ನಿರ್ಮಾಣವಾಗದ ಚರಂಡಿ ನೀರು ಶುದ್ಧೀಕರಣ ಘಟಕ, ಯಾದಗಿರಿ ಜಿಲ್ಲಾಡಳಿತ ಭವನದ ಕೂಗಳತೆಯಲ್ಲೇ ಚರಂಡಿ ನೀರು ಭೀಮೆಗೆ ಸೇರ್ಪಡೆ
ಯಾದಗಿರಿ(ಆ.28): ಯಾದಗಿರಿಗರು ಚರಂಡಿ ನೀರನ್ನು ಕುಡಿಯುತ್ತಿದ್ದಾರೆಯೇ ? ಇಡೀ ನಗರದ ವಿವಿಧೆಡೆಯಿಂದ ಹರಿದುಬಂದ ಚರಂಡಿ ನೀರು ಹಳ್ಳದ ಮೂಲಕ ಭೀಮಾನದಿಯೊಡಲ ಸೇರಿ, ಅಲ್ಲಿಂದ ನೀರು ಸರಬರಾಜು ಮುಖಾಂತರ ಬರುತ್ತಿರುವ ಕಲುಷಿತ ನೀರನ್ನೇ ಇಲ್ಲಿನವರು ಕುಡಿಯುತ್ತಿದ್ದಾರೆಯೇ?. ಹೌದು, ಇಂತಹದೊಂದು ಆತಂಕ ಈಗ ಎದುರಾಗಿದೆ. ಯಾದಗಿರಿ ನಗರದ ವಿವಿಧ ಬಡಾವಣೆಗಳ ಚರಂಡಿಗಳಿಂದ ಹರಿದು ಬಂದ ಚರಂಡಿ ನೀರು ಇಲ್ಲಿನ ಹಳ್ಳದ ಮೂಲಕ ನೇರವಾಗಿ ಭೀಮಾನದಿಗೆ ಸೇರುತ್ತದೆ. ಶುದ್ಧೀಕರಣ ಘಟಕ ಇಲ್ಲದ ಕಾರಣ, ಕಲುಷಿತಗೊಂಡಿರುವ ಅದೇ ನೀರನ್ನು ಇಲ್ಲಿನ ಜನರಿಗೆ ನಗರಸಭೆ ಪೂರೈಸುತ್ತದೆ.
ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಚರಂಡಿ ನೀರು ನೇರವಾಗಿ ನದಿಗೆ ಬಿಡಬಾರದು. ಸುಪ್ರೀಂಕೋರ್ಟ್ ಆದೇಶವನ್ನೂ ಸಹ ಇಲ್ಲಿ ಉಲ್ಲಂಘನೆ ಮಾಡಲಾಗಿದೆ. ಜನರ ಆರೋಗ್ಯ ಹಾಗೂ ಜಲಚರಗಳ ಮೇಲೆ ಇದು ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಕಾಮಾಲೆ ಹಾಗೂ ವಾಂತಿಬೇಧಿಯಂತಹ ರೋಗಗಳಿಗೆ ಇದು ಆಹ್ವಾನಿಸಿದಂತಾಗಿದೆ. ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಾಹಿಲ್ ಕುನ್ನಿಭಾವಿ ಅವರೂ ಸಹ ಖುದ್ದು ಭೇಟಿ ನೀಡಿ ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
undefined
ಯಾದಗಿರಿ: ತುಂಬಿ ಹರಿಯುತ್ತಿರುವ ಹಳ್ಳದಲ್ಲಿ ಮಗುಚಿದ ಲಾರಿ: ಚಾಲಕನ ರಕ್ಷಣೆ
ನಗರದ ಹೊರಭಾಗದ ಡಾನ್ ಬಾಸ್ಕೊ ಶಾಲೆಯ ಸಮೀಪದ ಹಳ್ಳಕ್ಕೆ ಮುಖ್ಯ ಚರಂಡಿ ನೀರು ಹರಿ ಬಿಡಲಾಗುತ್ತಿದೆ. ಹಳ್ಳಕ್ಕೆ ಹರಿಬಿಡಲಾಗಿದ್ದ ಚರಂಡಿ ನೀರು ನೇರವಾಗಿ ಭೀಮಾನದಿಗೆ ಸೇರ್ಪಡೆಯಾಗುತ್ತದೆ. ಚರಂಡಿ ನೀರು ಶುದ್ಧೀಕರಣ ಮಾಡಿ ನಂತರ ನದಿಗೆ ನೀರು ಹರಿಸಬೇಕು. ಆದರೆ, ಚರಂಡಿ ನೀರು ಶುದ್ಧೀಕರಣ ಘಟಕ ಇಲ್ಲಿಲ್ಲವೇ ಇಲ್ಲ. ಚರಂಡಿ ನೀರು ಶುದ್ಧೀಕರಣ ಮಾಡಿ ಹರಿಸುವ ಕೆಲಸ ಮಾಡಬೇಕಿದೆ. ನಗರಸಭೆಯು ಮುಖ್ಯ ಚರಂಡಿ ನಿರ್ಮಾಣ ಮಾಡಿ ನಗರದ ಕಲುಷಿತ ನೀರು ನದಿಗೆ ಹರಿಸಲಾಗುತ್ತಿದೆ.
ಸುರಪುರ ಶಾಸಕ ರಾಜುಗೌಡ ಅವರು, ಯಾದಗಿರಿ ಜಿಲ್ಲೆಯವರೇ ಆಗಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷರಾಗಿದ್ದಾರೆ. ಈ ಬಗ್ಗೆ ಅವರು ಗಮನ ಹರಿಸಬೇಕಾಗಿದೆ. ಭೀಮಾನದಿ ನೀರು ಸೇವನೆ ಮಾಡಲು ಬಹುತೇಕ ಜನರು ಹಿಂದೇಟು ಹಾಕುತ್ತಿದ್ದಾರೆ.ಭೀಮಾನದಿಗೆ ಕಲುಷಿತ ನೀರು ಸೇರ್ಪಡೆಯಾಗುತ್ತಿರುವ ಹಿನ್ನೆಲೆ ,ನಗರದ ನಿವಾಸಿಗಳು ಭೀಮಾ ನದಿ ನೀರು ಸೇವನೆ ಮಾಡಿದರೆ ಕಾಯಿಲೆ ಬರುತ್ತದೆಂದು ಆತಂಕಗೊಂಡು ಜನರು ಮಾರುಕಟ್ಟೆಯಲ್ಲಿ ಶುದ್ಧ ನೀರು ಖರೀದಿ ಮಾಡಿ ನೀರು ಸೇವನೆ ಮಾಡುತ್ತಿದ್ದಾರೆ.
ಡಾನ್ ಬಾಸ್ಕೋ ಶಾಲೆಯ ಸಮೀಪದ ಹಳ್ಳಕ್ಕೆ ನಗರದ ಮುಖ್ಯ ಚರಂಡಿ ನೀರು ಸೇರ್ಪಡೆಯಾಗುತ್ತದೆ. ಈ ನೀರು ಭೀಮಾನದಿಗೆ ಸೇರ್ಪಡೆಯಾಗುವ ಬಗ್ಗೆ ಜನಪ್ರತಿನಿ ಹಾಗೂ ಅಕಾರಿಗಳಿಗೂ ಗೊತ್ತಿದ್ದರು ಮೌನ ವಹಿಸಿದ್ದಾರೆ.ಈ ರಸ್ತೆ ಮಾರ್ಗವಾಗಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಂಚಾರ ಮಾಡುತ್ತಾರೆ ಆದರೆ, ಎಲ್ಲವೂ ಗೊತ್ತಿದ್ದರು ಮೌನವಹಿಸಿದಂತಿದೆ.
ಸುರಪುರ: ವರಾಹಕ್ಕೆ ಹಾಲುಣಿಸಿದ ಗೋಮಾತೆ..!
ನಗರದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡಬೇಕು. ನಗರಸಭೆ ಪೂರೈಕೆ ಮಾಡುವ ನೀರು ಕಲುಷಿತವಾಗಿದೆ.ಈ ನೀರು ಸೇವನೆ ಮಾಡಿದರೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ ಅಂತಾರೆ ಯಾದಗಿರಿ ನಾಗರಿಕರು ನಿಂಗಪ್ಪ ಜಾಲಗಾರ.
ನೀರು ಶುದ್ಧೀಕರಣ ನಿರ್ಮಾಣವಾಗಿಲ್ಲ. ಇದರ ಸ್ಥಾಪನೆಗೆ ನಾವು ಮನವಿ ಮಾಡಿದ್ದೇವೆ. ಕೆಕೆಆರ್ಡಿಬಿ ಹಾಗೂ ಮಂಡಳಿ ಅಧ್ಯಕ್ಷ ರಾಜೂಗೌಡರ ಮೂಲಕ ಘಟಕ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುವುದು ಅಂತ ಯಾದಗಿರಿ ನಗರಸಭೆ ಅಧ್ಯಕ್ಷ ಸುರೇಶ ಅಂಬಿಗೇರ್ ತಿಳಿಸಿದ್ದಾರೆ.