ಉಡುಪಿ: ಮಾದಕ ವ್ಯಸನಿ ಯುವಕನಿಗೆ ಬೇಕಿದೆ ಸಮಾಜದ ಆಶ್ರಯ !

Published : Aug 16, 2023, 11:00 PM IST
ಉಡುಪಿ: ಮಾದಕ ವ್ಯಸನಿ ಯುವಕನಿಗೆ ಬೇಕಿದೆ ಸಮಾಜದ ಆಶ್ರಯ !

ಸಾರಾಂಶ

ಯುವಕನನ್ನು ರಕ್ಷಣೆ ಮಾಡಿ, ಚಿಕಿತ್ಸೆ ಕೊಡಿಸುವಂತೆ ನೆಟ್ಟಿಗರಿಂದ ಭಾರಿ ಆಗ್ರಹ ಕೇಳಿ ಬಂದಿತ್ತು. ಈ ಯುವಕನ ಪರಿಸ್ಥಿತಿ ಬಗ್ಗೆ ಮಮ್ಮಲ ಮರುಗಿದ ಅಂಬಲಪಾಡಿಯ ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಭಾಸ್ಕರ್ ಅವರ ಮನವಿ ಮೇರೆಗೆ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ವಿಶು ಶೆಟ್ಟಿ ಅವರೇ ಇದೀಗ ಯುವಕನಿಗೆ ದಿಕ್ಕು ಎಂಬಂತಾಗಿದೆ. 

ಉಡುಪಿ(ಆ.16):  ತಿಂಗಳ ಹಿಂದೆ ಉಡುಪಿಯ ಅಂಬಾಗಿಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿ ಡ್ರಗ್ಸ್ ಗಾಗಿ ಅಂಗಲಾಚುತ್ತಿದ್ದ ಯುವಕನ ವೀಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ದೇಶ-ವಿದೇಶಗಳಲ್ಲಿ ಸದ್ದು ಮಾಡಿತ್ತು. ಯುವಕನನ್ನು ರಕ್ಷಣೆ ಮಾಡಿ, ಚಿಕಿತ್ಸೆ ಕೊಡಿಸುವಂತೆ ನೆಟ್ಟಿಗರಿಂದ ಭಾರಿ ಆಗ್ರಹ ಕೇಳಿ ಬಂದಿತ್ತು. ಈ ಯುವಕನ ಪರಿಸ್ಥಿತಿ ಬಗ್ಗೆ ಮಮ್ಮಲ ಮರುಗಿದ ಅಂಬಲಪಾಡಿಯ ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಭಾಸ್ಕರ್ ಅವರ ಮನವಿ ಮೇರೆಗೆ ಉಡುಪಿಯ ಬಾಳಿಗಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ ವಿಶು ಶೆಟ್ಟಿ ಅವರೇ ಇದೀಗ ಯುವಕನಿಗೆ ದಿಕ್ಕು ಎಂಬಂತಾಗಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕಮೆಂಟ್ ಮಾಡಿದ್ದ ಮಂದಿ, ಯುವಕನಿಗೆ ಸೂಕ್ತ ಆಶ್ರಯ, ಚಿಕಿತ್ಸೆಯ ವಿಷಯಕ್ಕೆ ಬಂದಾಗ ಮೌನವಾಗಿದ್ದಾರೆ.ಸುಮಾರು ಒಂದು ತಿಂಗಳ ಕಾಲ ಚಿಕಿತ್ಸೆ ಪಡೆದ ಉಡುಪಿಯ ಯುವಕ ಹಾರ್ದಿಕ್ (21) ಬಹಳಷ್ಟು ಮಟ್ಟಿಗೆ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಳಿಸುವಂತೆ ವೈದ್ಯರು ಸೂಚಿಸಿದ್ದಾರೆ.

ಉಡುಪಿ ಜಿಲ್ಲೆಗೆ 32 ಹೊಸ ಪ್ರವಾಸಿ ತಾಣಗಳು ಸೇರ್ಪಡೆ: ಜಿಲ್ಲಾ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್‌

ಮುಂದೆ ಯುವಕ ಇನ್ನಷ್ಟು ಗುಣಮುಖನಾಗಲು ಹೆಚ್ಚಿನ ಔಷಧೋಪಾಚಾರ, ಕೌನ್ಸಿಲಿಂಗ್, ಯೋಗ, ಧ್ಯಾನದ ಆವಶ್ಯಕತೆಯಿದೆ. ಈ ಹಂತದಲ್ಲಿ ಅದು ಲಭಿಸದಿದ್ದರೆ ಮತ್ತೆ ಆತ ದುಶ್ಚಟಕ್ಕೆ ಇಳಿಯುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ವಿಶು ಶೆಟ್ಟಿ ಅವರು ಯುವಕನ ಹೆತ್ತವರು, ಸಂಬಂಧಿಕರು, ಸರಕಾರಿ ಇಲಾಖೆಗಳನ್ನು ಸಂಪರ್ಕಿಸಿ ನೆರವು ಯಾಚಿಸಿದರೂ ಸೂಕ್ತ ಸ್ಪಂದನೆಯೇ ಸಿಕ್ಕಿಲ್ಲ.

ಗತ್ಯಂತರವಿಲ್ಲದೆ ವಿಶು ಶೆಟ್ಟಿ ಅವರು ಮಂಜೇಶ್ವರದ ದೈಗುಳಿ ಶ್ರೀಸಾಯಿ ಸೇವಾಶ್ರಮದ ಡಾ.ಉದಯ ಕುಮಾರ್ ದಂಪತಿಯನ್ನು ಸಂಪರ್ಕಿಸಿ ಆಶ್ರಯ ಯಾಚಿಸಿದ್ದಾರೆ. ಅಲ್ಲಿಂದ ಸ್ಪಂದನೆ ದೊರೆತ ಹಿನ್ನಲೆಯಲ್ಲಿ ಖಾಸಗಿ ವಾಹನದಲ್ಲಿ ಯುವಕನನ್ನು ಕರೆದೊಯ್ದು ಆಶ್ರಮಕ್ಕೆ ದಾಖಲಿಸಿದ್ದಾರೆ.

ಬಿಜೆಪಿಯವರು ಬೊಕ್ಕಸ ಖಾಲಿ ಮಾಡಿಟ್ಟು ಹೋಗಿದ್ದಾರೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌

ಯುವಕನ ಆಸ್ಪತ್ರೆ ವೆಚ್ಚ, ಔಷಧಿ, ಊಟೋಪಚಾರ ಎಂದೆಲ್ಲಾ ಸುಮಾರು 25,000 ರೂ. ಖರ್ಚಾಗಿದೆ. ಅಂಬಲಪಾಡಿ ಗ್ರಾಮ ಪಂಚಾಯಿತಿ ಸದಸ್ಯೆ ಭಾರತಿ ಭಾಸ್ಕರ ಅವರು 12,000 ರೂ. ನೀಡಿ ಸಾಮಾಜಿಕ ಕಳಕಳಿ ಮೆರೆದರೆ, ದಾನಿಯೊಬ್ಬರು 5 ಸಾವಿರ ರೂ. ನೀಡಿದ್ದಾರೆ. ಇನ್ನುಳಿದ 8,000 ರೂ.ನ್ನು ವಿಶು ಶೆಟ್ಟಿ ಅವರೇ ಭರಿಸಿ ಮಾನವೀಯತೆ ಮೆರೆದಿದ್ದಾರೆ.

ವಿಶು ಶೆಟ್ಟಿ ಮನವಿ

ಯುವಕ ಹೆದ್ದಾರಿಯಲ್ಲಿ ಮಲಗಿ ಡ್ರಗ್ಸ್ಗಾಗಿ ಅಂಗಲಾಚುವ ವೀಡಿಯೋ ವೈರಲ್ ಆಗಿ ಆತನನ್ನು ರಕ್ಷಿಸಿ, ಚಿಕಿತ್ಸೆ ಕೊಡಿಸುವಂತೆ ದೇಶ ವಿದೇಶದಿಂದ ಕರೆ ಬಂದಿತ್ತುಇದೀಗ ಯುವಕ ಚೇತರಿಸಿಕೊಂಡಿದ್ದಾನೆ, ಆದರೆ ಯುವಕನಿಗೆ ಆಶ್ರಯನೀಡುವವರು ಯಾರೂ ಇಲ್ಲ. ಸಂಬಂಧಪಟ್ಟ ಇಲಾಖೆಗಳು,ಜಿಲ್ಲಾಡಳಿತ ಅಲ್ಲದೆ ಯುವಕನ ಹೆತ್ತವರೂ ನೆರವಿಗೆ ಬಂದಿಲ್ಲ.ಯುವಕನನ್ನು ಹೀಗೆಯೇ ಬಿಟ್ಟರೆ ಮತ್ತೆ ಆತ ಬೀದಿ ಪಾಲಾಗುವುದರಲ್ಲಿ ಸಂಶಯವಿಲ್ಲ. ಇದೀಗ  ಮಂಜೇಶ್ವರದ  ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರಕ್ಕೆ ದಾಖಲಿಸಿದ್ದೇನೆ. ಆಶ್ರಮದ ಡಾ.ಉದಯ ಕುಮಾರ್ ದಂಪತಿಯ ಮಾನವೀಯ ನೆರವಿಗೆ ಅಭಾರಿಯಾಗಿದ್ದೇನೆ. ಇದೀಗ ಯುವಕನ ಮುಂದಿನ ಭವಿಷ್ಯದ ದೃಷ್ಟಿಯಿಂದ ಸಂಘ ಸಂಸ್ಥೆಗಳು, ಸಾಮಾಜಿಕ ಜಾಲತಾಣದ ಸಹೃದಯರು ನೆರವಿಗೆ ಮುಂದಾಗಬೇಕು.

PREV
Read more Articles on
click me!

Recommended Stories

ಮರ್ಯಾದೆಗೇಡು ಹ*ತ್ಯೆಗೆ ದಲಿತ ಸಂಘಟನೆಗಳ ಕಿಚ್ಚು: ಪೊಲೀಸ್‌ ಸರ್ಪಗಾವಲಿನಲ್ಲಿ ಯುವತಿ ಅಂತ್ಯಕ್ರಿಯೆ
ಯುವ ನಿಧಿ ಯೋಜನೆ: 3.62 ಲಕ್ಷ ನಿರುದ್ಯೋಗಿಗಳ ನೋಂದಣಿ, 2,326 ಮಂದಿಗೆ ಸಿಕ್ಕಿದೆ ಕೆಲಸ!