ಕೇಂದ್ರ ಸರ್ಕಾರದ ಕ್ರಮ ಖಂಡಿಸುವವರು ದೇಶದ್ರೋಹಿಗಳು: ಕೇಂದ್ರ ಸಚಿವ ಖೂಬಾ

Published : Sep 29, 2022, 09:30 PM IST
ಕೇಂದ್ರ ಸರ್ಕಾರದ ಕ್ರಮ ಖಂಡಿಸುವವರು ದೇಶದ್ರೋಹಿಗಳು: ಕೇಂದ್ರ ಸಚಿವ ಖೂಬಾ

ಸಾರಾಂಶ

ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಹಾಗೂ ಅವುಗಳ ಅಂಗಸಂಸ್ಥೆಗಳನ್ನು ನಿಷೇಧಿಸಿರುವ ಕ್ರಮವನ್ನು  ಸ್ವಾಗತಿಸಿದ ಕೇಂದ್ರ ಸಚಿವ ಭಗವಂತ ಖೂಬಾ

ಬೀದರ್‌(ಸೆ.29):  ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆ ಹಾಗೂ ಅವುಗಳ ಅಂಗಸಂಸ್ಥೆಗಳನ್ನು ನಿಷೇಧಿಸಿರುವ ಕ್ರಮವನ್ನು ಕೇಂದ್ರ ಸಚಿವ ಭಗವಂತ ಖೂಬಾ ಸ್ವಾಗತಿಸಿದ್ದಾರೆ ಹಾಗೂ ಕೇಂದ್ರ ಸರ್ಕಾರದ ಈ ಕ್ರಮವನ್ನು ತಿರಸ್ಕರಿಸುವವರು ಹಾಗೂ ಖಂಡಿಸುವವರು ದೇಶದ್ರೋಹಿಗಳಿಗೆ ಸಮವೆಂದು ಸಚಿವರು ಹೇಳಿದರು.

ಈ ಕುರಿತು ಪ್ರಕಟಣೆ ನೀಡಿ, ಪಿಎಫ್‌ಐ ಹಾಗೂ ಎಸ್‌ಡಿಪಿಐ ಸಂಘಟನೆಗಳು ಮಾಡಿರುವ ಪಾಪ, ದೇಶದ್ರೋಹ, ಕೋಮು ಸೌಹಾರ್ದತೆ ಹಾಳು ಮಾಡುವ ಕೆಲಸಗಳಿಗೆ ಬ್ರೇಕ್‌ ಹಾಕಿರುವ ಕೇಂದ್ರ ಸರ್ಕಾರದ ಕ್ರಮಕ್ಕೆ ಶ್ಲಾಘಿಸಿದ್ದಾರೆ. ಇದೊಂದು ಅತ್ಯಂತ ಅವಶ್ಯಕವಾಗಿರುವ ನಿರ್ಧಾರವಾಗಿದೆ. ಇವರ ಪುಂಡಾಟಿಕೆಯಿಂದ ಎಷ್ಟೋ ಹಿಂದೂ ಯುವಕರ ಹತ್ಯೆಯಾಗಿವೆ. ಈ ಕ್ರಮದಿಂದ ಆ ಎಲ್ಲಾ ಯುವಕರ ಆತ್ಮಕ್ಕೆ ಶಾಂತಿ ದೊರೆತಿದೆ ಎಂದಿದ್ದಾರೆ.

ಕೇಂದ್ರ ಸಚಿವ ಭಗವಂತ, ಶಾಸಕ ಸಲಗರ ಮಧ್ಯೆ ಗಲಾಟೆ: ಖೂಬಾ ಕಾರು ಜಖಂ

ಈ ಸಂಘಟನೆಗಳು ನಿರುದ್ಯೋಗಿ ಅಮಾಯಕ ಯುವಕರನ್ನ ತನ್ನ ಸಂಘಟನೆಗೆ ಸೇರಿಸಿಕೊಂಡು ಅವರನ್ನು ದೇಶದ್ರೋಹದ ಕೆಲಸಕ್ಕೆ ಬಳಸಿಕೊಳ್ಳುತ್ತಿದೆ ಇದಕ್ಕೆ ಇಂದು ನಮ್ಮ ಸರ್ಕಾರ ಅಂತ್ಯ ಹಾಡಿದೆ. ಈ ಸಂಘಟನೆಗಳಿಗೆ ಮನುಷ್ಯತ್ವದ ಬೆಲೆ ಗೊತ್ತಿರಲಿಲ್ಲ. ಎಷ್ಟೋ ಕುಟುಂಬಗಳು ಕಣ್ಣಿರಲ್ಲಿ ಕೈತೊಳೆಯುತ್ತಿವೆ. ಇಂತಹ ಸಂಘಟನೆಗಳಿಗೆ ಹಿಂದಿನಿಂದಲೂ ಬೆಂಬಲ ನೀಡುತ್ತಿದ್ದದ್ದೂ ಕಾಂಗ್ರೆಸ್‌ ಎಂದು ಆರೋಪಿಸಿದ್ದಾರೆ.

ಈ ಎರಡು ಸಂಘಟನೆಗಳನ್ನು ನಿಷೇಧಿಸಿ, ದೇಶದ ಭದ್ರತೆಗೆ ಧಕ್ಕೆ ಬಂದಲ್ಲಿ ಯಾವುದೇ ಕ್ರಮಕ್ಕೂ ಸಿದ್ದವೆನ್ನುವ ಸಂದೇಶವನ್ನು ಮತ್ತೊಮ್ಮೆ ದೇಶದ ಜನತೆಗೆ ನೀಡಿ, ದೇಶದ ಜನತೆಯಲ್ಲಿ ಧೈರ್ಯ ತುಂಬಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಗೃಹ ಸಚಿವರಾದ ಅಮಿತ ಷಾ ಅವರಿಗೆ ಸಚಿವ ಖೂಬಾ ಧನ್ಯವಾದಗಳನ್ನು ತಿಳಿಸಿದ್ದಾರೆ.
 

PREV
Read more Articles on
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಮೈಸೂರಿನ ಪುಟ್ಟ ರಾಜಕುಮಾರನ ಹುಟ್ಟುಹಬ್ಬ: ವಿಶೇಷ ಫೋಟೊಗಳನ್ನು ಶೇರ್ ಮಾಡಿದ ಮಹಾರಾಣಿ