ಬಾಗಲಕೋಟೆಯಲ್ಲಿ ಯೆಲ್ಲೋ ಬೋರ್ಡ್‌​ ವರ್ಸಸ್​​ ವೈಟ್​ ಬೋರ್ಡ್‌ ಕಾರು ಚಾಲಕರ ಹೋರಾಟ

By Govindaraj S  |  First Published Jul 4, 2022, 10:11 PM IST

ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಪರ ವಿರೋಧ ಬಣಗಳಿರೋದನ್ನ ನೋಡಿದಿವಿ, ಕೇಳಿದಿವಿ, ಆದ್ರೆ ಈ ಬಣಗಳು ಇದೀಗ ವೃತ್ತಿಯಿಂದ ಕಾರ್​ ಡ್ರೈವರ್​ ಆಗಿರುವವರನ್ನೂ ಸಹ ಬಿಟ್ಟಿಲ್ಲ ಅಂದ್ರೆ ನಂಬಲೇಬೇಕು.


ವರದಿ: ಮಲ್ಲಿಕಾರ್ಜುನ ಹೊಸಮನಿ, ಏಷಿಯಾನೆಟ್ ಸುವರ್ಣನ್ಯೂಸ್, ಬಾಗಲಕೋಟೆ

ಬಾಗಲಕೋಟೆ (ಜು.04): ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ಪರ ವಿರೋಧ ಬಣಗಳಿರೋದನ್ನ ನೋಡಿದಿವಿ, ಕೇಳಿದಿವಿ, ಆದ್ರೆ ಈ ಬಣಗಳು ಇದೀಗ ವೃತ್ತಿಯಿಂದ ಕಾರ್​ ಡ್ರೈವರ್​ ಆಗಿರುವವರನ್ನೂ ಸಹ ಬಿಟ್ಟಿಲ್ಲ ಅಂದ್ರೆ ನಂಬಲೇಬೇಕು. ಯಾಕೆಂದರೆ ವೈಟ್​ ಬೋರ್ಡ್‌ ಮತ್ತು ಯೆಲ್ಲೋ ಬೋರ್ಡ್‌ ಚಾಲಕರ ಮಧ್ಯೆ ಇದೀಗ ಸಂಘರ್ಷ ಶುರುವಾಗಿದ್ದು, ತಮ್ಮ ತಮ್ಮ ಪ್ರತ್ಯೇಕ ಬೇಡಿಕೆಗಳೊಂದಿಗೆ ಹೋರಾಟಕ್ಕಿಳಿದಿದ್ದಾರೆ. ಅದ್ಯಾಕೆ ಹೀಗೆ? ಏನಾಗಿದೆ ಅಂತೀರಾ? ಈ ಕುರಿತ ವರದಿ ಇಲ್ಲಿದೆ. 

Tap to resize

Latest Videos

undefined

ಅವರೆಲ್ಲಾ ಕಾರು ಚಾಲಕರು, ತಮ್ಮ ತಮ್ಮ ಕಾರುಗಳೊಂದಿಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಮುಂದಾದರು, ಒಂದೆಡೆ ವೈಟ್​ ಬೋರ್ಡ್‌ ಚಾಲಕರು ತಮ್ಮ ಬೇಡಿಕೆಯೊಂದಿಗೆ ಹೋರಾಟಕ್ಕೆ ಮುಂದಾಗಿದ್ದರೆ, ಮತ್ತೊಂದೆಡೆ ತಮ್ಮ ಬೇಡಿಕೆ ಈಡೇರಿಸುವಂತೆ ಘೋಷಣೆ ಹಾಕಿ ಹಕ್ಕೊತ್ತಾಯ ಮಂಡಿಸಲು ಮುಂದಾದ ಯೆಲ್ಲೋ ಬೋರ್ಡ್‌ ಚಾಲಕರು. ಅಂದಹಾಗೆ ಇಂತಹವೊಂದು ಸಂದರ್ಭಕ್ಕೆ ಸಾಕ್ಷಿಯಾಗಿದ್ದು ಉತ್ತರ ಕರ್ನಾಟಕದ ಮುಳುಗಡೆ ನಗರಿ ಬಾಗಲಕೋಟೆ.  ಹೌದು! ತಮ್ಮ ತಮ್ಮ ವಿಭಿನ್ನ ಬೇಡಿಕೆಗಳ ಈಡೇರಿಕೆಗಾಗಿ ಕಾರು ಚಾಲಕರು ಬೀದಿಗಿಳಿದು ಹೋರಾಟಕ್ಕೆ ಮುಂದಾಗಿದ್ದರು. 

ಹುನಗುಂದ ವಿಧಾನಸಭಾ ಮತಕ್ಷೇತ್ರದಲ್ಲಿ ಮಾಜಿ ಸಿಎಂ ಮಕ್ಕಳ ಭರ್ಜರಿ ಹವಾ..!

ಒಂದೇ ಟ್ಯಾಕ್ಸ್​​ನಲ್ಲಿ 5 ರಾಜ್ಯಗಳ ಅನುಮತಿಗಾಗಿ ವೈಟ್​ ಬೋರ್ಡ್‌ ಚಾಲಕರ ಹೋರಾಟ: ವೈಟ್​ ಬೋರ್ಡ್‌ ಹೊಂದಿರೋ ಬಾಗಲಕೋಟೆ ಟ್ಯಾಕ್ಸಿ ಚಾಲಕರ ಹಾಗೂ ಮಾಲೀಕರ ಕ್ಷೇಮಾಭಿವೃದ್ದಿ ಸಂಘದಿಂದ ಪ್ರತಿಭಟನಾ ಹೋರಾಟವನ್ನು ನಡೆಸಲಾಯಿತು. ಹಳೆ ಬಾಗಲಕೋಟೆ ಪಟ್ಟಣದಿಂದ ಆರಂಭವಾದ ಕಾರುಗಳೊಂದಿಗೆ ನಡೆದ ಪ್ರತಿಭಟನಾ ಹೋರಾಟದ ಮೆರವಣಿಗೆ ನವನಗರದ ಜಿಲ್ಲಾಡಳಿತ ಭವನದವರೆಗೆ ಸಂಚರಿಸಿತು. ಈ ಪ್ರತಿಭಟನೆಯಲ್ಲಿ ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ವಿಜಯಪುರ, ಕೊಪ್ಪಳ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಚಾಲಕರು ಆಗಮಿಸಿದ್ದರು. ಮುಖ್ಯವಾಗಿ ವೈಟ್ ಬೋರ್ಡ್‌ ಹೊಂದಿರುವವರಿಗೆ ಒಂದೇ ಟ್ಯಾಕ್ಸ್​ನಲ್ಲಿ 5 ರಾಜ್ಯದ ಅನುಮತಿ ಕೊಡಬೇಕು ಅನ್ನೋದು ಇವರ ಮುಖ್ಯ ಬೇಡಿಕೆಯಾಗಿತ್ತು. 

ಪಕ್ಕದ ರಾಜ್ಯಗಳಾದ ಆಂದ್ರಪ್ರದೇಶ, ಮಹಾರಾಷ್ಟ್ರ, ಗೋವಾ, ತೆಲಂಗಾಣ, ಕೇರಳ ರಾಜ್ಯಗಳು ನಮ್ಮ ಗಡಿಯಿಂದ 40 ರಿಂದ 50 ಕಿಮೀಯಲ್ಲಿದ್ದು, ಕಡಿಮೆ ಬಾಡಿಗೆ ಬರೋದ್ರಿಂದ ಆಯಾ ರಾಜ್ಯದ ತೆರಿಗೆಗಳನ್ನು ಕಟ್ಟಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ವೈಟ್​ ಬೋರ್ಡ್‌ ವಾಹನ ಓಡಿಸುತ್ತಿರುವುದಾಗಿ ಹೇಳಿದ ಚಾಲಕರು,  5 ರಾಜ್ಯದ ಒಂದೇ ತೆರಿಗೆ ಮಾಡಿಕೊಟ್ಟಲ್ಲಿ ನಾವು ಸಹ ಯೆಲ್ಲೋ ಬೋರ್ಡ್‌ ಆಗುತ್ತೇವೆ. ಹೀಗಾಗಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನುಕೂಲ ಕಲ್ಪಿಸಬೇಕು. ಒಂದೇ ಟ್ಯಾಕ್ಸ್​ನಲ್ಲಿ ಅನುಮತಿ ನೀಡುವವರೆಗೂ ವೈಟ್​ ಬೋರ್ಡ್‌ದಲ್ಲೇ ಸಂಚರಿಸಲು ಅನುಮತಿ ನೀಡಬೇಕು ಎಂದು ಜಿಲ್ಲಾಡಳಿತ ಭವನದಲ್ಲಿ ಅಪರ ಜಿಲ್ಲಾಧಿಕಾರಿ ಮಹಾದೇವ ಮುರುಗಿ ಅವರಿಗೆ ಮನವ ಸಲ್ಲಿಸುವ ಮೂಲಕ ಬಾಗಲಕೋಟೆ ಟ್ಯಾಕ್ಸಿ ಚಾಲಕರ ಹಾಗೂ ಮಾಲಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶಿವು ಪವಾರ್​ ಒತ್ತಾಯಿಸಿದರು. 

ವೈಟ್​ ಬೋರ್ಡ್‌ ಚಾಲಕರ ಬೆನ್ನಲ್ಲೆ ಯೆಲ್ಲೋ ಬೋರ್ಡ್‌ ಚಾಲಕರ ಪ್ರತಿಭಟನಾ ಹೋರಾಟ: ಇದು ವೈಟ್​ ಬೋರ್ಡ್‌ನವರ ಪ್ರತಿಭಟನಾ ಹೋರಾಟ ನಡೆದ ಬೆನ್ನಲ್ಲೆ ಯೆಲ್ಲೋ ಬೋರ್ಡ್‌ ಚಾಲಕರ ಸಂಘದಿಂದಲೂ ಸಹ ಪ್ರತಿಭಟನಾ ಮೆರವಣಿಗೆಯನ್ನ ನಡೆಸಲಾಯಿತು. ನವನಗರದ ಬಸ್​ ನಿಲ್ದಾಣ ವೃತ್ತದಿಂದ ಜಿಲ್ಲಾಡಳಿತ ಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ಯೆಲ್ಲೋ ಬೋರ್ಡ್‌ ಚಾಲಕರು, ಚಾಲಕ ವೃತ್ತಿ ಮಾಡುವವರು ತೆರಿಗೆ ಕಟ್ಟಿ ನಾವೆಲ್ಲಾ ಬಾಡಿಗೆ ಮೂಲಕ ಕಾರು ಚಲಾಯಿಸುತ್ತಿದ್ದೇವೆ, ಆದರೆ ವೈಟ್ ಬೋರ್ಡ್‌ ಮೂಲಕ ಕೆಲವು ಚಾಲಕರು ಎಲ್ಲೆಡೆ ಬಾಡಿಗೆ ಪಡೆದು ಓಡಾಡುತ್ತಿರುವವರಿಂದ ರಾಜ್ಯದ ಬೊಕ್ಕಸಕ್ಕೆ ತೆರಿಗೆ ಸಿಗದೇ ನಷ್ಟ ಅನುಭವಿಸುವಂತಾಗುತ್ತೇ, ಹೀಗಾಗಿ ತೆರಿಗೆ ಕಟ್ಟಿ ಯೆಲ್ಲೋ ಬೋರ್ಡ್‌ ವಾಹನ ಓಡಿಸೋ ನಮಗೆ ತೊಂದರೆಯಾಗಿದೆ, ಆದರೆ ಅವರೂ  ಸಹ ತೆರಿಗೆ ಕಟ್ಟಿ ಯೆಲ್ಲೋ ಬೋರ್ಡ್‌ ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ ನಮ್ಮ ಅಭ್ಯಂತರವಿಲ್ಲ. ಆದರೆ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಟ್ಯಾಕ್ಸಿ ಡ್ರೈವರ್ಸ ಆರ್ಗನೈಜೇಷನ್​ ಉಪಾಧ್ಯಕ್ಷ ಚಂದನಬಾಬು ಹೇಳಿದರು. 
 
ಬಾಗಲಕೋಟೆ: ಗುಳೇದಗುಡ್ಡ ಖಣಕ್ಕೆ ಬಂತು ಹೈಟೆಕ್ ಟಚ್: ನೇಕಾರರಿಗೆ ಸಿಕ್ತು ಹೊಸ ಐಡಿಯಾ

ದಕ್ಷಿಣ ಕನ್ನಡ ಜಿಲ್ಲೆಯಲ್ಲಾಗುವ ಕೆಲ ಸಂಘಟನೆಗಳ ಉಪಟಳ ತಡೆಗೆ ಒತ್ತಾಯ: ಇನ್ನು ಉಭಯ ಬಣದ ಚಾಲಕರ ಪ್ರತಿಭಟನೆಯ ಮಧ್ಯೆ ವೈಟ್​ ಬೋರ್ಡ್‌ ಹೊಂದಿರುವ ಚಾಲಕರು ತಮ್ಮ ವಾಹನ ತೆಗೆದುಕೊಂಡು ದಕ್ಷಿಣ ಕನ್ನಡ ಜಿಲ್ಲೆಗೆ ಹೋದ ಸಂದರ್ಭದಲ್ಲಿಕೆಲವು ಸಂಘಟನೆಗಳ ಉಪಟಳದಿಂದ ತೊಂದರೆಯಾಗಿದೆ, ಅದರಲ್ಲೂ ತೀರ್ಥ ಸ್ಥಳಕ್ಕೆ ಹೋದಾಗ ತೊಂದರೆ ಮಾಡುವುದು ಅಲ್ಲದೆ ಸಾಲದ್ದಕ್ಕೆ ಕೆಲವೆಡೆ ಹಲ್ಲೆ ಸಹ ಆಗಿವೆ. ಇದ್ರಿಂದ ತೊಂದರೆಯಾಗುತ್ತಿದ್ದು, ಕೂಡಲೇ ಈ ಸಂಬಂಧ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ವೈಟ್​ ಬೋರ್ಡ್‌ ವಾಹನಗಳ ಚಾಲಕರು ಮನವಿ ಮಾಡಿದರು. ಒಟ್ಟಿನಲ್ಲಿ ಬಾಗಲಕೋಟೆಯಲ್ಲಿ ಯೆಲ್ಲೋ ಬೋರ್ಡ್‌ ವರ್ಸಸ್​ ವೈಟ್ ಬೋರ್ಡ್‌ ಕಾರು ಚಾಲಕರ ಮಧ್ಯೆ ದಂಗಲ್​ ಶುರುವಾಗಿದ್ದು, ಇದಕ್ಕೆ ಇವರ ಸಮಸ್ಯೆಗಳನ್ನ ಆಲಿಸಿರೋ ಅಧಿಕಾರಿಗಳು ಯಾವ ರೀತಿ ಪರಿಹಾರವನ್ನ ಹುಡುಕ್ತಾರೆ ಅಂತ ಕಾದು ನೋಡಬೇಕಿದೆ.

click me!