುವ ಸಮರ್ಥ್ ವಿವಿಧ ಸಂಘಟನೆಗಳಲ್ಲಿ ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತನ್ನ ಎಷ್ಟನೇ ವರ್ಷದ ಹುಟ್ಟುಹಬ್ಬ ಎಂದು ಬಾಯಿ ಬಿಡದ ಸಮರ್ಥ್  ತನ್ನ ಈ ಹುಟ್ಟುಹಬ್ಬವು ಯಾವಾಗಲೂ ಶಾಶ್ವತವಾಗಿ ನೆನಪಿರಬೇಕೆಂದು ಈ ರೀತಿ ಹಚ್ಚೆ ಹಾಕಿಸಿಕೊಂಡಿರುವುದು ಹೇಳಿದ್ದಾರೆ. ಸಮರ್ಥ್ ನ ನೆಚ್ಚಿನ ನಟನ ಮೇಲಿನ ಅಭಿಮಾನ , ಹೆತ್ತವರ ಮೇಲಿನ ಅಗಾಧ ಪ್ರೀತಿ ಕಂಡು ಗ್ರಾಮಸ್ಥರು  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

click me!