Breaking: ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಏರ್‌ಫೋರ್ಸ್‌ ಅಧಿಕಾರಿ!

Published : Jan 20, 2025, 11:25 AM ISTUpdated : Jan 20, 2025, 11:49 AM IST
Breaking: ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಮಾಜಿ ಏರ್‌ಫೋರ್ಸ್‌ ಅಧಿಕಾರಿ!

ಸಾರಾಂಶ

ಬೆಂಗಳೂರಿನ ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಯುವಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಮೆಟ್ರೋ ಹಳಿಗೆ ಜಿಗಿದ ಯುವಕನನ್ನು ಸಿಬ್ಬಂದಿ ರಕ್ಷಿಸಿದ್ದಾರೆ.

ಬೆಂಗಳೂರು (ಜ.20): ಬೆಂಗಳೂರಿನ ನಮ್ಮ ಮೆಟ್ರೋದಲ್ಲಿ ಬೆಳ್ಳಂಬೆಳಗ್ಗೆ ಭಾರೀ ಅನಾಹುತ ತಪ್ಪಿದೆ. ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು 49 ವರ್ಷದ ವ್ಯಕ್ತಿಯೊಬ್ಬ ಯತ್ನಿಸಿದ್ದಾನೆ. ಈ ವೇಳೆ ಸಿಬ್ಬಂದಿಯ ಜಾಗೃತೆಯಿಂದ ಯುವಕನ ಜೀವ ಉಳಿದುಕೊಂಡಿದೆ. ಜಾಲಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಳ್ಳಲು ವ್ಯಕ್ತಿ ನೇರವಾಗಿ ಮೆಟ್ರೋ ಟ್ರ್ಯಾಕ್‌ಗೆ ಜಿಗಿದಿದ್ದಾನೆ. ಸೋಮವಾರ ಬೆಳಿಗ್ಗೆ 10.25ರ ವೇಳೆಗೆ ಈ ಘಟನೆ ನಡೆದಿದೆ ಎಂದು ಸಿಬ್ಬಂದಿ ತಿಳಿಸಿದ್ದಾರೆ. ಹಸಿರು ಮಾರ್ಗದಲ್ಲಿ ಬರುವ ಜಾಲಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ಇದರಿಂದಾಗಿ ಕೆಲಕಾಲ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.

Bengaluru: ಮೆಟ್ರೋ ಟ್ರ್ಯಾಕ್‌ಗೆ ಜಿಗಿದು 35 ವರ್ಷದ ಯುವಕ ಆತ್ಮಹತ್ಯೆ

ಮೆಟ್ರೋ ಟ್ರೈನ್ ಬರ್ತಿರೋದನ್ನ ನೋಡಿಕೊಂಡು ಹಳಿಗೆ ಹಾರಿದ ವ್ಯಕ್ತಿ, ಎರಡು ಟ್ರ್ಯಾಕ್ ಗಳ ನಡುವೆ ಮಲಗಿದ್ದ. ರೈಲಿನ ಲೋಕೋಪೈಲಟ್‌ ಸಮಯ ಪ್ರಜ್ಞೆಯಿಂದ ವ್ಯಕ್ತಿಯ ಪ್ರಾಣ ಉಳಿದಿದೆ ಮೆಟ್ರೋ ಹಳಿಗೆ ವ್ಯಕ್ತಿ ಹಾರುತ್ತಿದ್ದಂತೆ ಮೆಟ್ರೋ ರೈಲನ್ನು ಲೋಕೋಪೈಲಟ್‌ ನಿಲ್ಲಿಸಿದ್ದಾರೆ. ಇದರಿಂದ 15 ನಿಮಿಷಗಳ ಕಾಲ ಮೆಟ್ರೋ ಸಂಚಾರ ವ್ಯತ್ಯಯವಾಗಿತ್ತು. 10.45ರ ನಂತರ ಮತ್ತೆ ಮೆಟ್ರೋ ಸಂಚರ ಆರಂಭವಾಗಿದೆ. ಹಸಿರು ಮಾರ್ಗದ ಸಿಲ್ಕ್ ಇನ್ಸ್ಟಿಟ್ಯೂಟ್‌ನಿಂದ ಮಾದಾವರ ಮಾರ್ಗದಲ್ಲಿ ಜಾಲಹಳ್ಳಿ ಮೆಟ್ರೋ ಸ್ಟೇಷನ್‌ ಇದೆ. ಸದ್ಯ ಯುವಕನನ್ನು ಮೆಟ್ರೋ ಸಿಬ್ಬಂದಿ ರಕ್ಷಿಸಿದ್ದು, ಬಿಎಂಆರ್ಸಿಎಲ್ ಅಧಿಕಾರಿಗಳು ಈತನನ್ನು ಸ್ಥಳೀಯ ಪೊಲೀಸರ ವಶಕ್ಕೆ ನೀಡಿದ್ದಾರೆ. 

ಮಾನಸಿಕ ಖಿನ್ನತೆಯಿಂದ ಹಳಿಗೆ ಜಿಗಿದು ಆತ್ಮಹತ್ಯೆ ಯತ್ನಿಸಿದ ವ್ಯಕ್ತಿ; ಕೆಲ ಕಾಲ ಮೆಟ್ರೋ ಸಂಚಾರ ಸ್ಥಗಿತ!

ವ್ಯಕ್ತಿ ಯಾರು: ಟ್ರ್ಯಾಕ್‌ಗೆ ಜಿಗಿದ ವ್ಯಕ್ತಿಯನ್ನು ಬಿಹಾರ ಮೂಲದ ಮಾಜಿ ಏರ್‌ಪೋರ್ಸ್‌ ಅಧಿಕಾರಿ 49 ವರ್ಷದ ಅನಿಲ್‌ ಕುಮಾರ್‌ ಪಾಂಡೆ ಎಂದು ಗುರುತಿಸಲಾಗಿದೆ. ಬೆಳಗ್ಗೆ 10.25ರ ವೇಳೆಗೆ ಟ್ರೇನ್‌ ಜಾಲಹಳ್ಳಿ ಮೆಟ್ರೋ ಸ್ಟೇಷನ್‌ಗೆ ಬರುವ ಹಾದಿಯಲ್ಲಿದ್ದಾಗ ಈತ ಟ್ರ್ಯಾಕ್‌ಗೆ ಜಿಗಿದಿದ್ದಾನೆ. ಈ ವೇಳೆ ಇಟಿಎಸ್‌ ಅಂದರೆ ಎಮರ್ಜೆನ್ಸಿ ಟ್ರಿಪ್‌ ಸಿಸ್ಟಮ್‌ಅನ್ನು ಆಕ್ಟಿವೇಟ್‌ ಮಾಡಲಾಗಿದ್ದು, ಬಿಎಂಆರ್‌ಸಿಎಲ್‌ ಸಿಬ್ಬಂದಿ ಹಾಗೂ ಟೀಮ್‌ ಈತನನ್ನು ರಕ್ಷನೆ ಮಾಡಿದೆ. ಪ್ರಾಥಮಿಕ ಮಾಹಿತಿಯಲ್ಲಿ ಈ ವೇಳೆ ಯಾರಿಗೂ ಗಾಯವಾಗಿಲ್ಲ. 10.50ರ ವೇಳೆಗೆ ಇಡೀ ಗ್ರೀನ್‌ ಲೈನ್‌ನಲ್ಲಿ ಮೆಟ್ರೋ ಸಂಚಾರ ಪುನಃ ಆರಂಭವಾಗಿದೆ. 10.25 ರಿಂದ 10.50ರವರೆಗೆ ನಾಲ್ಕು ಟ್ರೇನ್‌ಗಳನ್ನು ಯಶವಂತಪುರ-ರೇಷ್ಮೆ ಸಂಸ್ಥೆ ನಡುವೆ ಓಡಿಸಲಾಗಿತ್ತು. ಈ ವೇಳೆ ಮಾದಾವರ ಸ್ಟೇಷನ್‌ವರೆಗೂ ರೈಲು ಸಂಪರ್ಕ ಇದ್ದಿರಲಿಲ್ಲ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.

ನಮ್ಮ ಮೆಟ್ರೋದಲ್ಲಿ ಈ ಹಿಂದೆ ವರದಿಯಾದ ಆತ್ಮಹತ್ಯೆ/ಆತ್ಮಹತ್ಯೆ ಪ್ರಕರಣಗಳು

1 ಜನವರಿ 2024, ಸ್ಥಳ: ಇಂದಿರಾ ನಗರ ಮೆಟ್ರೋ ನಿಲ್ದಾಣ
ಆಗಿದ್ದೇನು: ಮೊಬೈಲ್ ತೆಗೆಯಲು ಟ್ರ್ಯಾಕ್‌ಗೆ ಮಹಿಳೆಯೊಬ್ಬಳು ಇಳಿದಿದ್ದಳು. ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಜೀವ ಉಳಿದಿತ್ತು.

5 ಜನವರಿ 2024, ಸ್ಥಳ: ಜಾಲಹಳ್ಳಿ ಮೆಟ್ರೋ ನಿಲ್ದಾಣ
ಆಗಿದ್ದೇನು: ಮೆಟ್ರೋ ಹಳಿಗೆ ಹಾರಿ ಯುವಕನಿಂದ ಆತ್ಮಹತ್ಯೆಗೆ ಯತ್ನ. ಐಸಿಯುನಲ್ಲಿ ಚಿಕಿತ್ಸೆ

6 ಜನವರಿ 2024, ಸ್ಥಳ: ಜೆ.ಪಿ.ನಗರ ಮೆಟ್ರೋ ನಿಲ್ದಾಣ
ಆಗಿದ್ದೇನು: ಮೆಟ್ರೋ ಟ್ರ್ಯಾಕ್ ಮೇಲೆ ಬೆಕ್ಕು ಪ್ರತ್ಯಕ್ಷವಾಗಿದ್ದರಿಂದ ಪ್ರಯಾಣಿಕರು ಆತಂಕಗೊಂಡಿದ್ದರು.

12 ಮಾರ್ಚ್ 2024, ಸ್ಥಳ :- ಜ್ಞಾನ ಭಾರತಿ ಮೆಟ್ರೋ ನಿಲ್ದಾಣ 
ಜ್ಞಾನಭಾರತಿ ಮೆಟ್ರೋ ಸ್ಟೇಷನ್ ನಿಂದ ಪಟ್ಟಣಗೆರೆ ಮೆಟ್ರೋ ಸ್ಟೇಷನ್ ನಡುವಿನ ವಯಾಡಕ್ಟ್ ನಲ್ಲಿ  ಅಪರಿಚಿತ ವ್ಯಕ್ತಿ ಕಾಣಿಸಿಕೊಂಡಿದ್ದ

21 ಮಾರ್ಚ್ 2024, ಸ್ಥಳ :- ಅತ್ತಿಗುಪ್ಪೆ ಮೆಟ್ರೋ
ಆಗಿದ್ದೇನು: ಮೆಟ್ರೋ ಹಳಿ ಮೇಲೆ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ಯುವಕ, ಧ್ರುವ್‌ ಕಕ್ಕರ್‌ ಹೆಸರಿನ ಯುವಕ ಸಾವು ಕಂಡಿದ್ದ.ಟ್ರೈನ್ ಬರ್ತಾ ಇದೆ ಅಂತ ಗೊತ್ತಾಗಿ ಟ್ರ್ಯಾಕಿಗೆ ಹಾರಿದ ಯುವಕ . ನ್ಯಾಷನಲ್ ಲಾ ಕಾಲೇಜಿನಲ್ಲಿ ಮೊದಲನೇ ವರ್ಷ ವ್ಯಾಸಂಗ ಮಾಡುತ್ತಿದ್ದ.

10 ಜೂನ್‌ 2024,, ಸ್ಥಳ:- ಹೊಸಕೆರೆಹಳ್ಳಿ ಮೆಟ್ರೋ
ಆಗಿದ್ದೇನು: ಹೊಸಕೆರೆಹಳ್ಳಿ ಮೆಟ್ರೋ ನಿಲ್ದಾಣದಲ್ಲಿ ಯುವಕನೋರ್ವ ಟ್ರ್ಯಾಕ್ ಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ. ಸಿಬ್ಬಂದಿ ಸಮಯ ಪ್ರಜ್ಞೆಯಿಂದ ಯುವಕ ಬಚಾವ್ ಆಗಿದ್ದ.
 

PREV
Read more Articles on
click me!

Recommended Stories

ಡೆಡ್ಲಿ ರಾಟ್‌ವೀಲರ್ ನಾಯಿಗಳ ದಾಳಿಗೆ ಮಹಿಳೆ ದುರ್ಮರಣ; ಮೂವರು ಮಕ್ಕಳು ಅನಾಥ
ಚಿಕ್ಕಮಗಳೂರು: ಬ್ಯಾನರ್ ಗಲಾಟೆ, ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ, ಬಜರಂಗದಳ ಕಾರ್ಯಕರ್ತರ ಮೇಲೆ ಶಂಕೆ!