ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಪ್ರಮುಖ ನದಿಗಳು ಮೈದುಂಬಿಕೊಂಡಿವೆ. ಹಲವೆಡೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ, ಕುದುರೆಮುಖ ಸುತ್ತ ಮುತ್ತ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದೆ.
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಮುಂಗಾರು ಅಬ್ಬರಿಸುತ್ತಿದ್ದು, ಪ್ರಮುಖ ನದಿಗಳು ಮೈದುಂಬಿಕೊಂಡಿವೆ. ಹಲವೆಡೆ ಜನ ಜೀವನ ಅಸ್ತವ್ಯಸ್ಥಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಕಳಸ, ಕುದುರೆಮುಖ ಸುತ್ತ ಮುತ್ತ ಎಡೆಬಿಡದೆ ಮಳೆ ಸುರಿಯುತ್ತಿರುವ ಪರಿಣಾಮ ಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯಲಾರಂಭಿಸಿದ್ದು, ಕಳಸ-ಹೊರನಾಡು ನಡುವಿನ ಹೆಬ್ಬಾಳ ಸೇತುವೆ ಈ ಭಾರಿ ಮಳೆಗಾಲದಲ್ಲಿ ಮೊದಲ ಸಲ ಮುಳುಗಡೆಯಾಗಿದೆ.
ರಾತ್ರಿಯಿಡೀ ಮಳೆ ಸುರಿದಿದ್ದರಿಂದ ಬೆಳಗಾಗುವ ವೇಳೆಗೆ ಸೇತುವೆ (Bridge) ಮೇಲೆ ನೀರು ಹರಿಯಲಾರಂಭಿಸಿತ್ತು. ಸುತ್ತಲ ಗ್ರಾಮದ ಜನರು ಈ ದೃಶ್ಯವನ್ನು ಸೆರೆಹಿಡಿಯಲು ಮುಗಿಬಿದ್ದಿದ್ದರು. ಬೆಳಗಿನಿಂದ ಸಂಜೆವರೆಗೆ ಹಲವು ಬಾರಿ ಸೇತುವೆ ಮೇಲೆ ನೀರು ಏರಿಳಿತ ಕಾಣುತ್ತಲೇ ಇದ್ದ ಕಾರಣ ಎರಡು ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಕಡಿತಗೊಂಡಿತು. ಹಲವು ಪ್ರವಾಸಿಗರು ಸೇತುವೆ ಮೇಲೆ ಹರಿಯುವ ನೀರಿನ ಅಪರೂಪದ ದೃಶ್ಯಕಂಡು ಪುಳಕಿತರಾದರೆ, ಸ್ಥಳೀಯರು ಸೇತುವೆ ದಾಟಲಾಗದೆ ತೊಂದರೆ ಅನುಭವಿಸಿದರು.
ಚಿಕ್ಕಮಗಳೂರು: ಪೋಕ್ಸೋ ಕೈದಿಗಳಿಂದಲೇ ತುಂಬಿ ತುಳುಕುತ್ತಿರುವ ಕಾಫಿನಾಡ ಜೈಲು..!
ಮೂಡಿಗೆರೆ (Mudigere) ತಾಲೂಕಿನಾಂದ್ಯಂತ ಮಳೆ ಸುರಿಯುತ್ತಿರುವುದರ ಜೊತೆಗೆ ಹಾಸನ (Hasana) ಜಿಲ್ಲೆ ಸಕಲೇಶಪುರ (Sakaleshpura) ಭಾಗದಲ್ಲೂ ವರುಣ ಆರ್ಭಟಿಸುತ್ತಿರುವುದರಿಂದ ಹೇಮಾವತಿ ನದಿ (River Hemavati) ನೀರಿನ ಮಟ್ಟವೂ ಹೆಚ್ಚಾಗಿದೆ. ಶೃಂಗೇರಿ (Shringeri) ಹಾಗೂ ಕೊಪ್ಪ (Koppa) ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿರುವುದರಿಂದ ತುಂಗಾ ನದಿ ಮೈದುಂಬಿ ಹರಿಯುತ್ತಿದ್ದು, ಪ್ರವಾಹದ (Flood) ಭೀತಿ ಎದುರಾಗಿದೆ. ಅಲ್ಲದೆ ತುಂಗಾ ನದಿಯ ಪ್ರವಾಹದಿಂದ ಗಾಂಧಿ ಮೈದಾನ (Gandhi Maidana) , ಕಪ್ಪೆ ಶಂಕರ ದೇವಸ್ಥಾನ (Kappe Shankara) ಕೆಲ ಗಂಟೆಗಳ ಕಾಲ ಮುಳಗಡೆಯಾಗಿತ್ತು. ಮಳೆ ಮುಂದುವರಿದಲ್ಲಿ ಇನ್ನಷ್ಟು ಅನಾಹುತಗಳು ಸಂಭವಿಸುವ ಸಾಧ್ಯತೆಗಳು ಇವೆ. ಬಯಲು ಸೀಮೆ ತಾಲೂಕಿನ ಕೆಲವೆಡೆ ತುಂತುರುಮಳೆ ಸುರಿದಿದೆ.
ವಿದ್ಯಾರ್ಥಿನಿ ನೀರು ಪಾಲು ?
ಶಾಲೆ ಮುಗಿಸಿ ಮನೆಗೆ ತೆರಳುತ್ತಿದ್ದ 6 ವರ್ಷದ ಹೆಣ್ಣು ಮಗುವೊಂದು ಹಳ್ಳಕ್ಕೆ ಬಿದ್ದು ಕೊಚ್ಚಿ ಹೋದ ಘಟನೆ ತಾಲ್ಲೂಕಿನ ತೊಗರಿಹಂಕಲ್ ಗ್ರಾಮದಲ್ಲಿ ನಡೆದಿದೆ. ಹೊಸಪೇಟೆ ಕಿರಿಯ ಪ್ರಾಥಮಿಕ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿನಿ ಸುಪ್ರಿತಾ(6) ನೀರಿನ ಸೆಳೆತಕ್ಕಿ ಸಿಕ್ಕಿ ನಾಪತ್ತೆಯಾಗಿರುವ ಬಾಲಕಿ.ತನ್ನ ಅಣ್ಣನ ಜೊತೆ ಶಾಲೆಯಿಂದ ಮನೆಗೆ ಬರುವಾಗ ಕೈನಲ್ಲಿದ್ದ ಛತ್ರಿ ಜಾರಿ ಹಳ್ಳಕ್ಕೆ ಬಿದ್ದಿದ್ದು, ಅದನ್ನು ಎತ್ತಿಕೊಳ್ಳಲು ಮುಂದಾದಾಗ ನೀರಿನಲ್ಲಿ ಕೊಚ್ಚಿಹೋಗಿರುವುದಾಗಿ ತಿಳಿದು ಬಂದಿದ್ದು, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು ಮಗುವಿನ ಪತ್ತೆ ಕಾರ್ಯದಲ್ಲಿ ತೊಡಗಿದ್ದಾರೆ.
ಚಿಕ್ಕಮಗಳೂರಲ್ಲಿ ಭಾರೀ ಮಳೆ: ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ಭದ್ರಾ ನದಿ