ಮೆಡಿಕಲ್ ಶಾಪ್‌ನ ಮಾತ್ರೆಯಲ್ಲಿ ಹುಳು ಪತ್ತೆ, ಮಾತ್ರೆ ನೋಡಿ ಶಾಕ್ ಆದ ಎರಡು ತಿಂಗಳ ಗರ್ಭಿಣಿ ಅಂಜಲಿ
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್
ಯಾದಗಿರಿ(ಸೆ.30): ಕಲಬುರಗಿಯ ನಗರದ ಸಂಜೀವಿನಿ ಎಂಬ ಖಾಸಗಿ ಆಸ್ಪತ್ರೆಯ ಮೆಡಿಕಲ್ ಶಾಪ್‌ನಲ್ಲಿ ತಂದ ಮಾತ್ರೆಯಲ್ಲಿ ಹುಳು ಪತ್ತೆಯಾಗಿರುವ ಘಟನೆ ನಡೆದಿದೆ. ಎರಡು ತಿಂಗಳ ಗರ್ಭಿಣಿಯಾದ ಅಂಜಲಿ ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮೂಡಬೂಳ ಎಂಬ ಗ್ರಾಮದವರಾಗಿದ್ದಾರೆ. ಇದೇ ಸೆ.20 ರಂದು ಅಂಜಲಿ ಎಂಬ ಮಹಿಳೆಯು ಸಂಜೀವಿನಿ ಪ್ರತಿ ತಿಂಗಳು ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದ್ರೆ ಈಗ ಜಿಂಕೊವಿಟ್ ಎಂಬ 15 ಮಾತ್ರೆಗಳನ್ನು ನೀಡಿದ್ದರು, ಅದರಲ್ಲಿ ಈಗಾಗಲೇ 5 ಮಾತ್ರೆಗಳನ್ನು ಸೇವಿಸಿದ್ದಳು, 6ನೇ ಮಾತ್ರೆಯನ್ನು ಸೇವಿಸುವಾಗ ಹುಳು ಪತ್ತೆಯಾಗಿದ್ದು, ಅಂಜಲಿಗೆ ಅಚ್ಚರಿ ಎದುರಾಗಿದೆ.
ಆರೆಂಜ್ ಬಣ್ಣದ ಮಾತ್ರೆಯಲ್ಲಿ ಕಪ್ಪು ಬಣ್ಣದ ಸಣ್ಣ-ಸಣ್ಣ ಹುಳುಗಳು ಪತ್ತೆ
ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಮೂಡಬೂಳ ಗ್ರಾಮದ ಅಂಜಲಿ ಎಂಬ ಎರಡು ತಿಂಗಳ ಗರ್ಭಿಣಿಯಾಗಿದ್ದು, ಪ್ರತಿ ತಿಂಗಳ ಚೆಕ್ ಅಪ್ ಮಾಡಿಸಿಕೊಳ್ಳಲು ಕಲಬುರಗಿಯ ಸಂಜೀವಿನಿ ಎಂಬ ಖಾಸಗಿ ಆಸ್ಪತ್ರೆ ಹೋಗ್ತಾ ಇದ್ದಳು, ಎಲ್ಲಾ ರೀತಿಯ ಮಾತ್ರೆಗಳು ಮತ್ತು ಔಷಧಿಗಳನ್ನು ಇದೇ ಆಸ್ಪತ್ರೆಯ ಮೆಡಿಕಲ್ ಶಾಪ್ ನಲ್ಲಿ ತೆಗೆದುಕೊಂಡು ಆ ಮಾತ್ರೆಗಳನ್ನು ಸೇವಿಸುತ್ತಿದ್ದಳು. ಆದ್ರೆ ಈಗ ಅದೇ ಮಾತ್ರೆ ಅಂಜಲಿ ಎಂಬ ಗರ್ಭಿಣಿಗೆ ಅಚ್ಚರಿ ಉಂಟು ಮಾಡಿದೆ. ಯಾಕಂದ್ರೆ ಅದೇ ಮೆಡಕಲ್ ಶಾಪ್ ನಿಂದ ತಂದ ಮಾತ್ರೆಯಲ್ಲಿ ಹುಳು ಪತ್ತೆಯಾಗಿದೆ. ಅದು ಆರೆಂಜ್ ಬಣ್ಣದ ಮಾತ್ರೆಯಲ್ಲಿ ಕಪ್ಪು ಬಣ್ಣದ ಸಣ್ಣ ಸಣ್ಣ ಹುಳುಗಳು ಪತ್ತೆಯಾಗಿವೆ.
ಸಿದ್ದರಾಮಯ್ಯ ಸ್ಥಿತಿ ಬೆಕ್ಕಿನಂತಾಗಿದೆ: ಅರುಣ್ ಸಿಂಗ್
ಇದು ಯಾರ ಎಡವಟ್ಟು..? ಗರ್ಭಿಣಿಯ ಜೀವನದ ಜೊತೆ ಆಸ್ಪತ್ರೆಯವರ ಚೆಲ್ಲಾಟ
ಖಾಸಗಿ ಆಸ್ಪತ್ರೆಯವರ ಕಳ್ಳಾಟ ಈಗ ಬಯಲಾದಂತೆ ಕಾಣ್ತಿದೆ. ಯಾಕಂದ್ರೆ ಕಲಬುರಗಿಯ ಸಂಜೀವಿನಿ ಆಸ್ಪತ್ರೆ ಮೆಡಿಕಲ್ ಶಾಪ್ ನವ್ರ ಎಡವಟ್ಟು ಇದಕ್ಕೆ ಕಾರಣವಾಗಿದೆ. ಕೇಸರಿ ಬಣ್ಣದ ಜಿಂಕೊವಿಟ್ ಎಂಬ ಮಾತ್ರೆಯಲ್ಲಿ ಹುಳು ಪತ್ತೆಗೆ ಕಾರಣವೇನು..? ಆ ಮಾತ್ರೆಯನ್ನು ಸೇವಿಸಿದ್ರೆ ಆ ಎರಡು ತಿಂಗಳ ಗರ್ಭಿಣಿ ಅಂಜಲಿ ಜೀವಕ್ಕೆ ಕುತ್ತು ಬಂದ್ರೆ ಯಾರು ಹೋಣೆಯಾಗ್ತಿದ್ರು, ಈಗ ಇಂತಹ ಆಸ್ಪತ್ರೆಯ ಮೆಡಿಕಲ್ ಶಾಪ್ ನವ್ರಿಂದ ಅಮಾಯಕ ಜೀವಗಳು ಎಷ್ಟು ಬಲಿಯಾಗ್ತವೆ ಎಂಬುದಕ್ಕೆ ಇಂಥ ನಿದರ್ಶನಗಳೇ ಸಾಕ್ಷಿ. ಈ ಅಂಜಲಿ ಎಂಬ ಎರಡು ತಿಂಗಳ ಗರ್ಭಿಣಿ ಕಲಬುರಗಿಯ ಸಂಜೀವಿನಿ ಮೆಡಿಕಲ್ ಶಾಪ್ ನವ್ರಿಗೆ ವಿಚಾರಿಸಿದ್ರೆ ನಮ್ಮ ಬಳಿ ಮಾತ್ರೆ ಪಡೆದೇ ಇಲ್ಲ ಎನ್ನುವ ಉಢಾಪೆ ಉತ್ತರ ಕೊಡ್ತಾಯಿದ್ದಾರಂತೆ ಅಂಜಲಿ ಎಂಬ ಮಹಿಳೆ ಅಳಲು ತೋಡಿಕೊಂಡಿದ್ದಾಳೆ.
ಜಿಂಕೊವಿಟ್ ಮಾತ್ರೆಯಲ್ಲಿ ಹುಳುಗಳು ಪತ್ತೆ
ಕಲಬುರಗಿ ನಗರದ ಸಂಜೀವಿನಿ ಖಾಸಗಿ ಆಸ್ಪತ್ರೆಯ ಮೆಡಕಲ್ ಭೀಮಾ ದುರ್ಗಾ ಡ್ರಗ್ ಹೌಸ್ ಆ್ಯಂಡ್ ಜನರಲ್ ಸ್ಟೋರ್ ನಲ್ಲಿ ಜಿಂಕೊವಿಟ್ ಎಂಬ 15 ಮಾತ್ರೆಗಳನ್ನು ವೈದ್ಯರ ಸಲಹೆಯ ಮೇರೆಗೆ ಮೆಡಕಲ್ ನಲ್ಲಿ ತೆಗೆದುಕೊಂಡಿದ್ದಾರೆ. ಜಿಂಕೊವಿಟ್ ಎಂಬ ಮಾತ್ರೆಯಲ್ಲಿ ಇವತ್ತು ಮತ್ತೊಂದು ಮಾತ್ರೆಯನ್ನು ಸೇವಿಸುವಾಗ ಆರೆಂಜ್ ಬಣ್ಣದ ಮಾತ್ರೆಯಲ್ಲಿ ಕಪ್ಪು ಬಣ್ಣದ ಸಣ್ಣ ಸಣ್ಣ ಹುಳುಗಳು ಪತ್ತೆಯಾಗಿವೆ. ಈ ಮಾತ್ರೆಯು 18 ತಿಂಗಳು ಮಾತ್ರ ವ್ಯಾಲಿಡಿಟಿ ಹೊಂದಿದೆ, ಇದರಲ್ಲಿ ಈಗಾಗಲೇ 16 ತಿಂಗಳು ಮುಗಿದಿದ್ದು, ಎಕ್ಸಪರಿ ಡೇಟ್ ಮುಗಿಯುವ ಹಂತದಲ್ಲಿದಲ್ಲಿದ್ರು ಮೆಡಿಕಲ್ ಶಾಪ್ ನವ್ರು ಯಾಕೆ ಅದನ್ನು ಮಾರಾಟಕ್ಕಿಟ್ರು ಎಂಬ ಅನುಮಾನ ಕಾಡ್ತಿದೆ.