ಮಂಗಳೂರಿನಲ್ಲಿ ಗುರುವಾರ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಂಗಳವಾರ ತಡರಾತ್ರಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದರೂ ಬುಧವಾರ ಬೆಳಗ್ಗಿನಿಂದ ಸಂಜೆವರೆಗೆ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ತುಂತುರು ಮಳೆಯಾಗಿತ್ತು. ಅಲ್ಲದೆ ಮೋಡ ಕವಿದ ವಾತಾವರಣವೂ ಇತ್ತು. ಸುಬ್ರಹ್ಮಣ್ಯ ಸೇರಿದಂತೆ ಸಮೀಪದ ಪರಿಸರದಲ್ಲಿಯೂ ಬುಧವಾರ ಸಂಜೆಯ ವೇಳೆ ದಿಢೀರ್ ಕೆಲ ಕಾಲ ಮಳೆ ಸುರಿಯಿತು.
ಮಂಗಳೂರು(ಸೆ.26): ಕಳೆದೊಂದು ವಾರದಿಂದ ಮಳೆಯಿಲ್ಲದೆ ಬಿಸಿಲು ಕಾಣಿಸಿಕೊಂಡಿದ್ದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಯ ಲಕ್ಷಣಗಳು ಗೋಚರಿಸುತ್ತಿದ್ದು, ಬುಧವಾರ ವಿವಿಧೆಡೆ ಅಲ್ಪ ಮಳೆಯಾಗಿದೆ. ಗುರುವಾರ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ಮಂಗಳವಾರ ತಡರಾತ್ರಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದರೂ ಬುಧವಾರ ಬೆಳಗ್ಗಿನಿಂದ ಸಂಜೆವರೆಗೆ ಬಿಸಿಲಿನ ವಾತಾವರಣವಿತ್ತು. ಸಂಜೆ ವೇಳೆಗೆ ತುಂತುರು ಮಳೆಯಾಗಿತ್ತು. ಅಲ್ಲದೆ ಮೋಡ ಕವಿದ ವಾತಾವರಣವೂ ಇತ್ತು.
ಮಂಗಳೂರು: ಹೊಂಡ ತುಂಬಿದ ರಸ್ತೆಯಲ್ಲಿ ಮೂನ್‌ವಾಕ್..!
ಕುಕ್ಕೆ: ಪರಿಸರದಲ್ಲಿ ದಿಢೀರ್ ಮಳೆ
ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಪರಿಸರದಲ್ಲಿ ಬುಧವಾರ ಸಂಜೆಯ ವೇಳೆ ದಿಢೀರ್ ಕೆಲ ಕಾಲ ಮಳೆ ಸುರಿಯಿತು. ಘಟ್ಟಪ್ರದೇಶ ಹಾಗೂ ಸುಬ್ರಹ್ಮಣ್ಯ ಪರಿಸರದಲ್ಲಿ ಸುರಿದ ಮಳೆಯಿಂದಾಗಿ ದರ್ಪಣ ತೀರ್ಥ ನದಿ ಮತ್ತೆ ತುಂಬಿ ಹರಿಯಿತು.
ಕೇವಲ ಒಂದು ಗಂಟೆ ಮಳೆ ಸುರಿದಿದ್ದು, ಬಳಿಕ ಮಳೆ ಕಡಿಮೆಯಾದಂತೆ ನದಿಯ ನೀರು ಕಡಿಮೆಯಾಯಿತು. ಆದಿಸುಬ್ರಹ್ಮಣ್ಯ ಪರಿಸರದಲ್ಲಿ ಮಳೆ ನೀರು ತೆರಳಲು ಸಮರ್ಪಕವಾದ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಇಲ್ಲಿನ ರಸ್ತೆ ಮಳೆ ನೀರಿನಿಂದ ತುಂಬಿತ್ತು. ಇದರಿಂದ ಭಕ್ತರು ಆದಿ ದೇವಳಕ್ಕೆ ತೆರಳಲು ತೊಂದರೆ ಅನುಭವಿಸಬೇಕಾಯಿತು.
ದರಸಾ ಪ್ರಯುಕ್ತ ಬೆಂಗಳೂರು- ಮಂಗಳೂರು ವಿಶೇಷ ರೈಲು
ಬುಧವಾರ ಮುಂಜಾನೆಯಿಂದ ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಮಧ್ಯಾಹ್ನದ ಬಳಿಕ ಮೋಡಮಯ ವಾತಾವರಣ ಕಂಡು ಬಂದು ಸಂಜೆ ವೇಳೆಗೆ ಬಾರೀ ಮಳೆ ಸುರಿಯಿತು. ಕುಕ್ಕೆ ಸೇರಿದಂತೆ ಇಲ್ಲಿನ ಪರಿಸರದ ಪಂಜ, ನಿಂತಿಕಲ್, ಬಳ್ಪ, ಹರಿಹರ, ಕೊಲ್ಲಮೊಗ್ರು, ಕೈಕಂಬ, ಬಿಳಿನೆಲೆ ಭಾಗದಲ್ಲಿ ಮಳೆಯಾಗಿತ್ತು.
ಮಂಗಳೂರು: ದಿಡುಪೆ, ಚಾರ್ಮಾಡಿಯಲ್ಲಿ ಮತ್ತೆ ನೆರೆ ಭೀತಿ