ಎತ್ತಿಲ್ಲದಿದ್ದರೇನು ಗತ್ತಿನ ಟಗರುಗಳಿವೆ: ಹಾವೇರಿಯಲ್ಲಿ ಹೊಲ ಉಳುಮೆ ಮಾಡೊ ಜೋಡಿ ಟಗರು

By Anusha Kb  |  First Published Jul 4, 2022, 7:35 PM IST

 ವ್ಯವಸಾಯ ಕೆಲಸಗಳಿಗೆ ರೈತರು ಸಾಮಾನ್ಯವಾಗಿ ಎತ್ತುಗಳನ್ನು, ಕೆಲವೊಮ್ಮೆ ಕೋಣಗಳನ್ನು ಬಳಸಿಕೊಂಡು ಭೂಮಿಯನ್ನು ಉಳುಮೆ ಮಾಡಿ ಬೇಸಾಯ ಮಾಡುವುದನ್ನು ನೋಡಿರುತ್ತೇವೆ. ಇನ್ನೂ ಕೆಲವು ರೈತರು ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣಗಳನ್ನು ಬಳಸಿ ಉಳುಮೆ ಮಾಡುತ್ತಾರೆ. ಆದರೆ ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದ ರೈತರೋರ್ವರು ಕೃಷಿ ಕಾರ್ಯಕ್ಕೆ ಟಗರುಗಳನ್ನು ಬಳಸುತ್ತಿದ್ದಾರೆ.


ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್ ಹಾವೇರಿ ‌

ಹಾವೇರಿ(ಜುಲೈ 4): ವ್ಯವಸಾಯ ಕೆಲಸಗಳಿಗೆ ರೈತರು ಸಾಮಾನ್ಯವಾಗಿ ಎತ್ತುಗಳನ್ನು, ಕೆಲವೊಮ್ಮೆ ಕೋಣಗಳನ್ನು ಬಳಸಿಕೊಂಡು ಭೂಮಿಯನ್ನು ಉಳುಮೆ ಮಾಡಿ ಬೇಸಾಯ ಮಾಡುವುದನ್ನು ನೋಡಿರುತ್ತೇವೆ. ಇನ್ನೂ ಕೆಲವು ರೈತರು ಟ್ರ್ಯಾಕ್ಟರ್ ಮತ್ತು ಕೃಷಿ ಉಪಕರಣಗಳನ್ನು ಬಳಸಿ ಉಳುಮೆ ಮಾಡುತ್ತಾರೆ. ಆದರೆ ಜಿಲ್ಲೆಯ ಸವಣೂರು ತಾಲೂಕಿನ ಜಲ್ಲಾಪುರ ಗ್ರಾಮದ ರೈತರೋರ್ವರು ಕೃಷಿ ಕಾರ್ಯಕ್ಕೆ ಟಗರುಗಳನ್ನು ಬಳಸುತ್ತಿದ್ದಾರೆ.

Latest Videos

undefined

ಜಲ್ಲಾಪುರದ ಶೇಖಪ್ಪ ಕುರುಬರ ಎಂಬ ರೈತ ತಮ್ಮ ಒಂದೂವರೆ ಎಕರೆ ಜಮೀನಿನ ವ್ಯವಸಾಯ ಕೆಲಸಗಳಿಗೆ ತಾವು ಸಾಕಿರುವ ಕನಕ ಮತ್ತು ರಾಯಣ್ಣ ಹೆಸರಿನ ಟಗರುಗಳನ್ನು ಬಳಕೆ ಮಾಡುತ್ತಿದ್ದಾರೆ. ಟಗರುಗಳನ್ನು ಬಳಸಿ ಜಮೀನು (Farm) ಉಳುತ್ತಿರುವ ರೈತ ತನ್ನ ಒಂದೂವರೆ ಎಕರೆಯಲ್ಲಿ ಸೋಯಾಬಿನ್ (Soybean) ಬೆಳೆ ಹಾಕಿರುವ ರೈತ ಜಮೀನಿನಲ್ಲಿ ಕಳೆ ಇಲ್ಲದಂತೆ ಎಡೆಕುಂಟಿ ಹೊಡೆಯಲು ಟಗರುಗಳನ್ನು ಬಳಕೆ ಮಾಡುತ್ತಿದ್ದಾರೆ.

ಕುರಿ ಕಾಳಗದ ಸ್ಫರ್ಧೆಯಲ್ಲಿ ಗೆಲುವಿನ ಓಟ ತಡೆಯಲು ಟಗರು‌ ಕದ್ದ ಕಳ್ಳರು, ಮಟನ್ ಸ್ಟಾಲ್‌ನಲ್ಲಿ ಪತ್ತೆ

ಕಳೆದ 9 ತಿಂಗಳ ಹಿಂದೆ ಕುರುಬರ ದೊಡ್ಡಿಯಲ್ಲಿ ಈ ಟಗರುಗಳನ್ನು ತಲಾ  6500 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಈ ಟಗರುಗಳನ್ನು ಶೇಖಪ್ಪ  ತಮ್ಮ ಮಕ್ಕಳಂತೆ ಸಾಕಿದ್ದು, ಅವುಗಳಿಗೆ ಬೇಕಾದ ಹಿಂಡಿ, ಬೂಸಾ, ಸೊಪ್ಪು  ಮೊದಲಾದ ಪೌಷ್ಟಿಕ ಆಹಾರಗಳನ್ನು ನೀಡುತ್ತಾರೆ. ಆರಂಭದಲ್ಲಿ ಚಿಕ್ಕ ಬಂಡಿಗೆ ಟಗರುಗಳನ್ನು ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ. ಆ ಮೇಲೆ ನೀರು ತರುವ ಬಂಡಿಯನ್ನು ಕುರಿಗಳಿಗೆ ಕಟ್ಟಿ ಅಭ್ಯಾಸ ಮಾಡಿಸಿದ್ದಾರೆ.

ಈ ನಡುವೆ ತನ್ನ ಒಂದೂವರೆ ಎಕರೆ ಜಮೀನು ಎಡೆಕುಂಟಿ ಹೊಡೆಯಲು ಬೇರೆಯವರಲ್ಲಿ ಎತ್ತುಗಳನ್ನು ಕೇಳಿದ್ದಾರೆ. ಆದರೆ ಕಡಿಮೆ ಜಮೀನು ಇರುವುದಕ್ಕೆ ಯಾರು ಶೇಖಪ್ಪರಿಗೆ ಎತ್ತುಗಳನ್ನು ನೀಡಿಲ್ಲ. ಇದರಿಂದ ವಿಚಲಿತನಾಗದ ಶೇಖಪ್ಪರಿಗೆ ಕಣ್ಣಿಗೆ ಬಿದ್ದಿದ್ದು ತಮ್ಮದೇ ಟಗರುಗಳು. ಈಗಾಗಲೇ ನೀರಿನ ಬಂಡಿ ಮತ್ತು ಚಿಕ್ಕ ಬಂಡಿಗೆ ಕಟ್ಟಿ ಅಭ್ಯಾಸವಾಗಿದ್ದ ಟಗರುಗಳನ್ನು ಉಳುಮೆಗೆ ಬಳಸಲು ಮುಂದಾಗಿದ್ದಾರೆ.

Mandya ಬರೋಬ್ಬರಿ 1.91 ಲಕ್ಷಕ್ಕೆ ಟಗರು ಮಾರಾಟ : ದಾಖಲೆ ಸೃಷ್ಟಿ

ಟಗರುಗಳಿಗೆ(Goay)  ಅನುಕೂಲವಾಗುವಂತೆ ನೊಗ ಸಿದ್ಧಪಡಿಸಿ ಶೇಖಪ್ಪ ಅವರು ಹೊಲದಲ್ಲಿ ಎಡೆಕುಂಟಿ ಹೊಡೆಯಲು ಮುಂದಾಗಿದ್ದಾರೆ. ಮೊದಲೇ ಅಭ್ಯಾಸವಾಗಿದ್ದ ಟಗರುಗಳು ಎತ್ತಿನಂತೆ ಎಡೆಕುಂಟಿ ಹೊಡೆಯಲು ರೈತನಿಗೆ ಸಹಾಯ (Help) ಮಾಡಿವೆ. ಶೇಖಪ್ಪನ (Shekhappa) ಉಪಾಯ ಸುತ್ತಮುತ್ತಲಿನ ರೈತರಿಗೆ ಆಶ್ಚರ್ಯ ತಂದಿದೆ. ಟಗರುಗಳು ಎತ್ತಿನಂತೆ ರೈತನಿಗೆ ಸಹಕಾರ ನೀಡಿವೆ. ವ್ಯವಸಾಯದ (Farming) ಕೆಲಸಗಳಿಗೆ ಟಗರುಗಳನ್ನು ಬಳಸಬಹುದು ಎನ್ನುವ ವಿನೂತನ ಸಾಧ್ಯತೆಯನ್ನು ಟಗರುಗಳನ್ನು ಬಳಸಿ ವ್ಯವಸಾಯ ಮಾಡುವ ಮೂಲಕ ತೋರಿಸಿರುವ ಶೇಖಪ್ಪ ಕುರುಬರ ಸಣ್ಣ-ಪುಟ್ಟ ರೈತರಿಗೆ ಮಾದರಿಯಾಗಿದ್ದಾರೆ.
 

click me!