ಕೊಪ್ಪಳ‌ ಪಿಎಫ್ಐ ಜಿಲ್ಲಾಧ್ಯಕ್ಷ ಫಯಾಜ್ ವ್ಯವಹಾರ ನೋಡಿ ಬೆಚ್ಚಿಬಿದ್ದ ಪೊಲೀಸ್!

By Suvarna NewsFirst Published Sep 29, 2022, 8:16 PM IST
Highlights

ಕಳೆದ ವಾರದ ಹಿಂದೆ ಪಿಎಫ್ಐ ಸಂಘಟನೆಯ ಕೊಪ್ಪಳ‌ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್ ನನ್ನು ಬಂಧನ ಮಾಡಲಾಗಿತ್ತು. ಇದೀಗ ತನಿಖೆ ನಡೆಸಿರುವ ಪೊಲೀಸರು ಕೆಲವು ವಿಚಾರ ತಿಳಿದು ಬೆಚ್ಚಿ ಬಿದ್ದಿದ್ದಾರೆ. 

ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಸೆ.29): ಕಳೆದ ವಾರದ ಹಿಂದೆ ಪಿಎಫ್ಐ ಸಂಘಟನೆಯ ಕೊಪ್ಪಳ‌ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್ ನನ್ನು ಬಂಧನ ಮಾಡಲಾಗಿತ್ತು. ಇದಾದ ಬಳಿಕ ಪೊಲೀಸರು ತನಿಖೆ ಆರಂಭ ಮಾಡಿದ್ದು, ತನಿಖೆಯಲ್ಲಿ ಗೋತ್ತಾದ ಹಲವಾರು ವಿಷಯಗಳು ಪೊಲೀಸರನ್ನು ಬೆಚ್ಚಿ ಬಿಳಿಸಿವೆ. ಕೊಪ್ಪಳ ಜಿಲ್ಲೆಯ ಗಂಗಾವತಿ ನಗರದ ನಿವಾಸಿ ಈ ಅಬ್ದುಲ್ ಫಯಾಜ್. ನಿಷೇಧಿತ ಪಿಎಫ್ಐ ಸಂಘಟನೆಯ ಕೊಪ್ಪಳ‌ ಜಿಲ್ಲಾಧ್ಯಕ್ಷನಾಗಿರುವ ಈ ಅಬ್ದುಲ್ ಫಯಾಜ್ ನನ್ನು ಕಳೆದ ವಾರ ಪುಲಕೇಶಿನಗರ ಪೊಲೀಸ್ ಠಾಣೆಯ ಪೊಲೀಸರು ಕೆ ಜೆ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಬಂಧನ ಮಾಡಿ ಕರೆದುಕೊಂಡು ಹೋಗಿದ್ದಾರೆ. ಇನ್ನು ಪಿಎಫ್ಐ ಸಂಘಟನೆಯ ಕೊಪ್ಪಳ ಜಿಲ್ಲಾಧ್ಯಕ್ಷನಾಗಿರುವ ಗಂಗಾವತಿಯ ಅಬ್ದುಲ್ ಫಯಾಜ್  ಕ ಜಿಲ್ಲಾದ್ಯಕ್ಷನ ಬ್ಯಾಂಕ್ ಅಕೌಂಟ್ ನೋಡಿ  ಪೊಲೀಸರು ದಂಗಾಗಿದ್ದಾರೆ ಎನ್ನಲಾಗಿದೆ.‌ ಇನ್ನು ಅಬ್ದುಕ್ ಫಯಾಜ್ ಐದಾರು ಬ್ಯಾಂಕ್ ಗಳಲ್ಲಿ ಖಾತೆ ಹೊಂದಿದ್ದಾ‌ನೆ ಎನ್ನಲಾಗಿದೆ. ಫಯಾಜ್ ಕೆನರಾ ಬ್ಯಾಂಕ್, ಎ ಚ್ ಡಿ ಎಫ್ ಸಿ, ಐಸಿಐಸಿಐ, ಎಸ್ ಬಿ ಐ ಹಾಗೂ ಇಂಡಿಯನ್ ಬ್ಯಾಂಕ್ ಗಳಲ್ಲಿ ಅಕೌಂಟ್ ಹೊಂದಿದ್ದಾನೆ ಎನ್ನುವುದು ಪೊಲೀಸರ ತನಿಖೆ ವೇಳೆ ಗೋತ್ತಾಗಿದೆ. ಇನ್ನು ಪಿ ಎಫ್ ಐ ಸಂಘಟನೆಯ ಬಂಧಿತ ಕೊಪ್ಪಳ ಜಿಲ್ಲಾಧ್ಯಕ್ಷ ಅಬ್ದುಲ್ ಫಯಾಜ್ ಏನೋ ದೊಡ್ಡಮಟ್ಟದ ಕೆಲಸ‌ವಾಗಲಿ ಅಥವಾ ವ್ಯವಹಾರವಾಗಲಿ ಮಾಡುವುದಿಲ್ಲ. ಬದಲಾಗಿ 15 ರಿಂದ 20 ಸಾವಿರ ಸಂಬಳ ಪಡೆಯುವ ಬಜಾಜ್ ಫೈನಾನ್ಸ್ ಎನ್ನುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾನೆ.‌

ನಿಷೇಧಿತ ಸಿಮಿ ಸಂಘಟನೆ ನಾಯಕರಿಂದ ಹುಟ್ಟಿದ ಪಿಎಫ್ಐ ಬ್ಯಾನ್, 2017ರಲ್ಲಿ ನೀಡಿತ್ತು ವರದಿ!

ಹಣದ ವ್ಯವಹಾರ ನೋಡ ಬೆಚ್ಚಿಬಿದ್ದ ಪೊಲೀಸರು
ಇನ್ನು ಪಿಎಫ್ಐನ ಜಿಲ್ಲಾದ್ಯಕ್ಷ  ಅಬ್ದುಲ್ ಫಯಾಜ್ ನ ಅಕೌಂಟ್ ಗಳ ಮೂಲಕ ಲಕ್ಷ ಲಕ್ಷ ಹಣ ವರ್ಗಾವಣೆ ಆಗಿರೋದು ನೋಡಿ ಸ್ವತಃ ಪೊಲೀಸರೇ ದಂಗಾಗಿದ್ದಾರೆ.ಯಾವಾಗ ಈತನನ್ನು ಕೆ ಜೆ ಹಳ್ಳಿ ಪ್ರಕರಣದಲ್ಲಿ ಪುಲಕೇಶಿ ನಗರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದರೋ ಆಗ  ಕೊಪ್ಪಳ ಜಿಲ್ಲೆಯ 50ಕ್ಕೂ ಹೆಚ್ಚು ಬ್ಯಾಂಕ್ ಗಳಿಗೆ ನೋಟೀಸ್ ನೀಡಿದ್ದರು. ಈ ವೇಳೆ ಅಬ್ದುಲ್ ಫಯಾಜ್ ನ ಬ್ಯಾಂಕ್ ವ್ಯವಹಾರದ ಕುರಿತು ಮಾಹಿತಿ ನೀಡಿದಾಗ ಫಯಾಜ್ ನ ವ್ಯವಹಾರ ನೋಡಿ ಪೊಲೀಸರು ಬೆಚ್ಚಿಬಿದ್ದಿದ್ದಾರೆ.

 

Chikkamagaluru; ಎಸ್‌ಡಿಪಿಐ ಹಾಗೂ ಪಿಎಫ್ಐ ಕಚೇರಿಗಳ ಮೇಲೆ ಏಕ ಕಾಲದಲ್ಲಿ ಪೊಲೀಸರ ದಾಳಿ

ಇನ್ನು ಅಬ್ದುಲ್ ಫಯಾಜ್ ಖಾಸಗಿ ಫೈನಾನ್ಸ್ ಸಂಸ್ಥೆಯಲ್ಲಿ ಕೆಲಸ ಮಾಡಿ ಲಕ್ಷಾಂತರ ಹಣ ಹೇಗೆ ವರ್ಗಾವಣೆ ಮಾಡಲು ಸಾಧ್ಯ ಎನ್ನುವ ಪ್ರಶ್ನೆ ಇದೀಗ ಪೊಲೀಸರನ್ನು ಕಾಡುತ್ತಿದೆ. ಹಣ ವರ್ಗಾವಣೆ ಕಂಡು ಪೊಲೀಸ್ ಇಲಾಖೆ ದಂಗಾಗಿದ್ದು, ಅನಾಮಧೇಯ ಕಡೆಗಳಿಂದ ಹಣ ವರ್ಗಾವಣೆ ಆಗಿರುವ ಶಂಕೆ ವ್ಯಕ್ತವಾಗಿದೆ. ಸೂಕ್ತ ಪೊಲೀಸರ ತನಿಖೆಯಿಂದಷ್ಟೇ ಸತ್ಯ ಬಹಿರಂಗವಾಗಬೇಕಿದೆ.

click me!