ಟಾಕ್ಸಿಕ್‌ ಬಳಿಕ ಕಾಂತಾರ-2 ಸಿನಿಮಾ ತಂಡದಿಂದಲೂ ಅರಣ್ಯ ನಿಯಮ ಉಲ್ಲಂಘನೆ?

Published : Jan 20, 2025, 11:09 AM ISTUpdated : Jan 21, 2025, 10:08 AM IST
ಟಾಕ್ಸಿಕ್‌ ಬಳಿಕ ಕಾಂತಾರ-2 ಸಿನಿಮಾ ತಂಡದಿಂದಲೂ ಅರಣ್ಯ ನಿಯಮ ಉಲ್ಲಂಘನೆ?

ಸಾರಾಂಶ

ಯಶ್‌ ನಟನೆಯ ಟಾಕ್ಸಿಕ್‌ ಸಿನಿಮಾ ಬಳಿಕ ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ-2 ಸಿನಿಮಾ ಮೇಲೆ ಅರಣ್ಯ ನಿಯಮ ಉಲ್ಲಂಘನೆ ಆರೋಪ ಕೇಳಿಬಂದಿದೆ. ಕಾಡುಪ್ರಾಣಿಗಳಿರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿ, ಪಟಾಕಿ ಸಿಡಿಸಿ ಚಿತ್ರೀಕರಣ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇದನ್ನು ಪ್ರಶ್ನೆ ಮಾಡಿದವರ ಮೇಲೆ ಸಿನಿಮಾ ತಂಡ ಹಲ್ಲೆ ಮಾಡಿದೆ ಎಂದು ವರದಿಯಾಗಿದೆ.

ಹಾಸನ (ಜ.20): ಯಶ್‌ ಅಭಿನಯದ ಟಾಕ್ಸಿಕ್‌ ಸಿನಿಮಾ ಬಳಿಕ ರಿಷಬ್‌ ಶೆಟ್ಟಿ ನಟಿಸಿ ನಿರ್ದೇಶಿಸುತ್ತಿರುವ ಕಾಂತಾರ-2 ಸಿನಿಮಾದ ಮೇಲೂ ಅರಣ್ಯ ನಿಯಮ ಉಲ್ಲಂಘನೆ ಮಾಡಿರುವ ಆರೋಪ ಕೇಳಿಬಂದಿದೆ. ಕಾಡುಪ್ರಾಣಿಗಳಿರುವ ಅರಣ್ಯ ಪ್ರದೇಶದಲ್ಲಿ ಬೆಂಕಿ ಹಚ್ಚಿ, ಪಟಾಕಿ ಸಿಡಿಸಿ ಚಿತ್ರೀಕರಣ ಮಾಡಲಾಗಿದೆ ಎಂದು ಆರೋಪಿಸಲಾಗಿದ್ದು, ಇದನ್ನು ಪ್ರಶ್ನೆ ಮಾಡಿದವರ ಮೇಲೆ ಸಿನಿಮಾ ತಂಡ ಹಲ್ಲೆ ಮಾಡಿದೆ ಎಂದು ವರದಿಯಾಗಿದೆ. ಇದಕ್ಕಾಗಿ ಕಾಂತಾರ 2 ಚಿತ್ರತಂಡದ ವಿರುದ್ದ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಾಸನ ಜಿಲ್ಲೆಯ ಹೇರೂರು ಅರಣ್ಯ ಪ್ರದೇಶದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.
ಅರಣ್ಯ ಪ್ರದೇಶ ಹಾನಿ ಮಾಡಿ, ಅಲ್ಲಿ ಸೆಟ್‌ ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಪ್ರಶ್ನಿಸಿದ ಸ್ಥಳೀಯ ವ್ಯಕ್ತಿಗೆ ಹಲ್ಲೆ ಮಾಡಿರೋ ಆರೋಪ ಹೊರಿಸಲಾಗಿದೆ. ಡಿಎಫ್ಓ ರವರೇ ಅರಣ್ಯ , ಕಾಡುಪ್ರಾಣಿಗಳ ರಕ್ಷಿಸುವಂತೆ ಪರಿಸರಪ್ರೇಮಿಗಳು ಮನವಿ ಮಾಡಿದ್ದಾರೆ. ಗೋಮಾಳ ಪ್ರದೇಶದಲ್ಲಿ ಚಿತ್ರೀಕರಣ ಮಾಡೋ ಅನುಮತಿ ಪಡೆದು ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಾಗಿದ್ದು, ಅರಣ್ಯ ಸಚಿವರೇ ಈ ಬಗ್ಗೆ ಕ್ರಮವಹಿಸಲು ಒತ್ತಾಯಿಸಲಾಗಿದೆ.



ಡೀಮ್ಡ್ ಅರಣ್ಯದಲ್ಲಿ ಕಾಂತಾರ 2 ಸಿನಿಮಾ ಚಿತ್ರೀಕರಣ ವಿಚಾರವಾಗಿ ಅಧಿಕಾರಿಗಳು ಕೂಡ ಸ್ಥಳ ಪರಿಶೀಲನೆ ಮಾಡಿದ್ದಾರೆ. ಜನವರಿ ಮೊದಲ ವಾರ ಅನುಮತಿ ಪಡೆಯದೇ ಚಿತ್ರೀಕರಣ ಉಪಕರಣ ತಂದಿಟ್ಟಿದ್ದಕ್ಕೆ ಅರಣ್ಯ ಇಲಾಖೆ ದಂಡ ವಿಧಿಸಿತ್ತು. ಅನುಮತಿ ಸಿಗುವ ಮೊದಲೇ ಚಿತ್ರೀಕರಣ ಸ್ಥಳಕ್ಕೆ ವಸ್ತುಗಳನ್ನು ತಂದಿಡಲಾಗಿತ್ತು. ಉಪಅರಣ್ಯ ಸಂರಕ್ಷಣಾ ಅಧಿಕಾರಿಯಿಂದ 50 ಸಾವಿರ ದಂಡ ವಿಧಿಸಲಾಗಿತ್ತು. ದಂಡ ವಿಧಿಸಿದ್ದ ನಂತರ ಚಿತ್ರೀಕರಣಕ್ಕೆ ಅಧಿಕಾರಿಗಳು ಅನುಮತಿ ನೀಡಿದ್ದರು. ಜನವರಿ 4 ರಂದು ಸಿನಿಮಾ ತಂಡಕ್ಕೆ ದಂಡ ವಿಧಿಸಲಾಗಿತ್ತು. ನಂತರ ಜನವರಿ 5 ರಿಂದ ಶೂಟಿಂಗ್ ತಯಾರಿಗಾಗಿ ಅನುಮತಿ ನೀಡಲಾಗಿತ್ತು. ಜನವರಿ 15 ರಿಂದ 25ರ ವರೆಗೆ ಸಿನಿಮಾ ಶೂಟಿಂಗ್ ಗೆ ಅನುಮತಿ ಇದೆ. ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಚಿತ್ರೀಕರಣ ನಡೆಸಲು ಚಿತ್ರತಂಡ ಅನುಮತಿ ಪಡೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 

ಯಶ್‌ ಮೇಲೆ ಮುಗಿಬಿದ್ದ ಪ್ರಕೃತಿ ಪ್ರಿಯರು; ರಾಕಿಭಾಯ್ 'ಪುಷ್ಪರಾಜ್' ಆಗ್ಬಿಟ್ರಾ ಅಂತ ಕೋಪ!

ಅರಣ್ಯ ಪ್ರದೇಶದಲ್ಲಿ ಬ್ಲಾಸ್ಟ್ ಮಾಡಲಾಗಿದೆ ಎನ್ನುವ ಆರೋಪದ ಬಗ್ಗೆಯೂ ಮಾತನಾಡಿದ ಅಧಿಕಾರಿಗಳು, ಇದಕ್ಕಾಗಿ ಭಾನುವಾರ ಸ್ಥಳ ಪರಿಶೀಲನೆ ಮಾಡಿದ್ದೇವೆ. ಡೀಮ್ಡ್ ಅರಣ್ಯ ಪ್ರದೇಶದಲ್ಲಿ ಯಾವುದೆ ನಿಯಮ ಉಲ್ಲಂಘನೆ ಆಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಗೋಮಾಳ ಜಾಗದಲ್ಲಿ ಬೆಂಕಿ ಹಾಕಲಾಗಿತ್ತು. ಬಳಿಕ ಸ್ಥಳ ಪರಿಶೀಲನೆ ನಡೆಸಿ ಅಧಿಕಾರಿಗಳು ವಾಪಸಾಗಿದ್ದರು. ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕು ಹೆರೂರು ಭಾಗದಲ್ಲಿ ಸಿನಿಮಾದ ಚಿತ್ರೀಕರಣ ನಡೆಯುತ್ತಿದೆ.

ಟಾಕ್ಸಿಕ್ ಚಿತ್ರತಂಡ ಸೇರಿ 3 ಸಂಸ್ಥೆಗಳ ಮೇಲೆ ಎಫ್‌ಐಆರ್ ದಾಖಲಿಸಿದ ಅರಣ್ಯ ಇಲಾಖೆ!

 

PREV
Read more Articles on
click me!

Recommended Stories

ಎಚ್‌ಡಿ ಕುಮಾರಸ್ವಾಮಿ, ನಿರ್ಮಲಾ ಸೀತಾರಾಮನ್‌ ವಿರುದ್ಧ ಗುಡುಗಿದ ಸಿಎಂ ಸಿದ್ದರಾಮಯ್ಯ
ನಾನು ಹತ್ತು ಲಕ್ಷದ ವಾಚಾದ್ರೂ ಕಟ್ಟುತ್ತೇನೆ, ಅದು ನನ್ನ ಆಸ್ತಿ: ಬಿಜೆಪಿಗೆ ತಿರುಗೇಟು ಕೊಟ್ಟ ಡಿಕೆಶಿ