ಜಗತ್ತಿನ ಬೇರೆ ದೇಶಗಳಿಗಿಂತ 45 ಸಾವಿರ ಕಿಮೀ ಉದ್ದದ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ದೇಶದ ರೈಲ್ವೆ ಮಾರ್ಗಗಳ ಒಟ್ಟು ಉದ್ದವನ್ನು 2 ಲಕ್ಷ ಕಿಮೀ ಗೆ ಏರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕಾಗಿ .135 ಲಕ್ಷ ಕೋಟಿ ಹೂಡಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಅಲ್ಲದೇ ದೇಶಾದ್ಯಂತ 4500 ವಂದೇ ಭಾರತ್ ರೈಲುಗಳನ್ನು ಓಡಿಸುವ ಗುರಿ ಹೊಂದಿದೆ: ಸಂಸದ ಈರಣ್ಣ ಕಡಾಡಿ
ಮೂಡಲಗಿ(ಆ.16): ಸ್ವಾತಂತ್ರ್ಯದ ಶತಮಾನೋತ್ಸವ ವೇಳೆಗೆ ಭಾರತದ ಆರ್ಥಿಕತೆ ಜಗತ್ತಿನ ಟಾಪ್ 3ರ ಹಂತಕ್ಕೆ ಬರುವ ಗುರಿ ಹೊಂದಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು. ತಾಲೂಕು ಆಡಳಿತದಿಂದ ಪಟ್ಟಣದ ಬಸವರಂಗ ಪಂಟಪದಲ್ಲಿ ಮಂಗಳವಾರ ಜರುಗಿದ ಸ್ವಾತಂತ್ರ್ಯೋತ್ಸವದ ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತಿನ ಬೇರೆ ದೇಶಗಳಿಗಿಂತ 45 ಸಾವಿರ ಕಿಮೀ ಉದ್ದದ ಎಕ್ಸ್‌ಪ್ರೆಸ್ ವೇ ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ. ದೇಶದ ರೈಲ್ವೆ ಮಾರ್ಗಗಳ ಒಟ್ಟು ಉದ್ದವನ್ನು 2 ಲಕ್ಷ ಕಿಮೀ ಗೆ ಏರಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕಾಗಿ .135 ಲಕ್ಷ ಕೋಟಿ ಹೂಡಿಕೆ ಮಾಡಲು ನಿರ್ಧಾರ ಮಾಡಲಾಗಿದೆ. ಅಲ್ಲದೇ ದೇಶಾದ್ಯಂತ 4500 ವಂದೇ ಭಾರತ್ ರೈಲುಗಳನ್ನು ಓಡಿಸುವ ಗುರಿ ಹೊಂದಿದೆ ಎಂದರು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಬ್‌ಗಳು 1 ಸಾವಿರ ಕೋಟಿ ಟನ್ ಸಾಮರ್ಥ್ಯದ ಸರಕುಗಳನ್ನು ನಿರ್ವಹಿಸಬಲ್ಲ ಬಂದರುಗಳ ನಿರ್ಮಾಣ, ಅತ್ಯಾಧುನಿಕ 5 ನಗರ ನಿರ್ಮಾಣ, ಅತೀ ಹೆಚ್ಚು ವಿದ್ಯುತ್ ಚಾಲಿತ ವಾಹನಗಳ ಸಂಚಾರ, ದೇಶದ ಜನ ಸಾಮಾನ್ಯರಿಗೆ ಉತ್ತಮ ವೈದ್ಯಕೀಯ ಸೌಲಭ್ಯ ಸೇರಿದಂತೆ ಈ ರೀತಿ ಎಲ್ಲ ಕ್ಷೇತ್ರಗಳನ್ನು ಭಾರತ ಆತ್ಮನಿರ್ಭರತೆ ಸಾಧಿಸುವ ಸಂಕಲ್ಪ ನಮ್ಮದಾಗಿದೆ. ದೇಶದ ಅಭಿವೃದ್ಧಿಗೆ ಸ್ವಾತಂತ್ರ್ಯೋತ್ಸವದ ಈ ದಿನ ದೇಶದ ಜನರೆಲ್ಲ ಈ ಗುರಿ ಈಡೇರಿಕೆಗೆ ಸಂಕಲ್ಪ ಮಾಡೋಣ ಎಂದರು.
undefined
ಯತ್ನಾಳ್ ಹೇಳಿಕೆ ಬರಿ ಊಹಾಪೋಹ: ಸಂಸದ ಜೊಲ್ಲೆ
ತಹಸೀಲ್ದಾರ್ ಶಿವಾನಂದ ಬಬಲಿ ತಹಸೀಲ್ದಾರ್ ಕಚೇರಿ ಮತ್ತು ಗಾಂಧಿ ವೃತದಲ್ಲಿ, ಪುರಸಭೆ ಆವರಣದಲ್ಲಿ ಮುಖ್ಯಾಧಿಕಾರಿ ದೀಪಕ ಹರ್ದಿ ಧ್ವಜಾರೋಹಣ ನೆರವೇರಿಸಿದರು. ಸಮಾರಂಭದಲ್ಲಿ ಐರನ್ ಮ್ಯಾನ್ ವಿಜೇತ ಮೂಡಲಗಿ ಸಿಪಿಐ ಶ್ರೀಶೈಲ್ ಬ್ಯಾಕೂಡ, ಆ.13 ರಂದು ಪಂಜಾಬ್‌ದಲ್ಲಿ ಜರುಗಿದ ರಾಷ್ಟ್ರೀಯ ಟೆಕ್ವಾಂಡೋ ಮುಕ್ತ ಚಾಂಪಿನಶಿಪ್‌ದಲ್ಲಿ ಬೆಳ್ಳಿ ಪದಕ ಪಡೆದ ಪಟ್ಟಣದ ಲಕ್ಷ್ಮೇ ರಡೇರಹಟ್ಟಿಹಾಗೂ ಪುರಸಭೆಯಿಂದ ಜರುಗಿದ ಪ್ಲಾಸ್ಟಿಕ್ ಮುಕ್ತ ಭಾರತ ವಿವಿಧ ಸ್ಪರ್ಧೆಯ ವಿಜೇತರನ್ನು ಸತ್ಕರಿಸಿದರು.
ಇದೇ ವೇಳೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದಲ್ಲಿ ಕಳೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 625ಕ್ಕೆ 620 ಅಂಕಪಡೆದ ವಿದ್ಯಾರ್ಥಿ ಲಕ್ಷ್ಮೇ ಸಿ.ಕಂಬಳಿ ವಿದ್ಯಾರ್ಥಿಗೆ ಪಟ್ಟಣದ ಸ್ವಾತಂತ್ರ್ಯ ಹೋರಾಟಗಾರ ದಿ.ರಾವಜೆಪ್ಪ ಬಾಲಪ್ಪ ಸೋನವಾಲಕರ ಸ್ಮರಣಾರ್ಥ ಡಾ.ಪ್ರದೀಪ ಸು.ಸೋನವಾಲ್ಕರ ಕೊಡಮಾಡುವ .1 ಲಕ್ಷ ಚೆಕ್‌ನ್ನು ಎಸ್.ಆರ್.ಸೋನವಾಲ್ಕರ ವಿತರಿಸಿ, ಸತ್ಕರಿಸಿದರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆ, ನವಚೈತನ್ಯ ಶಾಲೆ, ಎಲ್.ವೈ.ಅಡಿಹುಡಿ ಶಾಲೆ, ಶಾಂತಿನಿಕೇತನ ಶಾಲೆ, ಕೆ.ಎಚ್.ಸೋನವಾಲಕರ ಸರ್ಕಾರಿ ಪ್ರೌಢಶಾಲೆ, ಮೌÇನಾ ಆಜಾದ್ ಶಾಲೆ, ಉಮಾಬಾಯಿ ಸ್ವಾಮಿ ಪ್ರೌಢಶಾಲೆ, ಸಿ.ಎನ್.ಮುಗಳಖೋಡ ಶಾಲೆ, ಎಸ್.ಎಸ್.ಆರ್ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮ ಜನಮನ ಸೆಳೆದವು. ಸಮಾರಂಭದ ವೇದಿಕೆಯಲ್ಲಿ ತಹಸೀಲ್ದಾರ್ ಶಿವಾನಂದ ಬಬಲಿ, ಮುಖ್ಯಾಧಿಕಾರಿ ದೀಪಕ ಹರ್ದಿ, ಬಿಇಒ ಅಜೀತ ಮನ್ನಿಕೇರಿ, ತಾಪಂ ಇಒ ಎಫ್.ಜಿ.ಚಿನ್ನಣ್ಣವರ, ಸಿಡಿಪಿಒ ಯಲ್ಲಪ್ಪ ಗದಾಡಿ ಪುರಸಭೆ ಅಧ್ಯಕ್ಷ ರವಿ ಸಣ್ಣಕ್ಕಿ, ಹನಮಂತ ಗುಡ್ಲಮನಿ, ಸದಸ್ಯರಾದ ಜಯಾನಂದ ಪಾಟೀಲ, ಎ.ಕೆ.ತಾಂಬೋಳಿ, ಸುಭಾಸ ಸಣ್ಣಕ್ಕಿ, ಶಿವು ಚಂಡಕಿ, ಗಫಾರ್ ಡಾಂಗೆ, ಶಿವು ಸಣ್ಣಕ್ಕಿ, ಆನಂದ ಟಪಾಲದಾರ, ಹುಸೇನ್ ಶೇಖ, ಐ.ಎಸ್.ಕೊಣ್ಣೂರ ಮತ್ತು ಕೆ.ಟಿ.ಗಾಣಿಗೇರ, ಅನ್ವರ ನದಾಫ್, ಸಿದ್ದು ಗಡೇಕರ, ಅರಮನಿ ಮತ್ತಿತರರು ಇದ್ದರು. ಆರೋಗ್ಯ ನಿರೀಕ್ಷ ಸಿ.ಎನ್.ಮುಗಳಖೋಡ ಸ್ವಾಗತಿಸಿದರು. ಶಿಕ್ಷಣ ಸಂಯೋಜಕ ಕರಿಬಸವರಾಜು.ಟಿ ನಿರೂಪಿಸಿದರು. ತಾಲೂಕು ಶಿರಸ್ತೇದಾರ ಪಿ.ಕೆ.ನಾಯಕ ವಂದಿಸಿದರು.