ಸರಾಯಿಗೆ ದಾಸರಾದ ಪತಿರಾಯರು: ಕಳ್ಳಬಟ್ಟಿ ವಿರುದ್ಧ ಮಹಿಳೆಯರ ಉಗ್ರ ಪ್ರತಿಭಟನೆ

By Suvarna News  |  First Published Jul 4, 2022, 7:54 PM IST

ಹಾವೇರಿ: ಕಳಬಟ್ಟಿ ತಡೆಗೆ ಆಗ್ರಹಿಸಿ ಹಾವೇರಿ ತಾಲೂಕು ಮರಡೂರು ಗ್ರಾಮದ ಮಹಿಳೆಯರು  ಪ್ರತಿಭಟನೆ ನಡೆಸಿದರು


ಹಾವೇರಿ: ಕಳಬಟ್ಟಿ ತಡೆಗೆ ಆಗ್ರಹಿಸಿ ಹಾವೇರಿ ತಾಲೂಕು ಮರಡೂರು ಗ್ರಾಮದ ಮಹಿಳೆಯರು  ಪ್ರತಿಭಟನೆ ನಡೆಸಿದರು. ಗಂಡಸರ ಕುಡಿತದಿಂದಾಗಿ ತವರು‌ ಮನೆಯವರು ಕೊಟ್ಟ ಓಲೆ , ಒಡವೆಗಳನ್ನು ಈಗಾಗಲೇ ಮಾರಿದ್ದೇವೆ. ಊರಿನಲ್ಲಿ  ಅಕ್ರಮವಾಗಿ ಸಾರಾಯಿ ಮಾರಾಟ ಮಾಡ್ತಿದ್ದಾರೆ. ನಮ್ಮ ಮನೆಯ ಗಂಡಸರೆಲ್ಲಾ ಸಾರಾಯಿಗೆ ದಾಸರಾಗಿದ್ದಾರೆ. ಇದನ್ನು ಪ್ರಶ್ನಿಸಿದರೆ ನಿಮ್ಮ ಗಂಡನನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಿ ಅಂತಾರೆ. ಹೀಗಂತ ಗ್ರಾಮದಲ್ಲಿ ಅಕ್ರಮ ಮದ್ಯ ಮಾರಾಟದಿಂದ ಬದುಕಿನ ನೆಮ್ಮದಿ ಕಳೆದುಕೊಂಡ ನೊಂದ ಮಹಿಳೆಯರ ಕಣ್ಣೀರು  ಹಾಕ್ತಿದ್ದಾರೆ.

ಹಾವೇರಿ ತಾಲೂಕು ಮರಡೂರು ಗ್ರಾಮದ ಮಹಿಳೆಯರು  ಮದ್ಯ ಮಾರಾಟ ವಿರೋಧಿಸಿ ಇಂದು ಪ್ರತಿಭಟನೆ ನಡೆಸಿದರು. ಮದ್ಯ ಮಾರಾಟ ನಿಷೇಧ ಮಾಡುವಂತೆ ನೊಂದ ಮಹಿಳೆಯರು ಆಗ್ರಹಿಸಿದರು. ಹಾಲಗಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರೋ‌ ಮರಡೂರು ಗ್ರಾಮದ 20 ಕ್ಕೂ ಹೆಚ್ಚು ಮಹಿಳೆಯರು, ಗ್ರಾಮ ಪಂಚಾಯತಿ ‌ಪಿಡಿಒ, ತಹಸೀಲ್ದಾರ್ ಸೇರಿದಂತೆ ‌ ಹಲವು ಅಧಿಕಾರಿಗಳಿಗೆ ಮದ್ಯ ನಿಷೇಧ ಮಾಡುವಂತೆ ಮಹಿಳೆಯರು ಮನವಿ ಮಾಡಿದರು‌. ಹಾಲಗಿ ಗ್ರಾಮ ಪಂಚಾಯತಿ ಮುಂದೆ ಪ್ರತಿಭಟನೆ ನಡೆಸಿ‌ ಪಿಡಿಒಗೆ ಮನವಿ ಮಾಡಿದರು 

Tap to resize

Latest Videos

undefined

Bagalkote: ರಂಗನಾಥ ಸ್ವಾಮಿಗೆ ಇಲ್ಲಿ ಸಾರಾಯಿ ನೈವೇದ್ಯ: ಮದ್ಯ ನೈವೇದ್ಯ ಸಲ್ಲಿಸಿ ಕೃತಾರ್ಥರಾಗ್ತಾರೆ ಭಕ್ತವೃಂದ

ಮರಡೂರು ಗ್ರಾಮದಲ್ಲಿ  ಸುಮಾರು 12 ಕಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡ್ತಿದ್ದಾರೆ. ಗಂಡಸರು ದಿನವಿಡೀ ದುಡಿದ ಹಣವನ್ನೆಲ್ಲಾ ಸಾರಾಯಿಗೆ ಖರ್ಚು ಮಾಡ್ತಿದ್ದಾರೆ. ತಮ್ಮ ಗಂಡಂದಿರ ಆರೋಗ್ಯ ಸಂಪೂರ್ಣ ಹಾಳಾಗ್ತಿದೆ. ಅವರು ಮನೆಯಲ್ಲಿರೋ ವಸ್ತುಗಳನ್ನು ಸಹ ಮಾರಿ ಮದ್ಯ ಸೇವನೆ ಮಾಡ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು ಅಂತ ಮಹಿಳೆಯರು ಆಗ್ರಹಿಸಿದರು.

ಬೆಳಗಾವಿ: ಸಾರಾಯಿ ತರಲು ನದಿಗೆ ಹಾರಿದ ಭೂಪ, ಕುಡುಕನ ಹುಚ್ಚಾಟಕ್ಕೆ ಗ್ರಾಮಸ್ಥರು ಸುಸ್ತೋ ಸುಸ್ತು..!
 

click me!